ಹೈಡ್ರಾಮಗಳ ನಡುವೆ ಬಿಜೆಪಿ ತೆಕ್ಕೆಗೆ ಹೊಸನಗರ ತಾ.ಪಂ ಅಧ್ಯಕ್ಷ ಸ್ಥಾನ
ಶಿವಮೊಗ್ಗ, ಮಾರ್ಚ್ 7: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಪಂಚಾಯತ್ ಚುನಾವಣೆ ಇಂದು ನಡೆದಿದ್ದು, ಸಾಕಷ್ಟು ಹೈಡ್ರಾಮ, ಎಸ್ಕೇಪ್, ಕುತೂಹಲಕ್ಕೆ ಕಾರಣವಾಗಿದ್ದ ಹೊಸನಗರ ತಾ.ಪಂ ಚುನಾವಣೆ ಅಂತಿಮವಾಗಿ ಬಿಜೆಪಿ ಪಾಲಾಗಿದೆ.
ಹೊಸನಗರ ತಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಲುವಳ್ಳಿ ವೀರೇಶ್ ಗೆಲುವು ಸಾಧಿಸಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹೊಸನಗರ ತಾ.ಪಂ ಅದ್ಯಕ್ಷರ ಚುನಾವಣೆ ಒಟ್ಟು 12 ಸದಸ್ಯ ಬಲವನ್ನು ಹೊಂದಿದ್ದು, ಆಲುವಳ್ಳಿ ವೀರೇಶ್ ಗೆ 7 ಸದಸ್ಯರು ಬೆಂಬಲ ಸೂಚಿಸಿದರು. ಇವರ ಪ್ರತಿಸ್ಪರ್ಧಿ ಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ನ ಬಿ.ಜಿ.ಚಂದ್ರಮೌಳಿ ಅವರ ಪರವಾಗಿ 5 ಸದಸ್ಯರು ಮತ ಚಲಾಯಿಸಿದರು.

ವಾಸಪ್ಪಗೌಡ, ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇಷ್ಟು ದಿನ ಕಾಂಗ್ರೆಸ್ ನ ಅಧಿಕಾರದಲ್ಲಿದ್ದ ಹೊಸನಗರ ತಾಲೂಕು ಪಂಚಾಯತ್ ಅಂತಿಮವಾಗಿ ಬಿಜೆಪಿ ಪಾಲಾಗಿದೆ.












Click it and Unblock the Notifications