Get Updates
Get notified of breaking news, exclusive insights, and must-see stories!

ಪತಿಯಿಂದ ಪತ್ನಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ

ಶಿವಮೊಗ್ಗ, ಜನವರಿ 03: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಪತಿಯೇ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಮಿಳ್ಳಘಟ್ಟ ಬಡಾವಣೆಯಲ್ಲಿ ನಡೆದಿದೆ.

ಮಿಳ್ಳಘಟ್ಟ ಒಂದನೇ ತಿರುವಿನಲ್ಲಿ ವಾಸವಾಗಿರುವ ಆರ್ಮುಗ ಎಂಬಾತನೇ ಚಾಕುವಿನಿಂದ ತನ್ನ ಪತ್ನಿ ಅಂಜಲಿ ಮೇಲೆ ಹಲ್ಲೆ ನಡೆಸಿದ್ದು, ಅಂಜಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗದ ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ಆರ್ಮುಗ ಆರು ವರ್ಷದ ಹಿಂದೆ ಅಂಜಲಿಯನ್ನು ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕೆಲ ತಿಂಗಳುಗಳಿಂದ ಪತಿ ಮತ್ತು ಪತ್ನಿ ಮಧ್ಯೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

Armuga Deadly Assault On His Wife With Knife

ಒಂದು ತಿಂಗಳ ಹಿಂದೆ ತಂಗಿ ಮನೆಗೆ ಹೋಗಿದ್ದ ಆರ್ಮುಗ ಇಂದು ಶಿವಮೊಗ್ಗಕ್ಕೆ ವಾಪಾಸಾಗಿದ್ದಾನೆ. ಇಂದು ಬೆಳಗ್ಗೆಯಿಂದಲೂ ಗಂಡ ಹೆಂಡತಿ ನಡುವೆ ಗಲಾಟೆಯಾಗಿರುವ ವಿಷಯವನ್ನು ಅಲ್ಲಿನ ಸ್ಥಳೀಯರು ಅಂಜಲಿ ತಂದೆ ಪೂಮಲೈ ಅವರಿಗೆ ತಿಳಿಸಿದ್ದಾರೆ.

ಪೂಮಲೈ ಕೂಡಲೇ ತನ್ನ ಮಗಳ ಮನೆಗೆ ಬರುವಷ್ಟರಲ್ಲಿ ಆರ್ಮುಗ ತನ್ನ ಪತ್ನಿ ಅಂಜಲಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೂಡಲೇ ಪೂಮಲೈ ತನ್ನ ಮಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ಆರ್ಮುಗ ನೇರವಾಗಿ ದೊಡ್ಡಪೇಟೆ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+