ಭದ್ರಾವತಿಯಲ್ಲಿ ಶಾಲಾ ಪ್ರವಾಸ ಬಸ್ ಪಲ್ಟಿ: ಓರ್ವ ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ನವೆಂಬರ್ 10: ಭದ್ರಾವತಿಯಿಂದ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಅಫಘಾತಕ್ಕೀಡಾಗಿ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಎನ್‌ಆರ್ ಪುರದಲ್ಲಿ ನಡೆದಿದೆ.

ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಂಡಿದ್ದರು, ಶಾಲೆಯ ಎ ಮತ್ತು ಬಿ ತರಗತಿಯ 9 ವಿದ್ಯಾರ್ಥಿಗಳು ಶೃಂಗೇರಿ, ಉಡುಪಿ, ಮಲ್ಪೆ ಪ್ರವಾಸ ಕೈಗೊಂಡಿದ್ದರು. ಶನಿವಾರ ಬೆಳಗ್ಗೆ 8 ಗಂಟೆಗೆ ಭದ್ರಾವತಿ ಬಿಟ್ಟ ಎರಡು ಟೂರಿಸ್ಟ್ ಬಸ್‌ಗಳಲ್ಲಿ ಒಂದು ಬಸ್‌ ಬಾಳೆಕೊಪ್ಪದ ಬಳಿಯ ಕ್ರಾಸ್‌ವೊಂದರಲ್ಲಿ ರಾಕೇಶ್ ಟೂರಿಸ್ಟ್ ಬಸ್ ಪಲ್ಟಿ ಹೊಡೆದಿದೆ.

ವಿದ್ಯಾರ್ಥಿನಿ ದಿಯಾ ಶೇಖಾವತ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ, 44 ಜನರಿಗೆ ಗಾಯಗಳಾಗಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ, 21 ಮಂದಿಯನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Girl dies as bus over turned near NR Pura

ಇದರಲ್ಲಿ ನಂದಿನಿ, ಸುಹಾನ್ ಮತ್ತೋರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಮ್ಯಾಕ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಕೆಎ ದಯಾನಂದ್ ಮತ್ತು ಸಾರ್ವಜನಿಕ ಶಿಕ್ಷಣಾಧಿಕಾರಿ ಸುಮಂಗಳ ಭೇಟಿ ನೀಡಿ ಗಾಯಗೊಂಡ ಶಾಲಾ ಮಕ್ಕಳ ಕ್ಷೇಮ ವಿಚಾರಿಸಿದ್ದಾರೆ. ಮೋವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+