ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಶಿವಮೊಗ್ಗದಲ್ಲಿ ವಿರೋಧ

ಶಿವಮೊಗ್ಗ, ಮೇ 23: ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಶಿವಮೊಗ್ಗದಲ್ಲಿ ವಿರೋಧ ವ್ಯಕ್ತವಾಗಿದೆ. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ವಿರೋಧಿಸಿದ್ದಾರೆ.

Recommended Video

      BJP ಗ್ರಾಮ ಪಂಚಾಯಿತಿ ವಿಚಾರದಲ್ಲಿ ಹುನ್ನಾರ ಮಾಡುತ್ತಿದೆ | Oneindia kannada

      ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಿಂದ ಚುನಾವಣೆ ಆರು ತಿಂಗಳು ಮುಂದೂಡಿದಕ್ಕೆ ಹಾಗೂ ಹೊಸ ಆಡಳಿತ ಸಮಿತಿ ರಚನೆಗೆ ವಿರೋಧ ವ್ಯಕ್ತವಾಗಿದೆ. ನಮ್ಮ ಹಕ್ಕನ್ನು ಕಸಿದುಕೊಳ್ಳಲು ಸರ್ಕಾರ ಹೂಡಿರುವ ಹೊಸ ತಂತ್ರ ಇದು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

      ಚುನಾವಣೆ ನಡೆಸಿ ಇಲ್ಲವಾದರೆ ನಮ್ಮನ್ನೇ ಮುಂದುವರೆಸಿ ಎಂದು ಒತ್ತಾಯ ಮಾಡಿದ್ದಾರೆ. ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಸರ್ಕಾರ ತಮ್ಮ ನಿರ್ಧಾರ ಕೈ ಬಿಡದೆ ಇದರೆ, ಜಿಲ್ಲೆಯಾದ್ಯಂತ ಹೋರಾಟಕ್ಕೆ ಸಿದ್ಧ ಎಂದಿದ್ದಾರೆ.

      Shivamogga: Marashettihalli Gram Panchayat Members Opposed to Postpone of Elections

      ಕೊರೊನಾದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಕ್ಕೆ ಹಾಕಲು ಸರ್ಕಾರ ಹೊರಟಿದೆ. ಇದನ್ನು ಕಾಂಗ್ರೆಸ್‌ ಪಕ್ಷ ವಿರೋಧಿಸಿದೆ. ಬಿಜೆಪಿ ಸದ್ಯದ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದಿದ್ದಾರೆ.

      ''ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಮಾರ್ಚ್ 7, 2020 ರಂದೇ ರಾಜ್ಯ ಸರ್ಕಾರಕ್ಕೆ ಹೇಳಿದೆ. ಆದರೆ, ಸರ್ಕಾರ ಕೋವಿಡ್-19 ರ ಹಿನ್ನೆಲೆ ಚುನಾವಣೆ ಮುಂದೂಡುವುದಾಗಿ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಆಯೋಗಕ್ಕೆ ಕಳುಹಿಸಿದೆ. ಈ ಮೂಲಕ ಚುನಾವಣಾ ಆಯೋಗದ ಕೈ ಕಟ್ಟಿಹಾಕುವ ಪ್ರಯತ್ನ ಮಾಡಿದೆ.'' ಎಂದು ಡಿಕೆ ಶಿವಕುಮಾರ್ ಬೇಸರ ಹೊರಹಾಕಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+