ಶಿವಮೊಗ್ಗದಲ್ಲಿ ಮಳೆ ಆರ್ಭಟ; ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ಶಿವಮೊಗ್ಗ, ಆಗಸ್ಟ್‌ 05: ಜಿಲ್ಲೆಯಲ್ಲಿ ನಿನ್ನೆಯಿಂದಲೂ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ ಒಟ್ಟು 535.10 ಮಿ.ಮೀ. ಮಳೆಯಾಗಿದೆ. ಸರಾಸರಿ 76.44 ಮಿ.ಮೀ. ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 417.87 ಮಿ.ಮೀ. ಇದ್ದು, ಇದುವರೆಗೆ 106.75 ಮಿ.ಮೀ. ಮಳೆ ದಾಖಲಾಗಿದೆ.

ಶಿವಮೊಗ್ಗ 38.40 ಮಿ.ಮೀ, ಭದ್ರಾವತಿ 21.00 ಮಿ.ಮೀ, ತೀರ್ಥಹಳ್ಳಿ 104.40 ಮಿ.ಮೀ, ಸಾಗರ 55.60 ಮಿ.ಮೀ, ಶಿಕಾರಿಪುರ 12.60 ಮಿ.ಮೀ, ಸೊರಬ 92.30 ಮಿ.ಮೀ ಹಾಗೂ ಹೊಸನಗರ 210.40 ಮಿ.ಮೀ ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಜಿಲ್ಲೆಯ ಬಹುತೇಕ ಜಲಾಶಯಗಳು ಕೆರೆಕಟ್ಟೆಗಳು ನದಿಗಳು ತುಂಬಿ‌ ಹರಿಯುತ್ತಿದೆ. ಗಾಳಿ ಸಹಿತ‌ ಮಳೆ ಇರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮರಗಳು ಬಿದ್ದಿವೆ. ಒಂದೆಡೆ ಮಳೆ‌ ಇಲ್ಲ ಎಂದು ಕಾಯುತ್ತಿದ ರೈತರಿಗೆ ಈಗ ಒಂದೇ ದಿನದಲ್ಲಿ ಮಳೆ‌ ಹೆಚ್ಚಾಗಿದ್ದು ರೈತರಲ್ಲಿ ಆತಂಕ ಮನೆ‌ ಮಾಡಿದೆ.

Heavy Rain Report And Water Level Of Reservoirs In Shivamogga District

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1774.10 (ಇಂದಿನ ಮಟ್ಟ), 38428.00 (ಒಳಹರಿವು), 1320.20 (ಹೊರಹರಿವು).

ಭದ್ರಾ: 186 (ಗರಿಷ್ಠ), 154.30 (ಇಂದಿನ ಮಟ್ಟ), 6769.00 (ಒಳಹರಿವು), 2279.00 (ಹೊರಹರಿವು)

ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 11874.00 (ಒಳಹರಿವು), 11874.00 (ಹೊರಹರಿವು). ಮಾಣಿ: 595 (ಎಂಎಸ್‍ಎಲ್ ಗಳಲ್ಲಿ), 577.20 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 5220 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ). ಪಿಕ್ ಅಪ್: 563.88 (ಎಂಎಸ್‍ಎಲ್ ಗಳಲ್ಲಿ), 563.04 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 1803 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ ಗಳಲ್ಲಿ).

Heavy Rain Report And Water Level Of Reservoirs In Shivamogga District

ಚಕ್ರ: 580.57 (ಎಂ.ಎಸ್.ಎಲ್ ಗಳಲ್ಲಿ), 569.30 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 3433.00 (ಒಳಹರಿವು), 1008 (ಹೊರಹರಿವು ಕ್ಯೂಸೆಕ್ ‍ಗಳಲ್ಲಿ).

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್ ಗಳಲ್ಲಿ), 576.14 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 2044.00 (ಒಳಹರಿವು), 729.00 (ಹೊರಹರಿವು ಕ್ಯೂಸೆಕ್ ‍ಗಳಲ್ಲಿ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+