ಶಿವಮೊಗ್ಗ ಆಟೋ ಚಾಲಕರ ಕಿರುಕುಳ ತಪ್ಪಿಸಲು ಬಂತು 'ಆಟೋ ಮಿತ್ರ'

ಶಿವಮೊಗ್ಗ ಮೇ 29 : ಆಟೋ ಚಾಲಕರ ಕಿರುಕುಳ ತಪ್ಪಿಸಲು ಶಿವಮೊಗ್ಗ ಜಿಲ್ಲಾ ಪೊಲೀಸರು 'ಆಟೋಮಿತ್ರ' ಎಂಬ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ ಪೊಲೀಸ್ ಇಲಾಖೆ ಮತ್ತಷ್ಟು ಜನಸ್ನೇಹಿಯಾಗಿದೆ.

ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಅಪ್ಲಿಕೇಶನ್ ಬಿಡುಗಡೆ ಮಾಡಿದರು. 'ಪ್ರಯಾಣದ ಸಮಯದಲ್ಲಿ ಆಟೋ ಚಾಲಕರು ಅಸಭ್ಯವಾಗಿ ವರ್ತಿಸಿದರೆ, ಹೆಚ್ಚಿನ ದರಕ್ಕೆ ಬೇಡಿಕೆ ಇಟ್ಟರೆ, ಬಾಡಿಗೆ ಬರಲು ನಿರಾಕರಿಸಿದಲ್ಲಿ ಪ್ರಯಾಣಿಕರು ಕೂಡಲೇ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲು ಅವಕಾಶವಿದೆ' ಎಂದರು.

'ಈ ಆ್ಯಪ್‍ನ ಅನುಷ್ಠಾನದಿಂದಾಗಿ ಪೊಲೀಸ್ ಇಲಾಖೆ ಇನ್ನಷ್ಟು ಜನಸ್ನೇಹಿಯಾಗಿದೆ. ಈಗಾಗಲೇ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಸುಮಾರು 3,500ಆಟೋ ಚಾಲಕರ ಹೆಸರು, ವಿಳಾಸ, ಮೊಬೈಲ್ ನಂ., ಭಾವಚಿತ್ರ ಮುಂತಾದ ವಿವರಗಳನ್ನು ಸಂಗ್ರಹಿಸಿ, ಬಾರ್‍ಕೋಡ್ ಹಾಗೂ ಸಂಖ್ಯೆ ಹೊಂದಿರುವ ಮಾಹಿತಿ ಫಲಕವನ್ನು ವಿತರಿಸಲಾಗಿದೆ' ಎಂದು ಹೇಳಿದರು.

Shivamogga police launch Auto Mitra mobile application

'ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಎಸ್.ಎಂ.ಎಸ್., ವಾಟ್ಸಾಪ್, ಫೇಸ್‍ಬುಕ್ ಮತ್ತು ಇ-ಮೇಲ್‍ಗಳ ಮೂಲಕ ಆಟೋ ಚಾಲಕರ ವಿವರಗಳನ್ನು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬ ವರ್ಗದವರೊಂದಿಗೆ ಹಂಚಿಕೊಳ್ಳಬಹುದಾಗಿದೆ' ಎಂದು ತಿಳಿಸಿದರು.

'ಆಟೋ ಚಾಲಕರ ಮೇಲೆ ಅಡ್ಡಾದಿಡ್ಡಿ ಚಾಲನೆ, ಅಸಭ್ಯ ವರ್ತನೆ ಮುಂತಾದ ವಿಷಯಗಳ ಕುರಿತು ದೂರುಗಳು ಬಂದಲ್ಲಿ ಅಂತಹ ಆಟೋ ಚಾಲಕರ ಮೇಲೆ ಇಲಾಖಾ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಆ್ಯಪ್‍ನ್ನು ಬಳಸಿಕೊಂಡು ಸುರಕ್ಷಿತ ಪ್ರಯಾಣ ಮಾಡಬಹುದಾಗಿದೆ' ಎಂದು ಅವರು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+