ಶಿವಮೊಗ್ಗ ನಗರದ ವಿವಿಧ ವಾರ್ಡ್‌ಗಳು ಸಂಪೂರ್ಣ ಲಾಕ್ ಡೌನ್

ಶಿವಮೊಗ್ಗ, ಜುಲೈ 21 : ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ವಾರ್ಡ್‌ಗಳನ್ನು ಲಾಕ್ ಡೌನ್ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 852.

ಶಿವಮೊಗ್ಗ ಮಹಾನಗರ ಪಾಲಿಕೆ ಸಂಪೂರ್ಣ ಲಾಕ್ ಡೌನ್ ಮಾಡುವ ಕುರಿತು ಆದೇಶ ಹೊರಡಿಸಿದೆ. ಜುಲೈ 23ರಿಂದ 30ರ ಬೆಳಗ್ಗೆ 5 ಗಂಟೆಯ ತನಕ ವಿವಿಧ ವಾರ್ಡ್‌ಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಎಲ್ಲಾ ಅಂಗಡಿ ಮುಚ್ಚಲು, ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್ ಆಗಿರಲಿದೆ.

ಆಸ್ಪತ್ರೆ, ಔಷಧಿ ಅಂಗಡಿ, ಹಾಲು ಮಾರಾಟದ ಅಂಗಡಿಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ತರಕಾರಿ, ಹಣ್ಣು, ದಿನಸಿ ಅಂಗಡಿಗಳು ಬೆಳಗ್ಗೆ 5ರಿಂದ 10 ಗಂಟೆ ತನಕ ಮಾತ್ರ ಬಾಗಿಲು ತೆರೆಯಬಹುದಾಗಿದೆ.

Complete Lockdown In Shivamogga City Several Wards

ಲಾಕ್ ಡೌನ್ ಇರುವ ವಾರ್ಡ್‌ಗಳಿಂದ ಜನರು ಹೊರ ಹೋಗುವುದು ಅಥವ ಈ ವಾರ್ಡ್‌ಗಳಿಗೆ ಹೊರಗಿನಿಂದ ಜನರು ಬರುವುದನ್ನು ನಿಷೇಧಿಸಲಾಗಿದೆ. ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಹೆಚ್ಚಾದ ಹಿನ್ನಲೆಯಲ್ಲಿ ಈ ವಾರ್ಡ್‌ಗಳನ್ನು ಲಾಕ್ ಡೌನ್ ಮಾಡಲು ಆದೇಶ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ತನ್ನ ಆದೇಶದಲ್ಲಿ ತಿಳಿಸಿದೆ.

ವಾರ್ಡ್‌ಗಳ ಪಟ್ಟಿ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ನಗರದ ಹಳೇ ಶಿವಮೊಗ್ಗ ಕ್ಲಸ್ಟರ್‌ನಲ್ಲಿ ಬರುವ ವಾರ್ಡ್‌ ನಂಬರ್ 22, 23, 29 ಮತ್ತು 30 ಹಾಗೂ ವಾರ್ಡ್ ನಂಬರ್ 12, 13 ಮತ್ತು 33ರಲ್ಲಿನ ಭಾಗಶಃ ಬರುವಂತಹ ಪ್ರದೇಶಗಳಲ್ಲಿ ಲಾಕ್ ಡೌನ್ ಇರುತ್ತದೆ.

ಬೆಕ್ಕಿನ ಕಲ್ಮಠ, ಬಿ. ಎಚ್‌. ರಸ್ತೆ, ಅಮೀರ್ ಅಹಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಹೊಸ ತೀರ್ಥಹಳ್ಳಿ ರಸ್ತೆ, ಬೈಪಾಸ್ ರಸ್ತೆಯ ತುಂಗಾ ಹೊಸ ಬ್ರಿಡ್ಜ್ ವರೆಗೆ ಬರುವ ಪ್ರದೇಶಗಳು ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+