ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು 8 ದಿನ ರದ್ದು

ಶಿವಮೊಗ್ಗ, ಜೂನ್ 10 : ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ರೈಲ್ವೆ ವಿಭಾಗ ಮೈಸೂರು ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲಿನ ಸಂಚಾರ 8 ದಿನಗಳ ಕಾಲ ರದ್ದಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಲಯ ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲವು ರೈಲುಗಳು ತಡವಾಗಿ ಸಂಚಾರ ನಡೆಸಲಿವೆ.

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲಿನ ಸಂಚಾರನ್ನು 8 ದಿನಗಳ ಕಾಲ ರದ್ದು ಮಾಡಲಾಗಿದೆ ಎಂದು ಮೈಸೂರು ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ-ಯಾವ ದಿನ ರೈಲು ಸಂಚಾರ ನಡೆಸುವುದಿಲ್ಲ ಎಂಬ ಪಟ್ಟಿ ಇಲ್ಲಿದೆ.

South Western Railway Mysuru Division cancelled several trains

ರೈಲುಗಳ ರದ್ದು

* ರೈಲು ಸಂಖ್ಯೆ 56227 : ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ಜೂನ್ 16 ರಿಂದ 23ರ ತನಕ

* ರೈಲು ಸಂಖ್ಯೆ 56228 : ಶಿವಮೊಗ್ಗ ಟೌನ್- ಬೆಂಗಳೂರು ಪ್ಯಾಸೆಂಜರ್ ಜೂನ್ 17 ರಿಂದ 24ರ ತನಕ

ಭಾಗಶಃ ರದ್ದು

* ರೈಲು ಸಂಖ್ಯೆ 56270 ಮೈಸೂರು-ಶಿವಮೊಗ್ಗ ಜೂನ್ 16 ರಿಂದ 23 ಮೈಸೂರು ಬದಲು ಬೆಳಗುಳದಿಂದ ಸಂಚಾರ ಆರಂಭಿಸಲಿದೆ.

* ರೈಲು ಸಂಖ್ಯೆ 56269 ಶಿವಮೊಗ್ಗ-ಮೈಸೂರು ಜೂನ್ 16 ರಿಂದ 23ರ ತನಕ ಮೈಸೂರು ರೈಲ್ವೆ ನಿಲ್ದಾಣದ ಬದಲು ಬೆಳಗುಳದ ತನಕ ಪ್ರಯಾಣ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+