ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾಂಪೌಂಡ್ ಒಳಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ ದೃಶ್ಯ

Recommended Video

      ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ..! | Oneindia Kannada

      ಶಿವಮೊಗ್ಗ, ಸೆಪ್ಟೆಂಬರ್ 16: ಚಿರತೆಯೊಂದು ಕಾಂಪೌಂಡ್ ಒಳಗೆ ಹಾರಿ ಸಾಕು ನಾಯಿಯನ್ನು ಹೊತ್ತೊಯ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

      ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದ ರಘುನಾಥ್ ಎಂಬುವವರ ಮನೆಯಲ್ಲಿ ಶುಕ್ರವಾರ ರಾತ್ರಿ 1.27ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಚಿರತೆ ಎತ್ತರದ ಕಾಂಪೌಂಡ್ ಹಾರಿ ಒಳನುಗ್ಗಿ ಡ್ಯಾಶ್ ಹ್ಯಾಂಡ್ ನಾಯಿಯನ್ನು ಹೊತ್ತೊಯ್ದಿದೆ.

      ಇವರ ಮನೆಯಲ್ಲಿ ಎರಡು ನಾಯಿಗಳಿದ್ದು, ಒಂದು ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ. ಮತ್ತೊಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮನೆಯಲ್ಲಿದ್ದವರು ನಿದ್ದೆಯಲ್ಲಿದ್ದರು.

      Footage Of Leopard Carrying A Dog From House In Tirthahalli Captured On CC TV

      ಮನೆಯ ಮುಂಭಾಗದ 5 ಅಡಿ ಎತ್ತರದ ಕಾಂಪೌಂಡಿನಲ್ಲಿ ಕುಳಿತು ಎರಡು ನಿಮಿಷ ಹೊಂಚು ಹಾಕಿದ ಚಿರತೆ ಕಾಂಪೌಂಡ್ ಒಳಗೆ ನುಗ್ಗಿತ್ತು.

      ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು ಜನರು ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ತಿರುಗಾಡಲು ಭಯಪಡುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ಜನರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+