ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕೃಷಿಭಾಗ್ಯ

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 26 : ಒಣಭೂಮಿ ಹೊಂದಿರುವ ರೈತರು ಬೆಳೆ ಬೆಳೆಯಲು ಮಳೆಯನ್ನು ನಂಬಿಕೊಂಡಿದ್ದಾರೆ. ಆದರೆ, ಸಕಾಲಕ್ಕೆ ಮಳೆ ಬಾರದೆ ರೈತರ ಜೀವನ ನಿರ್ವಹಣೆ ತ್ರಾಸದಾಯಕವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆ ಹಂಗಾಮಿನಲ್ಲಿ ಹೆಚ್ಚುತ್ತಿರುವ ಬರದಿಂದಾಗಿ ಮಳೆಯಾಶ್ರಿತ ಕೃಷಿಯು ಅನಿಶ್ಚಿತವಾಗಿದೆ.

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ, ಮಳೆ ಪ್ರಮಾಣದ ಏರಿಳಿತಗಳ ಅರಿವು ರೈತ ಸಮುದಾಯಕ್ಕೆ ಇಲ್ಲದಿರುವುದರಿಂದ ಆರ್ಥಿಕ ನಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆಯು ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವ ಉದ್ದೇಶದಿಂದ ವಿವಿಧ ಗಾತ್ರದ ಕೃಷಿಹೊಂಡವನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಿದೆ.

ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ

ಕೃಷಿ ಇಲಾಖೆಯು ಇದೇ ಮೊದಲ ಬಾರಿಗೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿಯೂ ಕೃಷಿಹೊಂಡಗಳನ್ನು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 700ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ 95ಹೊಂಡಗಳನ್ನು ನಿರ್ಮಿಸಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿನ ಕಥೆಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿನ ಕಥೆ

ಕೃಷಿ ಹೊಂಡಗಳಿಂದ ಸಂಭವಿಸಬಹುದಾದ ಆಕಸ್ಮಿಕ ಅವಘಡಗಳನ್ನು ತಪ್ಪಿಸಲು ಹೊಂಡದ ಸುತ್ತಲು ಬೇಲಿ ನಿರ್ಮಾಣ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕೂ ಸಹ ರೈತರಿಗೆ ಸಹಾಯಧನವನ್ನು ನೀಡಲಾಗುತ್ತದೆ...

ಕೊಪ್ಪಳ : ಪಶುಭಾಗ್ಯ ಯೋಜನೆಯಿಂದ ನೆಮ್ಮದಿ ಕಂಡ ಕುಟುಂಬಕೊಪ್ಪಳ : ಪಶುಭಾಗ್ಯ ಯೋಜನೆಯಿಂದ ನೆಮ್ಮದಿ ಕಂಡ ಕುಟುಂಬ

ಮಳೆ ನೀರು ಸಂಗ್ರಹಣೆ

ಮಳೆ ನೀರು ಸಂಗ್ರಹಣೆ

ರೈತರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುವುದರಿಂದ ನೀರಿನ ಸಂಗ್ರಹವಾಗಲಿದೆ. ಇದರಿಂದ ಬಿದ್ದ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದೆ ಸಂಗ್ರಹಣೆ ಮಾಡಬಹುದಾಗಿದೆ. ಬೆಳೆಗಳ ಸಂದಿಗ್ಧ ಸಂದರ್ಭದಲ್ಲಿ ಸಮರ್ಪಕವಾಗಿ ಅದನ್ನು ಬಳಸಿಕೊಂಡು ಉತ್ತಮ ಬೆಳೆ ನಿರೀಕ್ಷಿಸಬಹುದಾಗಿದೆ.

ರೈತರ ಪಾಲಿಗೆ ವರದಾನ

ರೈತರ ಪಾಲಿಗೆ ವರದಾನ

ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವುದರಿಂದ ಅನೇಕ ಲಾಭಗಳಿವೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಕೃಷಿ ಹೊಂಡ ರೈತರಪಾಲಿಗೆ ವರದಾನವಾಗಿವೆ. ಭೂಮಿಯಲ್ಲಿ ಅಂತರ್ಜಲ ಮಟ್ಟದ ಹೆಚ್ಚಾಗಲಿದೆ. ಅಲ್ಲದೇ ಸುತ್ತಮುತ್ತಲ ವಾತಾವರಣ ತಂಪಾಗಿಡುವಲ್ಲಿ ಸಹಕಾರಿಯಾಗಲಿದೆ. ಮಣ್ಣಿನ ತೇವಾಂಶ ಕಾಯ್ದುಕೊಂಡು ಬೆಳೆಗಳ ಸಮೃದ್ಧ ಇಳುವರಿಗೆ ಅನುಕೂಲವಾಗಲಿದೆ.

ಮಲೆನಾಡು, ಕರಾವಳಿ ಜಿಲ್ಲೆಗಳಿಗೂ ಅವಕಾಶ

ಮಲೆನಾಡು, ಕರಾವಳಿ ಜಿಲ್ಲೆಗಳಿಗೂ ಅವಕಾಶ

ಕೃಷಿ ಇಲಾಖೆಯು ಕಳೆದ ಹಲವು ವರ್ಷಗಳಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ನೆರವು ನೀಡುತ್ತಿದೆ. ಈ ಯೋಜನೆಯ ಅನುಷ್ಟಾನದಿಂದಾಗಿ ಹೊಲಗಳಲ್ಲಿ ಮಳೆ ನೀರು ಸಂಗ್ರಹಿಸಲು ಅನುಕೂಲವಾಗಿದೆ. ಕೃಷಿಭಾಗ್ಯ ಯೋಜನೆಯಡಿ ಸದ್ಯ ಮಲೆನಾಡು, ಕರಾವಳಿ ಜಿಲ್ಲೆಗಳಿಗೂ ಅವಕಾಶ ನೀಡಲಾಗಿದೆ.

ಅವಘಡಗಳನ್ನು ತಪ್ಪಿಸಲು ಕ್ರಮ

ಅವಘಡಗಳನ್ನು ತಪ್ಪಿಸಲು ಕ್ರಮ

ಕೃಷಿ ಹೊಂಡಗಳಿಂದ ಸಂಭವಿಸಬಹುದಾದ ಆಕಸ್ಮಿಕ ಅವಘಡಗಳನ್ನು ತಪ್ಪಿಸಲು ಹೊಂಡದ ಸುತ್ತಲು ಬೇಲಿ ನಿಮಾಣ ಕಡ್ಡಾಯಗೊಳಿಸಲಾಗಿದೆ. ಹೀಗೆ ಬೇಲಿ ಹಾಕಿಕೊಳ್ಳುವವರಿಗೂ ಸಹ ಇಲಾಖಾ ವತಿಯಿಂದ ಶೇ.50ರಷ್ಟು ಸಹಾಯಧನ ನೀಡಲಾಗುತ್ತಿದೆ.

English summary
Karnataka Government introduced ‘Krishi Bhagya’ yojane for the benefit of rain-fed farmers in state. Shivamoga district administration had planned to develop 700 krishi honda under yojane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X