ಆಗಸ್ಟ್‌ 31 ರಿಂದ ಶಿವಮೊಗ್ಗಕ್ಕೆ ವಿಮಾನ, ಟಿಕೆಟ್ ದರ ಎಷ್ಟು?

ಶಿವಮೊಗ್ಗ, ಜುಲೈ 27; ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಮಲೆನಾಡು ಭಾಗದ ಜನರ ಕನಸು ನನಸಾಗಲಿದೆ. ಆಗಸ್ಟ್‌ 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಗಳ ಹಾರಾಟ ಆರಂಭವಾಗಲಿದೆ. ಬೆಂಗಳೂರು-ಶಿವಮೊಗ್ಗ ನಡುವೆ ಪ್ರತಿದಿನ ವಿಮಾನ ಸಂಚಾರ ನಡೆಸಲಿದ್ದು, ಬುಕ್ಕಿಂಗ್ ಆರಂಭವಾಗಿದೆ.

ಇಂಡಿಗೋ ಸಂಸ್ಥೆ ಬೆಂಗಳೂರು-ಶಿವಮೊಗ್ಗ ನಡುವೆ ಪ್ರತಿದಿನ ವಿಮಾನ ಸೇವೆ ನೀಡಲಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ ಆರಂಭಿಸಲಾಗಿದೆ. 2023ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು.

Bengaluru Shivamogga Flight From August 31st Fare And Schedule

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳ ನಡುವೆ ತಡೆ ರಹಿತ ವಿಮಾನ ಸೇವೆಯನ್ನು ಇಂಡಿಗೋ ನೀಡಲಿದೆ. 1 ಗಂಟೆ 15 ನಿಮಿಷದ ಪ್ರಯಾಣ ಇದಾಗಿದೆ.

ಟಿಕೆಟ್ ದರ, ವೇಳಾಪಟ್ಟಿ; ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 11.05ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಶಿವಮೊಗ್ಗದಿಂದ 11.25ಕ್ಕೆ ಹೊರಡುವ ವಿಮಾನ 12.25ಕ್ಕೆ ಬೆಂಗಳೂರು ತಲುಪಲಿದೆ. ಇದು ಸದ್ಯದ ವೇಳಾಪಟ್ಟಿಯಾಗಿದ್ದು, ಬಳಿಕ ಬದಲಾಗುವ ನಿರೀಕ್ಷೆಯೂ ಇದೆ.

ಇಂಡಿಗೋ ಸಂಸ್ಥೆ SAVER and FLEXI PLUS ಎಂಬ ಎರಡು ಮಾದರಿ ಟಿಕೆಟ್‌ಗಳನ್ನು ಬೆಂಗಳೂರು-ಶಿವಮೊಗ್ಗ ನಡುವಿನ ಮಾರ್ಗಕ್ಕೆ ಪರಿಚಯಿಸಿದೆ. ಸದ್ಯ ಸೆಪ್ಟೆಂಬರ್ 1ರ ಪ್ರಯಾಣ ದರ SAVER 4,180 ರೂ. and FLEXI PLUS 4,705 ರೂ. ಇದೆ.

ಇನ್ನು ಬೆಂಗಳೂರು-ಶಿವಮೊಗ್ಗ ನಡುವಿನ ವಿಮಾನದಲ್ಲಿ 15 ಕೆಜಿ ಲಗೇಜ್ ತೆಗೆದುಕೊಂಡು ಹೋಗಲು ಅನುಮತಿ ಇದೆ. ಪ್ರತಿ ಪ್ರಯಾಣಿಕ ಒಂದು ಹ್ಯಾಂಡ್ ಬ್ಯಾಗ್ ಕೊಂಡೊಯ್ಯಬಹುದು. ಇದರ ತೂಕ 7 ಕೆಜಿ.

ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿ ವಿಮಾನ ನಿಲ್ದಾಣವಿದೆ. ಈ ನಿಲ್ದಾಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜನ್ಮದಿನದಂದು ಉದ್ಘಾಟನೆಯೂ ಆಗಿದೆ. ಆದರೆ ಆಗಸ್ಟ್ 31ರಿಂದ ವಿಮಾನಗಳ ವಾಣಿಜ್ಯ ಸೇವೆಗೆ ಮುಕ್ತವಾಗುತ್ತಿದೆ. ಸದ್ಯ ಬೆಂಗಳೂರು-ಶಿವಮೊಗ್ಗಕ್ಕೆ ಮಾತ್ರ ವಿಮಾನ ಸೇವೆ ಇರಲಿದೆ.

ಶಿವಮೊಗ್ಗದಿಂದ ಶಿವಮೊಗ್ಗ-ಗೋವಾ, ಶಿವಮೊಗ್ಗ-ಹೈದರಾಬಾದ್ ಮತ್ತು ಶಿವಮೊಗ್ಗ-ತಿರುಪತಿ ನಡುವೆ ವಿಮಾನ ಸಂಚಾರ ಉಡಾನ್ ಯೋಜನೆಯಡಿ ಆರಂಭವಾಗಲಿದೆ. ಆದರೆ ಈ ವಿಮಾನ ಸೇವೆಗಳ ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ.

11 ನಗರಗಳಿಗೆ ಸಂಪರ್ಕ; ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಸಹಾಯಕವಾಗಲಿದೆ. ಒಟ್ಟು 11 ಮಾರ್ಗದಲ್ಲಿ ಶಿವಮೊಗ್ಗದಿಂದ ವಿಮಾನ ಸಂಪರ್ಕ ಆರಂಭವಾಗಲಿದೆ ಎಂಬ ಮಾಹಿತಿ ಇದೆ. ಹಂತ ಹಂತವಾಗಿ ಒದೊಂದೆ ವಿಮಾನಗಳು ಹಾರಾಟ ಪ್ರಾರಂಭಿಸಲಿವೆ.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕನಸು. ಅವರು ಮುಖ್ಯಮಂತ್ರಿಯಾದಾಗಲೇ ಯೋಜನೆಗೆ ಇದ್ದ ಅಡೆತಡೆ ನಿವಾರಣೆ ಮಾಡಿ, ಅನುದಾನ ಬಿಡುಗಡೆ ಮಾಡಿದ್ದರು.

ಮೊದಲು ಶಿವಮೊಗ್ಗ ವಿಮಾನ ನಿಲ್ದಾಣದ ರನ್‌ ವೇ 2050 ಮೀಟರ್ ಎಂದು ಯೋಜನೆ ತಯಾರು ಮಾಡಲಾಗಿತ್ತು. ಬಳಿಕ ಏರ್‌ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರ್‌ಗೆ ಹೆಚ್ಚಿಸಲು ಅನುಮೋದನೆ ನೀಡಲಾಯಿತು.

ಸಂಸದ ಬಿ. ವೈ. ರಾಘವೇಂದ್ರ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್ ಯೋಜನೆ ವ್ಯಾಪ್ತಿಯಲ್ಲಿ ಒಳಪಡಿಸುವ ಕುರಿತು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಆಗಸ್ಟ್‌ನಿಂದ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸಂಚಾರ ಆರಂಭವಾಗಲಿದೆ.

ರಸ್ತೆ, ರೈಲು ಮಾರ್ಗದ ಮೂಲಕ ಶಿವಮೊಗ್ಗ ಉತ್ತಮ ಸಂಪರ್ಕ ಹೊಂದಿದೆ. ವಿಶ್ವಪ್ರಸಿದ್ಧ ಜೋಗ ಜಲಪಾತ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ಶಿವಮೊಗ್ಗಕ್ಕೆ ಈಗ ವಿಮಾನ ಸಂಪರ್ಕವೂ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+