Shivamogga Airport: ಮಲೆನಾಡಿಗೆ ಹಾರುವ ವಿಮಾನದ ಎಲ್ಲ ಟಿಕೆಟ್‌ಗಳು ಬುಕ್, ದರದ ವಿವರ ತಿಳಿಯಿರಿ
ಶಿವಮೊಗ್ಗ, ಆಗಸ್ಟ್ 08: ಮೆಲೆನಾಡು ಭಾಗದ ಮೊದಲ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ. ವಿಮಾನ ಕಾರ್ಯಾಚರಣೆಗೆ ಸರ್ಕಾರ ಮಹೂರ್ತ ನಿಗದಿ ಮಾಡುತ್ತಿದ್ದಂತೆ ವಿಮಾನಗಳ ಟಿಕೆಟ್ ಬುಕ್ಕಿಂಗ್‌ಗೆ ಸ್ಫರ್ಧೆ ಏರ್ಪಟ್ಟಿದೆ. ಹೆಚ್ಚಿನ ಹಣಕ್ಕೆ ಟಿಕೆಟ್‌ಗಳ ಬುಕ್ಕಿಂಗ್ ಆಗಿದೆ.
ಆಗಸ್ಟ್ 31ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳು ಹಾರಾಟ ಆರಂಭಿಸಲಿವೆ. ಬೋಯಿಂಗ್ ವಿಮಾನಗಳು ಬಂದು ಲ್ಯಾಂಡ್ ಆಗುವಂತೆ ವಿಶಾಲವಾಗಿ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ರನ್ ವೇ ವಿಸ್ತೀರ್ಣ ಸಹ ವಿಸ್ತರಿಸಲಾಗಿದೆ. ಈ ವಿಮಾನ ನಿಲ್ದಾಣ ಕರ್ನಾಟಕ ಸಕಾರದಿಂದ ನಿರ್ವಹಣೆಯಾಗುತ್ತಿರುವ ಮೊದಲ ವಿಮಾನ ನಿಲ್ದಾಣವಾಗಿದೆ.

ಇತ್ತೀಚೆಗೆ ವಿಮಾನ ಹಾರಾಟ ಕುರಿತು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕೃತ ದಿನಾಂಕ ಪ್ರಕಟಿಸಿದ ಕೆಲವೇ ದಿನಗಳಲ್ಲೇ ಭಾನುವಾರ ಆಗಸ್ಟ್ 8ರಂದು ಒಂದು ಸೀಟಿನ ದರ 14,767 ರೂಪಾಯಿಗೆ ನಿಗದಿ ಆಗಿದೆ. ಶಿವಮೊಗ್ಗ-ರಾಜಧಾನಿಗೆ ವಿಮಾನ ಟಿಕೆಟ್ ಬೆಲೆ 2,699 ರೂಪಾಯಿ ನಿಗದಿ ಆಗಿದ್ದರೂ ಸಹಿತ ಬಹುತೇಕ ಸೀಟುಗಳು ಬುಕ್ಕಿಂಗ್ ಆಗಿವೆ.
ಜುಲೈ ಕೊನೆ ವಾರದಿಂದಲೇ ಟಿಕೆಟ್ ಬುಕ್
ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನಯಾನಕ್ಕೆ ಅನುಮತಿ ದೊರೆತ ಬಳಿಕ ಕಳೆದ ಜುಲೈ 26 ರಿಂದಲೇ ಟಿಕೆಟ್ ಬುಕ್‌ಗೆ ಅಕವಾಶ ಕಲ್ಪಿಸಿತು. ಅಂದಿನಿಂದಲೇ ಬುಕ್ಕಿಂಗ್ ಆರಂಭವಾಗಿದ್ದು, ಸ್ಪರ್ಧೆಮಟ್ಟದಲ್ಲಿ ಮೊದಲ ದಿನವೇ 4000 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಸದ್ಯ ಇಂಡಿಗೋ ಟಿಕೆಟ್ ದರ 7300 ರೂಪಾಯಿ ವರೆಗೆ ಏರಿಕೆ ಕಂಡಿದೆ. ಇನ್ನೂ ಸಹ ಟಿಕೆಟ್ ಬುಕ್ಕಿಂಗ್ ಮುಂದುವರಿದಿದೆ.

ಕೇವಲ ಆಗಸ್ಟ್ ಕೊನೆ ದಿನ ಇಲ್ಲವೇ ಸೆಪ್ಟಂಬರ್ ಮೊದಲ ವಾರ ಮಾತ್ರವಲ್ಲದೇ ಆ ತಿಂಗಳ ಅನೇಕ ದಿನಗಳ ವಿಮಾನ ಪ್ರಯಾಣದ ಟಿಕೆಟ್‌ಗಳು ಬುಕ್ಕಿಂಗ್ ಆಗಿವೆ. ಸೆಪ್ಟಂಬರ್ 1 ರಂದು 8, 3 ರಂದು 12, 4 ರಂದು 7 ಆಸನಗಳುನ್ನು ಕಾಯ್ದಿರಿಸಲಾಗಿದೆ ಎಂದು ವರದಿ ಮಾಡಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮಲೆನಾಡಿಗರು ತಮ್ಮ ಊರಿಗೆ ವಿಮಾನದಲ್ಲಿ ತೆರಳಲು ಉತ್ಸುಕರಾಗಿದ್ದಾರೆ. ಅವರು ಸಹ ಟಿಕೆಟ್ ಬುಕ್ ಮಾಡಿದ್ದಾರೆ. ಇನ್ನೂ ಸಹ ಜನರು ಟಿಕೆಟ್‌ಗೆ ಮುಗಿಬಿದ್ದಿದ್ದಾರೆ ಎಂದು ವರದಿ ಆಗಿದೆ. ಇಂಡಿಯೋ ವಿಮಾನದ (78 ಸೀಟು) ಬಹುತೇಕ ಸೀಟು ಬುಕ್ ಆಗಿವೆ.












Click it and Unblock the Notifications