ಶಿವಮೊಗ್ಗ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ
ಶಿವಮೊಗ್ಗ, ಸೆ. 22 : ಶಿವಮೊಗ್ಗ ದಸರಾ ಚಲನಚಿತ್ರೋತ್ಸವಕ್ಕೆ ಚಲನಚಿತ್ರ ನಟ ಸುಂದರ ರಾಜ್ ಇಂದು ಚಾಲನೆ ನೀಡಿದರು.
ಶಿವಮೊಗ್ಗ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ನಡೆದ ಉದ್ಘಾಟನೆ ಸಮಾರಂಭದಲ್ಲಿ ಕಾಫಿ ತೋಟ ಚಿತ್ರದ ನಾಯಕಿ ರಾಕಾ ಚೇತನ್, ಚಲನಚಿತ್ರ ನಿರ್ಮಾಪಕ ರಾಮ ನಾಯಕ್, ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ಮೇಯರ್ ಏಳುಮಲೈ ಬಾಬು ಸೇರಿದಂತೆ ವಿವಿಧ ಜನಪ್ರತಿನಿಗಳು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಉಚಿತ ಪ್ರದರ್ಶನ : ದಸರಾ ಚಲನಚಿತ್ರೋತ್ಸವದಲ್ಲಿ ಸೆ. 22 ರಿಂದ 27ರವರೆಗೆ ಪ್ರತಿದಿನ ಬೆಳಗ್ಗೆ 10.30ಕ್ಕೆ ನಗರದ ವಿವಿಧ ಚಿತ್ರಮಂದಿರಗಳಲ್ಲಿ ಉಚಿತ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಪ್ರದರ್ಶನಗೊಳ್ಳುವ ಚಿತ್ರಗಳು : ಸೆ.22ಕ್ಕೆ ಲಿಫ್ಟ್ ಮ್ಯಾನ್-ಮಲ್ಲಿಕಾರ್ಜುನ ಚಿತ್ರಮಂದಿರ.
ಸೆ.23ಕ್ಕೆ ಓಂ-ಲಕ್ಷ್ಮೀ ಚಿತ್ರಮಂದಿರ,
ಸೆ.24ಕ್ಕೆ ಕಸ್ತೂರಿ ನಿವಾಸ-ಶ್ರೀ ಮಂಜುನಾಥ ಚಿತ್ರ ಮಂದಿರ,
ಸೆ.25ಕ್ಕೆ ಒಂದು ಮೊಟ್ಟೆಯ ಕಥೆ-ಮಾರ್ಡನ್ ಚಿತ್ರ ಮಂದಿರ,
ಸೆ.26ಕ್ಕೆ ಅಲ್ಲಮ-ಎಚ್.ಪಿ.ಸಿ ಚಿತ್ರಮಂದಿರ,
ಸೆ.27ಕ್ಕೆ ಮನ ಮಂಥನ-ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
****

ಬನ್ನಿ ಮುಡಿಯುವ ಸ್ಥಳಕ್ಕೆ ಗುದ್ದಲಿ ಪೂಜೆ
ಶಿವಮೊಗ್ಗದಲ್ಲಿ ಸೆ.30ರಂದು ಬನ್ನಿ ಮುಡಿಯುವ ಉತ್ಸವ ನಡೆಯುವ ಎನ್‌ಇಎಸ್ ಮೈದಾನದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಏಳುಮಲೈ, ಆಯುಕ್ತ ಮುಲ್ಲೈ ಮುಹಿಲನ್ ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಬನ್ನಿ ಉತ್ಸವ : ಮೈಸೂರು ಬಿಟ್ಟರೇ ಶಿವಮೊಗ್ಗ ದಸರಾ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದು, ಮೈಸೂರು ದಸರಾ ಮಾದರಿಯಲ್ಲಿಯೇ ಶಿವಮೊಗ್ಗ ದಸರಾವನ್ನು ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸೆ.30 ರಂದು ಸಂಜೆ 6.15ಕ್ಕೆ ಬನ್ನಿ ಮುಡಿಯುವ ಉತ್ಸವ ನಡೆಯಲಿದೆ.

ವಿಶೇಷ ಆಕರ್ಷಣೆ : ಬನ್ನಿ ಮುಡಿಯುವ ಉತ್ಸವಕ್ಕೂ ಮುನ್ನ ಅಂದು ಮಧ್ಯಾಹ್ನ 2.30ರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಲಂಕೃತ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯಲ್ಲಿ ಹಂಸ ನೃತ್ಯ, ಕರಡಿ ಮಜಲು, ಕೀಲು ಕುದುರೆ, ಡೊಳ್ಳುಕುಣಿತ, ವೀರಗಾಸೆ, ನಂದಿಕೋಲು, ನವಿಲು ಟ್ಯಾಬ್ಲೋ, ಕೇರಳ ಚಂಡೆ, ಯಕ್ಷಗಾನ ವೇಷ ನಡೆಯಲಿದ್ದು, ವಿವಿಧ ಕಲಾ ತಂಡಗಳು ಆಗಮಿಸಿ ಮೆರವಣಿಗೆ ಮತ್ತಷ್ಟು ಮೆರಗು ನೀಡಲಿವೆ.

ರಾವಣ ದಹನ : ಶಿವಮೊಗ್ಗ ತಹಸೀಲ್ದಾರ್ ಜಿ.ಪಿ.ಮಂಜೇಗೌಡ ಅಂಬು ಕಡಿಯಲಿದ್ದು, ನಂತ ಅತ್ಯಾಕರ್ಷಕ ಪಟಾಕಿ, ರಾವಣ ದಹನ ನಡೆಯಲಿದೆ.












Click it and Unblock the Notifications