ಡಾ. ರಾಘವೇಂದ್ರ ವೈಲಾಯ ಅವರ ಭಾವಯಾನ ಕೃತಿ ಬಿಡುಗಡೆ
ಶಿವಮೊಗ್ಗ, ಜೂನ್ 14: ಧನ್ವಿ ಪ್ರಕಾಶನವು ಡಾ. ಸಿಜಿ ರಾಘವೇಂದ್ರ ವೈಲಾಯ ಅವರ 'ಭಾವಯಾನ' ಕೃತಿ ಬಿಡುಗಡೆ ಸಮಾರಂಭವನ್ನು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಜೂನ್ 15 ರಂದು ಸಂಜೆ 5 ಗಂಟೆಗೆ ಆಯೋಜಿಸಿದ್ದಾರೆ.
ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಹ ನಿರ್ದೇಶಕಿ ವಿನಯಾ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷೆ ವಿಜಯಾ ಶ್ರೀಧರ್ ಕೃತಿ ಬಿಡುಗಡೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಜಿ ಶಂಕರಪ್ಪ, ಹಾಗೂ ಶ್ರೀಧರ್ ನರ್ಸಿಂಗ್‌ಹೋಮ್‌ನ ಮನೋರೋಗ ತಜ್ಞರಾದ ಡಾ. ಆರ್.ಕೆ ಶ್ರೀಧರ್ ಉಪಸ್ಥಿತರಿರಲಿದ್ದಾರೆ. ಅಂದು ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕವನ ಸಂಕಲನದಿಂದ ಆಯ್ದ ಗೀತೆಗಳ ಪ್ರಸ್ತುತಿ ಕಾರ್ಯಕ್ರಮವೂ ಕೂಡ ಜರುಗಲಿದೆ.












Click it and Unblock the Notifications