ಮೈಸೂರು- ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್ ರೈಲು ಕಾಡು ಕೋಣಕ್ಕೆ ಡಿಕ್ಕಿ

ಶಿವಮೊಗ್ಗ, ಅಕ್ಟೋಬರ್ 12: ಕುವೆಂಪು ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಕಾಡು ಕೋಣವೊಂದು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಬಾಳೆಗುಂಡಿ ಬಳಿ ಬುಧವಾರ ಸಂಭವಿಸಿದೆ.

ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ಕುವೆಂಪು ಎಕ್ಸ್‌ಪ್ರೆಸ್ ರೈಲು ಬಾಳೆಗುಂಡಿ ಬಳಿ ಕಾಡುಕೋಣಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡಿದ್ದ ಕಾಡು ಕೋಣ ಹಳಿ ಪಕ್ಕದ ಚರಂಡಿ ದಾಟಲಾಗದೆ ಉರುಳಿದೆ. ಅಲ್ಲಿಯೆ ಕೊನೆ ಉಸಿರೆಳೆದಿದೆ.

ಮಂಗಳವಾರ ರಾತ್ರಿ ಕುವೆಂಪು ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ತಾಳಗುಪ್ಪಗೆ ಆಗಮಿಸುತ್ತಿತ್ತು. ಈ ವೇಳೆ ಘಟನೆ ಸಂಭವಿಸಿದೆ. ಮೇವು ಅರಸಿಕೊಂಡು ಕಾಡು ಕೋಣ ಕಾಡಿನಿಂದ ಹೊರ ಬಂದಿದ್ದು, ಹಳಿ ದಾಟುವಾಗ ಘಟನೆ ಸಂಭವಿಸಿರುವ ಶಂಕೆ ಇದೆ.

Bison Killed near Sagara after being hit by Kuvepu Express

'ಕುವೆಂಪು ಎಕ್ಸ್‌ಪ್ರೆಸ್' ಎಂದು ನಾಮಕರಣ

ಇತ್ತೀಚೆಗಷ್ಟೇ ಮೈಸೂರು - ಶಿವಮೊಗ್ಗ ನಡುವೆ ಸಂಚರಿಸುವ ತಾಳಗುಪ್ಪ ಇಂಟರ್‌ಸಿಟಿ ಎಕ್ಸ್ಪ್ರೆಸ್ ರೈಲಿಗೆ ಮಹಾಕವಿ ಕುವೆಂಪು ಅವರ ಹೆಸರು ಬದಲಾಯಿಸಲಾಗಿದೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ರೈಲ್ವೆ ಸಚಿವರ ಜೊತೆ ಮಾತನಾಡಿ ತಾಳಗುಪ್ಪ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲಿಗೆ ಮಹಾಕವಿ ಕುವೆಂಪು ಅವರ ಹೆಸರು ಬದಲಾಯಿಸಲು ಒಪ್ಪಿಗೆ ಪಡೆದಿದ್ದಾರೆ. ಹೀಗಾಗಿ ಮೈಸೂರು-ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಕುವೆಂಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾಯಿಸಬೇಕೆಂದು ದೆಹಲಿಯಲ್ಲಿ ರೈಲ್ವೇ ಸಚಿವ ಅಶ್ವಿನಿ‌ ವೈಷ್ಣವ್‌ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಈಗಾಗಲೆ ಸಾಕಷ್ಟು ಜನರು ರೈಲಿನ ಹೆಸರನ್ನು ಬದಲಾಯಿಸಲು ಒತ್ತಾಯ ಮಾಡಿದ್ದಾರೆ. ಏಕೆಂದರೆ ಮೈಸೂರಿಗೆ ರೈಲು ಸಂಪರ್ಕ ತರಬೇಕೆಂಬುದು ಮೈಸೂರಿನ ಒಡೆಯರ್‌ ವಂಶಸ್ಥರ ಕನಸಾಗಿತ್ತು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಹಾಗಾಗಿ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆ ಮಾಡಿಸಲಾಗಿದೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+