ಮಲೆನಾಡಿನಲ್ಲಿ ಹೆಚ್ಚಿದ ಮಳೆ; ಜಿಲ್ಲೆಯ ಜಲಾಶಯಗಳ ಮಟ್ಟವೆಷ್ಟು?
ಶಿವಮೊಗ್ಗ, ಸೆಪ್ಟೆಂಬರ್ 9: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 79.20 ಮಿ.ಮೀ. ಮಳೆಯಾಗಿದ್ದು, ಸರಾಸರಿ 11.31 ಮಿ.ಮೀ. ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 158.25 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 18.60 ಮಿ.ಮೀ., ಭದ್ರಾವತಿ 26.20 ಮಿ.ಮೀ., ಸಾಗರ 02.80 ಮಿ.ಮೀ., ಶಿಕಾರಿಪುರ 20.00 ಮಿ.ಮೀ., ಸೊರಬ 9.40 ಮಿ.ಮೀ. ಹಾಗೂ ಹೊಸನಗರ 2.20 ಮಿ.ಮೀ. ಮಳೆಯಾಗಿದೆ. ತೀರ್ಥಹಳ್ಳಿ ಆಗುಂಬೆ ಭಾಗದಲ್ಲಿ ಮಳೆಯ ಪ್ರಮಾಣ ಅತೀ ಹೆಚ್ಚಾಗಿದ್ದು, ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿ 12 ಟನ್ ಗೂ ಅಧಿಕ ತೂಕದ ವಾಹನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ)
* ಲಿಂಗನಮಕ್ಕಿ: 1819 (ಗರಿಷ್ಠ), 1807.75 (ಇಂದಿನ ಮಟ್ಟ), 7185.00 (ಒಳಹರಿವು), 3750.95 (ಹೊರಹರಿವು)
* ಭದ್ರಾ: 186 (ಗರಿಷ್ಠ), 184.10 (ಇಂದಿನ ಮಟ್ಟ), 5645.00 (ಒಳಹರಿವು), 2069.00 (ಹೊರಹರಿವು)
* ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 6987.00 (ಒಳಹರಿವು), 6987.00 (ಹೊರಹರಿವು)
* ಮಾಣಿ: 595 (ಎಂಎಸ್ಎಲ್ ಗಳಲ್ಲಿ), 586.32 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 196 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).
* ಪಿಕ್ಅಪ್: 563.88 (ಎಂಎಸ್ಎಲ್ ಗಳಲ್ಲಿ), 561.63 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 1196 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ ಗಳಲ್ಲಿ).
* ಚಕ್ರ: 580.57 (ಎಂ.ಎಸ್.ಎಲ್ ಗಳಲ್ಲಿ), 571.50 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 0.00 (ಒಳಹರಿವು), 702 (ಹೊರಹರಿವು ಕ್ಯೂಸೆಕ್ ಗಳಲ್ಲಿ).
* ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ ಗಳಲ್ಲಿ), 574.98 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 264.00 (ಒಳಹರಿವು), 799.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).












Click it and Unblock the Notifications