ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ
ಶಿವಮೊಗ್ಗ, ಸೆಪ್ಟೆಂಬರ್. 03: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಶಿವಮೊಗ್ಗದ 35 ವಾರ್ಡ್ ಗಳಲ್ಲಿ ಬಿಜೆಪಿ 20 ಸೀಟುಗಳನ್ನು ಗೆದ್ದು ಬಹುಮತ ಪಡೆದಿದೆ. ಬಹುಮತಕ್ಕೆ 18 ಸೀಟು ಬರಬೇಕಿದ್ದು, ಬಿಜೆಪಿ 20 ಸೀಟು ಪಡೆಯುವ ಮೂಲಕ ಬಹುಮತ ಸಾಬೀತುಪಡಿಸಿದೆ.
ಕಾಂಗ್ರೆಸ್ 7 , ಜೆಡಿಎಸ್ 2, ಎಸ್.ಡಿ.ಪಿ.ಐ 1, ಪಕ್ಷೇತರ 5 ಸ್ಥಾನ ಪಡೆದುಕೊಂಡಿದೆ.

ಕಳೆದಬಾರಿ ಶಿವಮೊಗ್ಗ ನಗರಸಭೆಯ ಅಧಿಕಾರವನ್ನು ಬಿಜೆಪಿ ಪಕ್ಷ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಹಿಡಿದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದವು.

ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರು ಪಕ್ಷಗಳೂ ಶತಾಯಗತಾಯ ಪ್ರಯತ್ನಿಸಿದ್ದವು. ಆಗಸ್ಟ್ 31 ರಂದು ನಡೆದ ಚುನಾವಣೆಯಲ್ಲಿ ಮತದಾರ ಯಾವ ಅಭ್ಯರ್ಥಿಗೆ ಹರಸಿ ಅಧಿಕಾರಕ್ಕೇರಿಸಲಿದ್ದಾನೆ ಎಂಬುದು ಇದೀಗ ಬಯಲಾಗಿದೆ.












Click it and Unblock the Notifications