Dam Water Level: ಇಂದು ಸುರಿದ ಮಳೆ ಪ್ರಮಾಣ ಮತ್ತು ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
ಶಿವಮೊಗ್ಗ, ಜೂನ್ 14 : ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿರುತ್ತಿದೆ. ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಜೂನ್ 17 ರವರೆಗೆ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಇನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 28.00 ಮಿಮಿ ಮಳೆಯಾಗಿದೆ.

ಶಿವಮೊಗ್ಗದಲ್ಲಿ 24 ಗಂಟೆಯಲ್ಲಿ 28.00 ಮಿಮಿ ಮಳೆ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 28.00 ಮಿಮಿ ಮಳೆಯಾಗಿದ್ದು, ಸರಾಸರಿ 4.00 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 336.69 ಮಿಮಿ ಇದ್ದು, ಇದುವರೆಗೆ ಸರಾಸರಿ 107.79 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗದಲ್ಲಿ 02.70 ಮಿಮಿ., ಭದ್ರಾವತಿ 04.00 ಮಿಮಿ., ತೀರ್ಥಹಳ್ಳಿ 8.40 ಮಿಮಿ., ಸಾಗರ 2.90 ಮಿಮಿ., ಶಿಕಾರಿಪುರ 01.40 ಮಿಮಿ., ಸೊರಬ 02.80 ಮಿಮಿ. ಹಾಗೂ ಹೊಸನಗರ 5.80 ಮಿಮಿ. ಮಳೆಯಾಗಿದೆ. ಇನ್ನು, ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟದ ವಿವರಗಳು ಇಲ್ಲಿವೆ.
ಶಿವಮೊಗ್ಗದ ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಡ್ಯಾಮ್: 1819 (ಗರಿಷ್ಠ), 1745.70 (ಇಂದಿನ ಮಟ್ಟ), 2375.00 (ಒಳಹರಿವು), 1701.95 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1742.95.
ಭದ್ರಾ ಡ್ಯಾಮ್: 186 (ಗರಿಷ್ಠ), 118.8 (ಇಂದಿನ ಮಟ್ಟ), 1916.00 (ಒಳಹರಿವು), 342.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 137.30.
ತುಂಗಾ ಡ್ಯಾಮ್: 588.24 (ಗರಿಷ್ಠ), 588.05 (ಇಂದಿನ ಮಟ್ಟ), 2735.00 (ಒಳಹರಿವು), 2735.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 584.19.

ಮಾಣಿ ಡ್ಯಾಮ್: 595 (ಎಂಎಸ್ಎಲ್ಗಳಲ್ಲಿ), 572.22 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 133 (ಒಳಹರಿವು), 717.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 569.90 (ಎಂಎಸ್‍ಎಲ್‌ಗಳಲ್ಲಿ).
ಪಿಕ್‍ಅಪ್ ಡ್ಯಾಮ್: 563.88 (ಎಂಎಸ್ಎಲ್ಗಳಲ್ಲಿ), 561.44 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 947 (ಒಳಹರಿವು), 997.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.24 (ಎಂಎಸ್‍ಎಲ್‌ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 565.56 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 161.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 563.88 (ಎಂಎಸ್‍ಎಲ್‌ಗಳಲ್ಲಿ).
ಸಾವೆಹಕ್ಲು ಡ್ಯಾಮ್: 583.70 (ಗರಿಷ್ಠ ಎಂಎಸ್‍ಎಲ್‌ಗಳಲ್ಲಿ), 572.00 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 572.00 (ಎಂಎಸ್‍ಎಲ್‌ಗಳಲ್ಲಿ).












Click it and Unblock the Notifications