ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಟ್ರಾಕ್ಟರ್ ಕಳ್ಳತನ!

ಶಿವಮೊಗ್ಗ, ಫೆಬ್ರವರಿ 03: ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗೆ ಸೇರಿದ ಹೊಸ ಟ್ರಾಕ್ಟರ್ ರಾತ್ರೋರಾತ್ರಿ ನಾಪತ್ತೆಯಾದ ಘಟನೆ ನಡೆದಿದೆ. ಪಟ್ಟಣ ಪಂಚಾಯಿತಿ ಖರೀದಿ ಮಾಡಿದ್ದ ಟ್ರಾಕ್ಟರ್ ನೋಂದಣಿಯನ್ನು ಸಹ ಮಾಡಿಸಿರಲಿಲ್ಲ.

ಪಟ್ಟಣ ಪಂಚಾಯಿತಿ ಘನ ತ್ಯಾಜ್ಯ ನಿರ್ವಹಣೆಗಾಗಿ ಹೊಸದಾಗಿ ಟ್ರಾಕ್ಟರ್ ಖರೀದಿ ಮಾಡಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಪಟ್ಟಣ ಪಂಚಾಯಿತಿಯ ಜಲ ಶುದ್ಧೀಕರಣ ಘಟಕದ ಆವರಣದಲ್ಲಿ ಅದನ್ನು ನಿಲ್ಲಿಸಲಾಗಿತ್ತು.

ಆದರೆ, ಜನವರಿ 30ರ ರಾತ್ರಿ ಟ್ರಾಕ್ಟರ್ ನಾಪತ್ತೆಯಾಗಿದೆ. ಪಟ್ಟಣ ಪಂಚಾಯಿತಿ 5.50 ಲಕ್ಷ ರೂಪಾಯಿ ನೀಡಿ ಟ್ರಾಕ್ಟರ್ ಖರೀದಿ ಮಾಡಿತ್ತು. ಜನವರಿ 30ರ ರಾತ್ರಿ 9 ಗಂಟೆ ಹೊತ್ತಿಗೆ ಕಳ್ಳತನವಾಗಿದೆ.

New Tractor Belongs To Shiralakoppa Town Panchayat Missing

ಅಚ್ಚರಿಯ ಸಂಗತಿ ಎಂದರೆ ಮರುದಿನ ಸಂಜೆ ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಧಿಕಾರಿಗಳು ಈ ಕುರಿತು ದೂರು ನೀಡಲು ಮತ್ತೊಂದು ದಿನ ವಿಳಂಬ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಜೆಇ ಒಂದು ದಿನ ತಡವಾಗಿ ದೂರು ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ದೂರು ನೀಡಲಾಗಿದೆ. ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+