Bhadra Dam: ಮುಂದುವರೆದ ಮುಂಗಾರು ಆರ್ಭಟ: ಭದ್ರಾ ಜಲಾಶಯದ ಒಳಹರಿವು ಮತ್ತೆ ಹೆಚ್ಚಳ
Bhadra Dam: ಮಲೆನಾಡು ಭಾಗದಲ್ಲಿ ಒಂದು ವಾರದಿಂದ ಮಳೆರಾಯನ ಆರ್ಭಟ ಮುಂದುವರೆದಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಭದ್ರಾ ಡ್ಯಾಂನ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಜಲಾಶಯದಲ್ಲಿ ಇಂದು (ಜೂನ್ 28) ನೀರಿಟ್ಟ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭದ್ರಾ ಜಲಾಶಯದ ಒಳಹರಿವು ಹೆಚ್ಚಳ ಹಿನ್ನೆಲೆ ಡ್ಯಾಂ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿದಂತಾಗಿದೆ. ಕಳೆ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದು, ಇದೀಗ ಈ ವರ್ಷ ಮುಂಗಾರು ಚುರುಕು ಪಡೆದ ಹಿನ್ನೆಲೆ ಜಲಾಶಯದ ನೀರಿನ ಮಟ್ಟ ಹೆಚ್ಚಾಗುತ್ತಲಿದೆ.

ಭದ್ರಾ ಜಲಾಶಯದ ನೀರಿನ ಮಟ್ಟದ ವಿವರ
* ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
* ಗರಿಷ್ಠ ನೀರಿನ ಮಟ್ಟ: 186 ಅಡಿ
* ಇಂದಿನ ಮಟ್ಟ: 120 ಅಡಿ
* ಒಳ ಹರಿವು: 2,276 ಕ್ಯೂಸೆಕ್
* ಹೊರ ಹರಿವು: 343 ಕ್ಯೂಸೆಕ್
ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಈಗಾಗಲೇ ಹಲವೆಡೆ ಮಳೆರಾಯ ಅವಾಂತರಗಳನ್ನು ಕೂಡ ಸೃಷ್ಟಿಸಿದ್ದಾನೆ. ಮತ್ತೊಂದೆಡೆ ಭಾರೀ ಮಳೆಯಿಂದ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗೆಯೇ ಜಲಾಶಯಗಳ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ.
ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರಗಳ ಕಾಲ ಮಳೆ ಹೀಗೆ ಮುಂದುವರೆದರೆ, ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿ, ಬಾಡಿದ್ದ ರೈತರ ಮುಖದಲ್ಲಿ ಮಂದಹಾಸ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications