ತುಂಗಾ ಜಲಾಶಯ ಭರ್ತಿಗೆ 1 ಅಡಿ ಬಾಕಿ; 2000 ಕ್ಯೂಸೆಕ್ ನೀರು ನದಿಗೆ

ಶಿವಮೊಗ್ಗ, ಜೂನ್ 18: ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗೆಯ ಅಂಗಳ ತುಂಬುತ್ತಿದ್ದು, ಇಂದು ಜಲಾಶಯದಿಂದ ಎರಡು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ‌. ಪ್ರಸಕ್ತ 588.25 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ತುಂಗಾ ನದಿಯಲ್ಲಿ ಇಂದು 587.69 ಮೀಟರ್ ನೀರು ತುಂಬಿಕೊಂಡಿದ್ದು, ಜಲಾಶಯ ಭರ್ತಿಗೆ ಒಂದು ಅಡಿ ಮಾತ್ರ ಬಾಕಿ ಇದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವುದರಿಂದ ನೀರು ಬಿಡಲಾಗಿದೆ.

Recommended Video

      Sreesanth to make a comeback to Ranji cricket at the age of 37 | Oneindia Kannada

      ಇಂದು 5546 ಕ್ಯೂಸೆಕ್ ಒಳ ಹರಿವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 584.04 ಮೀಟರ್ ನೀರಿತ್ತು. ಈ ವರ್ಷ ಆ ಪ್ರಮಾಣಕ್ಕಿಂತ ಕಡಿಮೆ ನೀರಿದ್ದರೂ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

       2000 Cusecs Water Released From Tunga Dam In Shivamogga

      ಭದ್ರಾ ಮಾಹಿತಿ: ಭದ್ರಾ ಅಣೆಕಟ್ಟೆಯಲ್ಲಿ ಇಂದು 135 ಅಡಿ ನೀರಿದ್ದು, 3145 ಕ್ಯೂಸೆಕ್ ಒಳ ಹರಿವಿದೆ. ಹೊರ ಹರಿವು 156 ಕ್ಯೂಸೆಕ್ ಆಗಿದ್ದು, ಇಂದಿನ ಸಾಮರ್ಥ್ಯ 23.614 ಟಿಎಂಸಿ ಆಗಿದೆ. ಕಳೆದ ವರ್ಷ ಇದೇ ಹೊತ್ತಿಗೆ 124.2 ಅಡಿ ನೀರಿದ್ದು, ಅಂದಿನ ಸಾಮರ್ಥ್ಯ 17.556 ಟಿಎಂಸಿ ಇತ್ತು. ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರೆ ಹರಿವ ದೃಶ್ಯ ನಯನ ಮನೋಹರವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+