ಸಿದ್ದರಾಮಯ್ಯ ಸಂಬಂಧ ಭಾರತಕ್ಕಿಂತ ಇಟಲಿ ಜೊತೆ ಚೆನ್ನಾಗಿದೆ : ಯೋಗಿ ವ್ಯಂಗ್ಯ

ಶಿವಮೊಗ್ಗ, ಮೇ 03 : 'ಉತ್ತರ ಪ್ರದೇಶ ಮತ್ತು ಕರ್ನಾಟಕದ ನಡುವೆ ಪುರಾತನವಾದ ಸಂಬಂಧವಿದೆ. ಆದರೆ, ಸಿದ್ದರಾಮಯ್ಯ ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರ ಸಂಬಂಧ ಇಟಲಿ ಜೊತೆಗೆ ಹೆಚ್ಚಿದೆ' ಎಂದು ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸಲಿದ್ದಾರೆ. ಗುರುವಾರ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

Karnataka elections : Yogi Adityanath address elections campaign rally in Sagar

'ಉತ್ತರ ಪ್ರದೇಶ ಶ್ರೀರಾಮ ಹುಟ್ಟೂರು. ಶ್ರೀರಾಮನ ನಂಬಿಕಸ್ತ ಭಂಟ ಹನುಮಂತ ಕರ್ನಾಟಕದವನು. ಆದ್ದರಿಂದ ಕರ್ನಾಟಕದ ನೆಲಕ್ಕೆ ನಾನು ಭಕ್ತಿಯಿಂದ ನಮಿಸುತ್ತೇನೆ' ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಸಾಗರ ಕ್ಷೇತ್ರದಲ್ಲಿ ಹರತಾಳು ಹಾಲಪ್ಪ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಎಂ.ಬಿ.ಗಿರೀಶ್ ಗೌಡ ಅವರು ಅಭ್ಯರ್ಥಿಯಾಗಿದ್ದಾರೆ.

ಯೋಗಿ ಆದಿತ್ಯನಾಥ್ ಭಾಷಣರ ಮುಖ್ಯಾಂಶಗಳು

* ಉತ್ತರ ಮತ್ತು ದಕ್ಷಿಣವನ್ನು ಕೂಡಿಸುವ ಕೆಲಸ ಹಿಂದಿನಿಂದಲೂ ಸಾಗಿದೆ. ಆದಿಚುಂಚನಗಿರಿಯ ಕಾಲ ಭೈರವೇಶ್ವರ, ಕಾಶಿವ ವಿಶ್ವನಾಥ ಇಬ್ಬರೂ ಒಂದೇ. ಇಲ್ಲಿ ವಿಶ್ವನಾಥ ಕಾಲ ಭೈರವನ ರೂಪದಲ್ಲಿ ನೆಲೆಸಿದ್ದಾನೆ.

* ಕಾಂಗ್ರೆಸ್ ನಾಯಕರು ಈ ಅಂಶವನ್ನು ಅರ್ಥ ಮಾಡಿಕೊಂಡಿದ್ದರೆ ದೇಶವನ್ನು ಒಡೆಯುವ ಕೆಲಸ ಮಾಡುತ್ತಿರಲಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಅರ್ಥ ಮಾಡಿಕೊಂಡಿದ್ದರೆ ನಾನು ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಿರಲಿಲ್ಲ.

* ಕರ್ನಾಟಕ ಇಷ್ಟೊಂದು ಸಮೃದ್ಧವಾಗಿರುವಕ್ಕೆ ಕಾರಣ ಇಲ್ಲಿ ಗೋ ಸೇವೆ ನಡೆಯುತ್ತದೆ. ಗೋ ಮಾತೆಯ ರಕ್ಷಣೆ ನಡೆಯುತ್ತದೆ. ಗೋ ಸಂರಕ್ಷಣೆಗೆ ರಾಘವೇಶ್ವರ ಶ್ರೀಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು, ಅದು ದೇಶದ ತುಂಬಾ ಹಬ್ಬಬೇಕು.

* ಇಂದಿನ ಬಹಳ ದೊಡ್ಡ ಬೇಡಿಕೆ ಕಾಂಗ್ರೆಸ್ ಮುಕ್ತ ಕರ್ನಾಟಕ. ಇದು ಇಂದಿನ ತುರ್ತು ಅಗತ್ಯವಾಗಿದೆ. ಜನರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು.

* ಕಾಂಗ್ರೆಸ್ ಈ ದೇಶದಲ್ಲಿ ಇರುವ ತನಕ ಒವೈಸಿ ಮತ್ತು ಯಾಸಿನ್ ಭಟ್ಕಳ್ ನಂತರ ಜನರು ತಲೆ ಎತ್ತಿ ನಡೆಯುತ್ತಾರೆ. ದೇಶದ ಸುರಕ್ಷತೆಗೆ ಸವಾಲು ಒಡ್ಡುತ್ತಾರೆ. ಆದ್ದರಿಂದ, ನಾನು ನಿಮಗೆ ತಿಳಿ ಹೇಳಲು ಬಂದಿದ್ದೇನೆ.

* ಉತ್ತರ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಕರ್ನಾಟಕದ ಮಾದರಿಯ ಸರ್ಕಾರವಿತ್ತು. ಅದು ಜಿಹಾದಿಗಳನ್ನು ಬೆಂಬಲಿಸುತ್ತಿತ್ತು. ಕರ್ನಾಟಕದಲ್ಲಿಯೂ ಹಲವು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಸರ್ಕಾರ ದೇಶದ್ರೋಹಿಗಳ ಬೆಂಬಲಕ್ಕೆ ನಿಂತಿದೆ.

* ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಹಲವಾರು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾಂಗ್ರೆಸ್ ಸರ್ಕಾರದ ನೀತಿಗಳೇ ಕಾರಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+