ಬ್ಯಾಟ್ ಬದಲು ಕೋಟು ಕಳಿಸಿದ ಫ್ಲಿಪ್‌ ಕಾರ್ಟ್‌; 1 ಲಕ್ಷ ರೂ. ದಂಡ!

ಶಿವಮೊಗ್ಗ, ಅಕ್ಟೋಬರ್ 11 : ಕ್ರಿಕೆಟ್ ಬ್ಯಾಟ್ ಆರ್ಡರ್‌ ಮಾಡಿದರೆ ಕರಿ ಕೋಟು ಕಳಿಸಿದ್ದ ಫ್ಲಿಪ್ ಕಾರ್ಟ್‌ಗೆ ನ್ಯಾಯಾಲಯ 1 ಲಕ್ಷ ರೂ. ದಂಡವನ್ನು ವಿಧಿಸಿದೆ. ಹಣ ಕೊಡಲು ವಿಳಂಬ ಮಾಡಿದರೆ ವಾರ್ಷಿಕ ಶೇ 10ರಷ್ಟು ಬಡ್ಡಿಯನ್ನು ಪಾವತಿಸಬೇಕು ಎಂದು ಎಚ್ಚರಿಸಿದೆ.

ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಈ ಕುರಿತು ಶುಕ್ರವಾರ ತೀರ್ಪು ನೀಡಿದೆ. ವಾದಿರಾಜರಾವ್ ಫ್ಲಿಪ್‌ ಕಾರ್ಟ್‌ ಇಂಟರ್‌ನೆಟ್ ಪ್ರೈ. ಲಿ. ಮತ್ತು ಸಚಿನ್ ಬನಸಾಲ್ ಹಾಗೂ ಈ ಕಾರ್ಟ್ ಕೋರಿಯರ್ ಸರ್ವೀಸಸ್ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 1986ರ ಕಲಂ 12ರ ಅಡಿ ದೂರು ದಾಖಲಿಸಿದ್ದರು.

ನಾವು ಆರ್ಡರ್‌ ಮಾಡಿದ ವಸ್ತುವಿನ ಬದಲಿಗೆ ತಮಗೆ ಅಗತ್ಯವಿಲ್ಲದ ವಸ್ತುವನ್ನು ಕಳುಹಿಸಿದ್ದಾರೆ. ಸೇವಾ ನೂನ್ಯತೆಯನ್ನು ಸರಿಪಡಿಸಿಕೊಳ್ಳಲು ನಿರ್ಲಕ್ಷ್ಯ ತೋರಿದ್ದಾರೆ ಎಂದು 13/5/2019ರಂದು ದೂರನ್ನು ಸಲ್ಲಿಸಿದ್ದರು.

Flipkart To Pay 50000 For Delivered Wrong Product

ಕೋಟು ಕಳಿಸಿದ ಫ್ಲಿಪ್ ಕಾರ್ಟ್ : ವಾದಿರಾಜರಾವ್ ತಮ್ಮ ಮೊಬೈಲ್ ಮೂಲಕ ಫ್ಲಿಪ್ ಕಾರ್ಟ್‌ನಲ್ಲಿ ಕ್ರಿಕೆಟ್ ಬ್ಯಾಟ್ ಆರ್ಡರ್‌ ಮಾಡಿದ್ದಾರೆ. ಎಲ್ಲಾ ಆಫರ್‌ಗಳು ಸೇರಿ 6074 ರೂ. ದರವಾಗಿತ್ತು. ಈ ಕಾರ್ಟ್ ಕೋರಿಯರ್ ಸರ್ವೀಸಸ್ ಹುಡುಗ ಆರ್ಡರ್ ತಂದು ಕೊಟ್ಟು ಹಣ ತೆಗೆದುಕೊಂಡು ಹೋಗಿದ್ದ.

ಪಾರ್ಸೆಲ್ ಓಪನ್ ಮಾಡಿದಾಗ ಬ್ಯಾಟ್ ಬದಲು ಕಪ್ಪು ಕೋಟು ಇತ್ತು. ತಕ್ಷಣ ಸಮಸ್ಯೆಯನ್ನು ಸರಿಪಡಿಸುವಂತೆ ಹೇಳಿದರೂ ಫ್ಲಿಪ್ ಕಾರ್ಟ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ದರಿಂದ, ದೂರು ನೀಡಿದರು.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಸೇವಾ ನ್ಯೂನ್ಯತೆ ಆಗಿದೆ ಎಂದು ತೀರ್ಪು ನೀಡಿತು. ವಾದಿರಾಜರಾವ್ ಆರ್ಡರ್ ಮಾಡಿದ ಬ್ಯಾಟ್‌ ಅನ್ನು 6 ವಾರದಲ್ಲಿ ಕಳುಹಿಸಬೇಕು ಎಂದು ಹೇಳಿತು ಮತ್ತು 50,000 ರೂ. ವನ್ನು ಸೇವಾ ನ್ಯೂನ್ಯತೆ ಮತ್ತು ಮಾನಸಿಕ ಒತ್ತಡಕ್ಕೆ ಮತ್ತು ವ್ಯಾಜ್ಯ ಹೂಡಿದ ಖರ್ಚು ವೆಚ್ಚದ ಸಲುವಾಗಿ ನೀಡಬೇಕು ಎಂದು ಆದೇಶಿಸಿತು.

ಆದೇಶದಲ್ಲಿ ನೀಡಲಾದ ಪೂರ್ಣ ಹಣವನ್ನು ಕೊಡಲು ತಪ್ಪಿದಲ್ಲಿ ವಾರ್ಷಿಕ ಶೇಕಡ 10ರಷ್ಟು ಹೆಚ್ಚಿನ ಬಡ್ಡಿಯನ್ನು ಸಹ ನೀಡಬೇಕು ಎಂದು ಆದೇಶಿಸಿದೆ. ವ್ಯವಹಾರದಲ್ಲಿ ಅನುಚಿತ ವ್ಯಾಪಾರ ಕ್ರಮವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಮೋಸ ಮಾಡಿದ್ದರಿಂದ 50,000 ದಂಡವನ್ನು ಗ್ರಾಹಕ ಭವಿಷ್ಯ ನಿಧಿಗೆ ಆರು ವಾರದಲ್ಲಿ ಕಟ್ಟಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+