Jog Falls: ಜೋಗ ಜಲಪಾತದಲ್ಲಿ ರಾಜ, ರಾಣಿ, ರೋರಲ್, ರಾಕೇಟ್ ಜೊತೆ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ-ವಿಡಿಯೋ ವೈರಲ್
ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಹಲವು ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಇನ್ನು ಕೆಲವು ಡ್ಯಾಂಗಳು ಭರ್ತಿಯಾಗುವ ಹಂಯವನ್ನು ತಲುಪಿವೆ. ಹಾಗೆಯೇ ಫಾಲ್ಸ್‌ಗಳು ಕೂಡ ಸಾಗರದಂತೆ ಮೇಲಿನಿಂದ ಧುಮ್ಮಿಕ್ಕುತ್ತಿವೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತದ ರಾಜ, ರಾಣಿ, ರೋರಲ್, ರಾಕೇಟ್ ಜೊತೆ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಎನ್ನುವ ನೀರಿನ ಸೆಲೆಗಳು ಹುಟ್ಟಿಕೊಂಡಿವೆ ಎನ್ನುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಪ್ರವಾಸಿ ತಾಣಗಳ ತವರೂರು ಅಂತಲೇ ಹೆಸರುವಾಸಿಯಾಗಿರುವ ಶಿವಮೊಗ್ಗ ಜಿಲ್ಲೆಯಿಂದ ಜೋಗ್ ಫಾಲ್ಸ್ 106.3 ಕಿಲೋ ಮೀಟರ್ ದೂರ ಆಗುತ್ತದೆ. ಬೆಂಗಳೂರಿನಿಂದ 402.4 ಕಿಲೋ ಮೀಟರ್ ದೂರ ಆಗುತ್ತಿದೆ. ಇನ್ನೂ ಕಳೆದ ವರ್ಷ ಅಂದರೆ 2023ರಲ್ಲಿ ಮುಂಗಾರು ಕೈಕೊಟ್ಟ ಕಾರಣ ಈ ಫಾಲ್ಸ್‌ಗೆ ನೀರಿನ ಹರಿವಿನ ಪ್ರಮಾಣ ತುಂಬಾ ಕಡಿಮೆಯಾಗಿತ್ತು.

ವಿಡಿಯೋ ಭಾರೀ ವೈರಲ್: ಆದರೆ, ಇದೀಗ 2024 ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಚುರುಕು ಪಡೆದಿದ್ದು, ಇದೀಗ ಫಾಲ್ಸ್‌ನಲ್ಲಿ ಬರೀ ರಾಜ, ರಾಣಿ, ರೋರಲ್, ರಾಕೇಟ್ ಜೊತೆಗೆ ಹೊಸದಾಗಿ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಹುಟ್ಟಿಕೊಂಡಿದ್ದಾರೆ ಎನ್ನುವ ವಿಡಿಯೋವೊಂದು ಸದ್ದು ಮಾಡುತ್ತಿದೆ.
ಫಾಲ್ಸ್‌ಗೆ ರಾಜ, ರಾಣಿ, ರೋರಲ್, ರಾಕೇಟ್ ಜೊತೆಗೆ ಹೊಸದಾಗಿ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ ಮಕ್ಕಳನ್ನು ಕೂಡ ಕೊರೆದುಕೊಂಡು ಬಂದಿವೆ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆರಾಯ ಆರ್ಭಟ ಮುಂದುರೆಸಿದ ಹಿನ್ನೆಲೆ ಇಲ್ಲಿನ ವಿಶ್ವಪ್ರಸಿದ್ಧ ತಾಣವಾದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಅಲ್ಲದೆ, ಸಾಗರ ರೂಪ ಪಡೆದಿದೆ. ಇನ್ನು ಈ ನೀರನ್ನು ಆಶ್ರಯಿಸಿದ್ದ ಜೀವಸಂಕುಲಗಳು, ಸರಿಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದಂತಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹಾಗೆಯೇ ಜೋಗ ಜಲಪಾತದ ಈ ವಿಡಿಯೋವೂ ಸಹ ಇದೀಗ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications