• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಿಗರ್ ಎಳೆಯುವ ಮುನ್ನ ನಡೆದಿದ್ದೇನು? ಸುಪಾರಿ ಕಿಲ್ಲರ್ ಮನ ಕರಗಿದ್ದೇಕೆ?

|

ಶಿವಮೊಗ್ಗ, ಸೆಪ್ಟೆಂಬರ್ 27: 'ಇನ್ನೇನು ಟ್ರಿಗರ್ ಎಳೆದು, ಕೆಲಸ ಮುಗಿಸಿಬಿಡಬೇಕು, ಸುಪಾರಿ ಕಿಲ್ಲರ್ ನ ಕೈಯಲ್ಲಿದ್ದ ರಿವಾಲ್ವರ್ ಹಠಾತ್ತನೆ ಸುಮ್ಮನಾಗಿತ್ತು. ಮನಸ್ಸಲ್ಲಿ ಅರಿಯದ ಕಳವಳ... ಮೂರು ಬಾರಿ ಹೀಗೆ ಕೊಲ್ಲುವುದಕ್ಕೆ ಹೋದಾಗಲೂ ಆ ಸುಪಾರಿ ಕಿಲ್ಲರ್ ನನ್ನು ತಡೆದಿದ್ದು ಇದೇ ಮಕ್ಕಳ ಮುದ್ದು ಮುಖ!'

ಘಟನೆ ನಡೆದಿದ್ದು ಶಿವಮೊಗ್ಗದಲ್ಲಿ. ರವೀಂದ್ರ ಗಿರಿ ಎಂಬ ಕಾನ್ ಸ್ಟೇಬಲ್ ತನ್ನ ಪತ್ನಿಯನ್ನು ಕೊಲ್ಲುವುದಕ್ಕೆ ಸುಪಾರಿ ಕಿಲ್ಲರ್ ಜೊತೆ 4 ಲಕ್ಷ ರೂ. ಒಪ್ಪಂದ ಮಾಡಿಕೊಂಡಿದ್ದ.

ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!

ದಾವಣಗೆರೆಯ ಅನಿತಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ ಗಿರಿಗೆ 8 ವರ್ಷ ವಯಸ್ಸಿನ ಮಗ ಮತ್ತು 6 ವರ್ಷ ವಯಸ್ಸಿನ ಮಗಳು ಸಹ ಇದ್ದರು. ಹೊರ ಪ್ರಪಂಚಕ್ಕೆ ಪತಿ ಪತ್ನಿ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದಂತೆ ಕಂಡುಬರುತ್ತಿದ್ದರು. ಆದರೆ ರವೀಂದ್ರ ಗಿರಿಗೆ ಇನ್ನೊಬ್ಬ ಯುವತಿಯ ಜೊತೆ ಸಂಬಂಧವಿದೆ ಎಂಬುದು ಅನಿತಾಗೆ ತಿಳಿದ ಮೇಲೆ ಇವರ ಸಂಸಾರದಲ್ಲಿ ಕೋಲಾಹಲ ಆರಂಭವಾಗಿತ್ತು.

ಈ ವಿಷಯದಿಂದಾಗಿ ಪ್ರತಿದಿನ ದಂಪತಿ ನಡುವೆ ಜಗಳವಾಗುತ್ತಿತ್ತು. ಜಗಳ ವಿಕೋಪಕ್ಕೆ ತೆರಳಿ, ಗಿರಿಯ ಮನಸ್ಸಿನಲ್ಲಿ ಪತ್ನಿಯನ್ನು ಕೊಲ್ಲುವ ಯೋಚನೆ ಮೊಳಕೆಯೊಡೆದಿತ್ತು. ಇದಕ್ಕೆ ಸೂಕ್ತ ವ್ಯಕ್ತಿಯಾಗಿ ಕಂಡಿದ್ದು ಸುಪಾರಿ ಕಿಲ್ಲರ್ ಫಿರೋಜ್.

ಫಿರೋಜ್ ಜೊತೆ ಈ ಹತ್ಯೆ ಸಂಚಿಗೆ ಜೊತೆಯಾಗಿದ್ದು ಸಯ್ಯದ್ ಇರ್ಫಾನ್ ಮತ್ತು ಸುಹೇಲ್.

ಅಪ್ಪನ ಬಲಿದಾನಕ್ಕೆ ಹೆಮ್ಮೆಯಿದೆ, ಆದರೆ?: ಸೈನಿಕನ ಮಗನ ಭಾವುಕ ಮಾತುಗಳು...

ರವೀಂದ್ರ ಗಿರಿಯಿಂದ ಅನಿತಾ ಅವರ ಫೋಟೋ ಪಡೆದು, ನಂತರ ಅವರನ್ನು ಕೊಲ್ಲುವುದಕ್ಕೆಂದು ಮೂರು ಬಾರಿ ತೆರಳಿದ್ದ ಫೀರೋಜ್ ಗೆ, ಇನ್ನೇನು ಟ್ರಿಗರ್ ಎಳೆದು, ಕೆಲಸ ಮುಗಿಸಿಬಿಡಬೇಕು ಎಂಬಷ್ಟರಲ್ಲಿ ಆ ದಂಪತಿಯ ಇಬ್ಬರು ಮುದ್ದು ಮಕ್ಕಳು ನೆನಪಾಗುತ್ತಿದ್ದರು. ಅನಿತಾರನ್ನು ಕೊಂದರೆ ಆ ಇಬ್ಬರು ಮಕ್ಕಳು ಅನಾಥರಾಗುತ್ತಾರೆ ಎಂಬುದನ್ನು ನೆನೆಸಿಕೊಂಡು ಮೂರು ಬಾರಿಯೂ ಅನಿತಾ ಅವರಿಗೆ ಜೀವದಾನ ನೀಡಿ ಹೋಗಿದ್ದ ಫಿರೋಜ್!

ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?

ಸುಪಾರಿ ಕಿಲ್ಲರ್ ಫಿರೋಜ್ ನನ್ನು ಬೇರೆ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಆತನ ಬಳಿ ಅನಿತಾ ಅವರ ಚಿತ್ರವನ್ನು ಕಂಡ ಪೊಲೀಸರು ಈ ಕುರಿತು ಕೂಲಂಕಷ ತನಿಖೆ ನಡೆಸಿದಾಗ ಅನಿತಾ ಅವರ ಕೊಲೆಗೆ, ಪತಿಯೇ ಸುಪಾರಿ ನೀಡಿದ್ದು ಮತ್ತು ಫಿರೋಜ್ ಈ ಕೊಲೆಯನ್ನು ಮಾಡಲು ವಿಫಲವಾಗಿದ್ದ ವಿಷಯ ತಿಳಿದುಬಂದಿದೆ.

ವಿಷಯ ತಿಳಿಯುತ್ತದ್ದಂತೆಯೇ ಫಿರೋಜ್ ಮತ್ತು ಇಬ್ಬರು ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಪತಿಯ ವಿರುದ್ಧ ದೂರು ನೀಡಲು ಅನಿತಾ ಒಪ್ಪದ ಕಾರಣ, ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

English summary
Here is a strange incident where a contract killer's heart melts while he sees a woman's 2 children. He couldn't kill her after that. The incident took place in Shivamogga. A Constable plots his wife murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X