ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ ಲೈನ್ ವಂಚನೆ ಪ್ರಕರಣ; ಎಂಇಪಿ ಅಧ್ಯಕ್ಷೆ ನೌಹೀರ ಶೇಖ್ ಶಿವಮೊಗ್ಗ ಪೊಲೀಸ್ ಕಸ್ಟಡಿಗೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 29: ಆನ್ ಲೈನ್ ನಲ್ಲಿ ಹಣ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಅಧ್ಯಕ್ಷೆ ಹಾಗೂ ಹೀರಾ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷೆ ನೌಹೀರಾ ಶೇಖ್ ಅವರನ್ನು ಶಿವಮೊಗ್ಗ ಸಿಇಎನ್ ಪೊಲೀಸರು ವಶಪಡಿಸಿಕೊಂಡು ಶಿವಮೊಗ್ಗಕ್ಕೆ ಕರೆತಂದಿದ್ದಾರೆ.

ಈಚೆಗಷ್ಟೆ ಆರ್ಥಿಕ ಅವ್ಯವಹಾರಗಳ ಆರೋಪದ ಮೇಲೆ ನೌಹೀರಾ ಶೇಖ್ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರು.

 3,000 ಕೋಟಿ ರು ವಂಚನೆ ಪ್ರಕರಣ, ನೌಹೀರಾ ಶೇಖ್ ವಿರುದ್ಧ ಎಫ್ಐಆರ್ 3,000 ಕೋಟಿ ರು ವಂಚನೆ ಪ್ರಕರಣ, ನೌಹೀರಾ ಶೇಖ್ ವಿರುದ್ಧ ಎಫ್ಐಆರ್

"ಆನ್ ಲೈನ್ ಮೂಲಕ ಹಣ ವಂಚಿಸಿರುವ 20ಕ್ಕೂ ಹೆಚ್ಚು ಪ್ರಕರಣಗಳು ಇವರ ವಿರುದ್ಧ ದಾಖಲಾಗಿದೆ. ಈ ಸಂಬಂಧ ಹೈದರಾಬಾದ್ ನಿಂದ ಶಿವಮೊಗ್ಗಕ್ಕೆ ಕರೆತರಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Nawhera Shaikh Under Police Custody

ಶಿವಮೊಗ್ಗದ ಮಂಜುನಾಥ ಬಡಾವಣೆ ನಿವಾಸಿ ಮಹ್ಮದ್ ಅತೀಕ್ ನೌಹೀರಾ ವಿರುದ್ಧ ದೂರು ದಾಖಲಿಸಿದ್ದಾರೆ. ಹೀರಾ ಗ್ರೂಪ್ ಕಂಪನಿಗೆ ಒಟ್ಟು 25 ಲಕ್ಷ ಹಣವನ್ನು ಹೂಡಿಕೆ ಮಾಡಿದ ಮಹ್ಮದ್ ಅವರಿಗೆ ಕೆಲ ತಿಂಗಳು ಶೇಕಡಾ 3ರಂತೆ ಲಾಭಾಂಶ ದೊರೆತಿದೆ. ನಂತರ ಲಾಭಾಂಶ ಬಾರದೆ ವಂಚಿಸಿರುವುದು ತಿಳಿದಾಗ ನಗರದ ಸಿ.ಈ.ಎನ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ವಂಚನೆ ಪ್ರಕರಣದಲ್ಲಿ ಎಂಇಪಿ ಅಧ್ಯಕ್ಷೆ ನೌಹೀರಾ ಶೇಖ್ ಬಂಧನವಂಚನೆ ಪ್ರಕರಣದಲ್ಲಿ ಎಂಇಪಿ ಅಧ್ಯಕ್ಷೆ ನೌಹೀರಾ ಶೇಖ್ ಬಂಧನ

ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ಮುಂದುವರಿಸಲಾಗುವುದು.

English summary
Chairperson of the Women Empowerment Party and the Founding Chairman of the Heera Group, Nawhera Shaikh, was arrested in connection with the online money laundering case and she is under police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X