ಪೊಲೀಸ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ, ಹಣಕ್ಕಾಗಿ ಮೆಸೇಜ್

ಶಿವಮೊಗ್ಗ, ಸೆಪ್ಟೆಂಬರ್ 15 : ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ವಂಚಕರು ಎಲ್ಲಾ ಸ್ನೇಹಿತರಿಗೆ ಸಂದೇಶ ಕಳಿಸುತ್ತಿದ್ದು, ಹಣ ನೀಡುವಂತೆ ಕೇಳುತ್ತಿದ್ದಾರೆ.

ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ಇನ್ಸ್‌ಪೆಕ್ಟರ್ ಫೋಟೋ ಬಳಸಿಕೊಳ್ಳಲಾಗಿದೆ.

"ತಾವು ಸಂಕಷ್ಟದಲ್ಲಿದ್ದು, ತುರ್ತಾಗಿ ಹಣ ನೀಡಿ" ಎಂದು ಫ್ರೆಂಡ್ ಲಿಸ್ಟ್‌ನಲ್ಲಿರುವ ಎಲ್ಲಾ ಸ್ನೇಹಿತರಿಗೆ ವಂಚಕರು ಸಂದೇಶ ಕಳಿಸುತ್ತಿದ್ದಾರೆ. 2 ಸಾವಿರದಿಂದ 20 ಸಾವಿರದ ತನಕ ಹಣಕ್ಕಾಗಿ ಸಂದೇಶ ಕಳಿಸಲಾಗುತ್ತಿದೆ.

Fake FaceBook Account In The Name Of Police Officer

ಈ ವಿಚಾರ ತಿಳಿಯುತ್ತಿದ್ದಂತೆ ಅಭಯ್ ಪ್ರಕಾಶ್ ಸೋಮನಾಳ್ ತಮ್ಮ ಅಸಲಿ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಫ್ರೆಂಡ್ ಲಿಸ್ಟ್‌ನಲ್ಲಿರುವ ಯಾವ ಸ್ನೇಹಿತರು ಹಣ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ವಂಚಕರು ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್‌ ಸಹ ಕಳಿಸುತ್ತಿದ್ದಾರೆ. ತುರ್ತಾಗಿ ಹಣವನ್ನು ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಶಿವಮೊಗ್ಗದ ಪೊಲೀಸ್ ಅಧಿಕಾರಿಯೊಬ್ಬರ ಫೇಸ್ ಬುಕ್ ಖಾತೆ ಕಳೆದ ತಿಂಗಳು ಹ್ಯಾಕ್ ಆಗಿತ್ತು. ಈಗ ಮತ್ತೊಬ್ಬ ಅಧಿಕಾರಿಯ ಖಾತೆಗೆ ಹ್ಯಾಕರ್‌ಗಳು ಕೈ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+