ಏಪ್ರಿಲ್ 3ರಂದು ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಶಿವಮೊಗ್ಗ, ಮಾರ್ಚ್ 30 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ.3ರಂದು ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ. ನಗರದಲ್ಲಿ ರೋಡ್ ಶೋ ನಡೆಸಿ ಅವರು 2018ರ ಚುನಾವಣೆ ಪ್ರಚಾರ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಏ.3ರಂದು ಬೆಳಗ್ಗೆ 11ಗಂಟೆಗೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದಾರೆ.

ಶಿವಮೊಗ್ಗ ಬಸ್ ನಿಲ್ದಾಣದಿಂದ ಗೋಪಿ ಸರ್ಕಲ್ ತನಕ ರಾಹುಲ್ ಗಾಂಧಿ ಅವರು ರೋಡ್ ಶೋ ನಡೆಸಲಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣ-ಶಿವಪ್ಪ ನಾಯಕ ವೃತ್ತ-ನೆಹರೂ ರಸ್ತೆ ಮೂಲಕ ರೋಡ್ ಶೋ ಗೋಪಿ ಸರ್ಕಲ್ ತಲುಪಲಿದೆ. ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಹುಲ್ ಗಾಂಧ ಭಾಷಣ ಮಾಡಲಿದ್ದಾರೆ.
ಸಮಯದ ಅಭಾವವಿರುವ ಕಾರಣ ರಾಹುಲ್ ಗಾಂಧಿ ಅವರು ಸಮಾವೇಶವನ್ನು ನಡೆಸುತ್ತಿಲ್ಲ. ಶಿವಮೊಗ್ಗದಿಂದ ರಾಹುಲ್ ಗಾಂಧಿ ಅವರು ತುಮಕೂರಿಗೆ ತೆರಳಲಿದ್ದಾರೆ.












Click it and Unblock the Notifications