ಮೋದಿ ಪ್ರಧಾನಿಯಾದ್ರೆ ದೇವೇಗೌಡ್ರು ದೇಶ ಬಿಡ್ತೀನಿ ಅಂದಿದ್ರು, ಬಿಟ್ಟಿದ್ದಾರಾ?: ಈಶ್ವರಪ್ಪ ವಾಗ್ದಾಳಿ
Recommended Video

ಶಿವಮೊಗ್ಗ, ಏ.12: ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಈ ಹಿಂದೆ ಹೇಳಿದ್ದರು ದೇಶಬಿಟ್ಟಿದ್ದಾರಾ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ದೇವೇಗೌಡರು ಹೇಳಿದ್ದರು, ಆದರೆ ಅವರು ಇಲ್ಲೇ ಇದ್ದಾರೆ. ಈಗ ಅವರ ಪುತ್ರ ರೇವಣ್ಣ ಅವರು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದ್ದಾರೆ ಅದೂ ಕೂಡ ಸತ್ಯಕ್ಕೆ ದೂರವಾಗಿದ್ದು ಎಂದರು.
ರೇವಣ್ಣ ಅವರದ್ದೂ ಏನೂ ನಡೆಯುವುದಿಲ್ಲ, ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಎರಡಂಕಿಯನ್ನೂ ಮುಟ್ಟಲ್ಲ, ರೇವಣ್ಣ ಅವರ ಮಾತೂ ಸತ್ಯವಾಗಲ್ಲ ಅಪ್ಪನಂತೆ ಸುಳ್ಳು ಹೇಳುವುದನ್ನು ಮಗ ಬಿಡಬೇಕು ಎಂದು ಹೇಳಿದರು.

ಯಾರ ಕಡೆಗೆ ದಂಡ ಇರುತ್ತೋ ಅವರ ಮಾತು ನಡೆಯುತ್ತದೆ. ಮೋದಿಯ ಶಕ್ತಿ ಗೊತ್ತಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮೋದಿಯವರನ್ನು ಹೊಗಳಿದ್ದಾರೆ ಎಂದು ನುಡಿದರು.












Click it and Unblock the Notifications