ಶಿವಮೊಗ್ಗಕ್ಕೆ 18 ERSS ವಾಹನ; ಯಾವ ತಾಲೂಕಿಗೆ ಎಷ್ಟು?

ಶಿವಮೊಗ್ಗ, ಜನವರಿ 25 : ವೈಯಕ್ತಿಕ ಸೇರಿದಂತೆ ಯಾವುದೇ ರೀತಿಯ ತುರ್ತು ಸಹಾಯ ಅಗತ್ಯ ಎದುರಾದರೆ ಸಾರ್ವಜನಿಕರ ಸಹಾಯಕ್ಕೆ ಇನ್ನು ಮುಂದೆ ಪೊಲೀಸ್ ಇಲಾಖೆಯ ವಿಶೇಷ ವಾಹನ ಆಗಮಿಸಲಿದೆ. ಶಿವಮೊಗ್ಗ ಜಿಲ್ಲೆಗೆ 18 ಇಆರ್‌ಎಸ್ಎಸ್ ವಾಹನ ಆಗಮಿಸಿದೆ.

18 ವಿಶೇಷ ವಾಹನಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಎಂ. ಶಾಂತರಾಜು ಹಸಿರು ನಿಶಾನೆ ತೋರಿಸಿದ್ದಾರೆ. "ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಈ ತುರ್ತು ಸ್ಪಂದನಾ ವಾಹನಗಳನ್ನು ನೀಡಲಾಗಿದೆ" ಎಂದು ಹೇಳಿದ್ದಾರೆ.

ಸಾರ್ವಜನಿಕರು ವೈಯಕ್ತಿಕ ತುರ್ತು ಪರಿಸ್ಥಿತಿ, ಅಗ್ನಿ ಅನಾಹುತ, ಸರಗಳ್ಳತನ ಸೇರಿದಂತೆ ಯಾವುದೇ ರೀತಿಯ ತೊಂದರೆಯಲ್ಲಿದ್ದರೆ 112 ಸಂಖ್ಯೆಗೆ ಕರೆ ಮಾಡಬಹುದು. ಕರೆ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ವಿಶೇಷ ಪೊಲೀಸ್ ವಾಹನ ಸ್ಥಳಕ್ಕೆ ಆಗಮಿಸಲಿದೆ.

 18 ERSS Vehicles For Shivamogga Taluk Wise List

ಕರೆ ಮಾಡಿದ ವ್ಯಕ್ತಿಯ ಮೊಬೈಲ್‌ಗೆ ಕರೆ ಸ್ವೀಕೃತಿ ಕುರಿತು ಒಂದು ಸಂದೇಶವೂ ಸಹ ಬರಲಿದೆ. Emergency Response Support System (ERSS) ಯೋಜನೆಯಡಿ ಎಲ್ಲಾ ಜಿಲ್ಲೆಗಳಿಗೂ ವಾಹನಗಳನ್ನು ನೀಡಲಾಗುತ್ತಿದೆ.

ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತಾಗಿ ಮಾಹಿತಿ ಇನ್ನು ಮುಂದೆ ನಿರಂತರವಾಗಿ ಪ್ರಕಟವಾಗಲಿದೆ. 112 ಸಂಖ್ಯೆಯ ವಿಶೇಷ ಅಪ್ಲಿಕೇಶ್ ಸಹ ರೂಪಿಸಲಾಗಿದೆ.

 18 ERSS Vehicles For Shivamogga Taluk Wise List

ಯಾವ ತಾಲೂಕಿಗೆ ಎಷ್ಟು? : ಶಿವಮೊಗ್ಗ ಜಿಲ್ಲೆಗೆ ಒಟ್ಟು 18 ಇಆರ್‌ಎಸ್ಎಸ್ ವಾಹನಗಳನ್ನು ಮಂಜೂರು ಮಾಡಲಾಗಿದೆ. ಶಿವಮೊಗ್ಗ ಉಪವಿಭಾಗಕ್ಕೆ 6, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿಗೆ ತಲಾ 3 ವಾಹನಗಳನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+