ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ದಿಯೋಘರ್‌ ರೋಪ್‌ವೇ ಅಪಘಾತ ಹೇಗೆ ಸಂಭವಿಸಿತು ನೋಡಿ

|
Google Oneindia Kannada News

ದಿಯೋಘರ್ ಏಪ್ರಿಲ್ 14: ಜಾರ್ಖಂಡ್‌ನ ದಿಯೋಘರ್‌ನಲ್ಲಿ ನಡೆದ ರೋಪ್‌ವೇ ಅಪಘಾತದಲ್ಲಿ ಸಿಲುಕಿದ ಪ್ರಯಾಣಿಕರನ್ನು ರಕ್ಷಣೆ ಕಾರ್ಯ ನಿನ್ನೆಯಷ್ಟೇ ಪೂರ್ಣಗೊಂಡಿದೆ. ಈ ನಡುವೆ ರೋಪ್‌ವೇ ಅಪಘಾತದ ವಿಡಿಯೋವೊಂದು ಹೊರಬಿದ್ದಿದೆ. ಈ ವಿಡಿಯೋದಲ್ಲಿ ರೋಪ್‌ವೇನಲ್ಲಿ ಕೇಬಲ್ ಚಾಲಿತ ವಾಹನದ ಅಪಘಾತದ ದೃಶ್ಯ ಸೆರೆಯಾಗಿದೆ. ಕೇಬಲ್ ಚಾಲಿತ ವಾಹನ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿರುವ ಭಯಾನಕ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅದರ ನಂತರ ಇಡೀ ರೋಪ್‌ವೇ ಸಮತೋಲನ ತಪ್ಪಿತು. ಈ ಅಪಘಾತದ ನಂತರ ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಟಿಬಿಪಿ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯನ್ನು ನಿನ್ನೆಯಷ್ಟೇ ಪೂರ್ಣಗೊಳಿಸಿವೆ. ಈ ಅವಘಡದಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕೆಲವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅನೇಕರು ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಬಂದಿರುವ ಈ ಅವಘಡದ ವಿಡಿಯೋದಲ್ಲಿ ಕ್ಷಣ ಮಾತ್ರದಲ್ಲಿ ಸುಖ ಶೋಕವಾಗಿ ಮಾರ್ಪಟ್ಟಿರುವುದು ಕಂಡು ಬರುತ್ತಿದೆ.

ಈ ವಿಡಿಯೊವನ್ನು ರೋಪ್‌ವೇಯಲ್ಲಿ ಕ್ಯಾಬಿನ್ ಕಾರಿನಲ್ಲಿ ಪ್ರವಾಸ ಮಾಡುತ್ತಿದ್ದವರೇ ಸೆರೆಹಿಡಿದಿದ್ದಾರೆ ಎನ್ನಲಾಗುತ್ತಿದೆ. 1 ನಿಮಿಷ 10 ಸೆಕೆಂಡ್‌ನ ಈ ವಿಡಿಯೋದಲ್ಲಿ ಮೊದಲ 36 ಸೆಕೆಂಡ್‌ಗಳವರೆಗೆ ಎಲ್ಲವೂ ಮಾಮೂಲಿಯಂತೆ ಕಾಣುತ್ತದೆ. ಆದರೆ ಆ ನಂತರ ಕಣ್ಣ ಮುಂದೆಯೇ ಆ ದೃಶ್ಯ ಸಾವಿನ ಭಯದಲ್ಲಿ ಮುಳುಗುತ್ತದೆ. ಪ್ರಯಾಣಿಕರ ಕೂಗು, ಜೈ ಹನುಮಾನ್ ಎಂಬ ಕೂಗು ಕೇಳಿಬರುತ್ತದೆ. ಅಸಮತೋಲನದಿಂದ 1,500 ಅಡಿ ಎತ್ತರದಲ್ಲಿ ಎರಡು ಟ್ರಾಲಿಗಳು ಹೇಗೆ ಡಿಕ್ಕಿ ಹೊಡೆದವು ಮತ್ತು ನಂತರ ಅದರಲ್ಲಿ ಕುಳಿತಿದ್ದ ಜನರು ಸಹಾಯಕ್ಕಾಗಿ ಕೂಗುವುದನ್ನು ಈ ವಿಡಿಯೊದಲ್ಲಿ ಕಾಣಬಹುದು.

ಪ್ರಯಾಣಿಕನಿಂದ ವಿಡಿಯೋ ಸೆರೆ

ಪ್ರಯಾಣಿಕನಿಂದ ವಿಡಿಯೋ ಸೆರೆ

ವಿಡಿಯೊದ ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿದೆ. ಈ ವಿಡಿಯೊದಲ್ಲಿ ಟ್ರಾಲಿಯ ಲಂಬವಾದ ಕೇಬಲ್ ಕ್ರಮೇಣ ಎತ್ತರದಿಂದ ಕೆಳಗಿಳಿಯುವುದು ಕಾಣಬಹುದು. ಇದರೊಂದಿಗೆ ಕೆಲವು ರೋಪ್ ವೇ ಶಬ್ದಗಳೂ ಕೇಳಿಬರುತ್ತಿದ್ದು, ಆ ಸದ್ದು ಸಹಜವೇ ಅಥವಾ ಮುಂಬರುವ ಅಪಘಾತದ ಸಂಕೇತವೇ ಎಂಬುದು ತನಿಖಾಧಿಕಾರಿಗಳ ವಿಚಾರವಾಗಿದೆ. ಈ ವಿಡಿಯೊ ಮಾಡಿದ ಪ್ರಯಾಣಿಕನು ತ್ರಿಕೂಟ ಪರ್ವತದ ನೋಟವನ್ನು ಮತ್ತು ಕೆಳಗಿನ ಹಸಿರುಗಳನ್ನು ಸೆರೆಹಿಡಿಯುವಲ್ಲಿ ನಿರತನಾಗಿದ್ದನು. ಆದರೆ ಆತ ಶೀಘ್ರದಲ್ಲೇ ತಾನು ಮರಣವನ್ನು ಎದುರಿಸಲಿದ್ದೇನೆ ಎಂದು ತಿಳಿದಿರಲಿಲ್ಲ.

ಎರಡು ರಾತ್ರಿ ಗಾಳಿಯಲ್ಲಿ ತೇಲಾಡಿದ ಪ್ರಯಾಣಿಕರ ಜೀವ

ಎರಡು ರಾತ್ರಿ ಗಾಳಿಯಲ್ಲಿ ತೇಲಾಡಿದ ಪ್ರಯಾಣಿಕರ ಜೀವ

37ನೇ ಸೆಕೆಂಡ್‌ನಲ್ಲಿ ಫೋನ್ ನಲ್ಲಿ ಸೆರೆಯಾಗುತ್ತಿದ್ದ ಬದಲಾಗುತ್ತದೆ. ವಿಡಿಯೋದಲ್ಲಿ ಏನೂ ಗೋಚರಿಸುವುದಿಲ್ಲ. ಹೀಗೆ ಏನೂ ಗೋಚರಿಸದೇ ಫೋನ್ನ ರೆಕಾರ್ಡಿಂಗ್ ಮುಂದುವರಿಯುತ್ತದೆ. ಆಗ ಪ್ರಯಾಣಿಕರಲ್ಲಿದ್ದ ಉತ್ಸಾಹದ ಬದಲು ಜೀವ ಉಳಿಸಿ ಎಂಬ ಕೂಗು ಕೇಳಿಬರುತ್ತದೆ. ಪ್ರಯಾಣಿಕರಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಈ ಅವಘಡದೊಂದಿಗೆ ಭಾನುವಾರದ ರಜಾ ದಿನದಲ್ಲಿ ಎರಡು ದಿನ ಸುಮಾರು 50 ಮಂದಿಯ ಜೀವ ಗಾಳಿಯಲ್ಲಿ ತೇಲಾಡಿದೆ. ಅಂದರೆ ರಕ್ಷಣೆ ಸಾಧ್ಯವಾಗದೇ ರೋಪ್‌ವೇ ವಾಹನಗಳಲ್ಲೇ ಜನ ಸಿಲಿಕಿ ನರಕ ಯಾತನೆ ಅನುಭವಿಸಿದ್ದಾರೆ. ಟ್ರಾಲಿಗಳು ನೆಲದಿಂದ ನೂರಾರು ಅಡಿ ಎತ್ತರದಲ್ಲಿದ್ದವು ಮತ್ತು ಬದುಕುಳಿಯುವ ಭರವಸೆ ಕ್ಷಣ ಕ್ಷಣಕ್ಕೂ ಕ್ಷೀಣಿಸಿ ಪ್ರಯಾಣಿಕರು ಈ ಅಘಾತದಿಂದ ಈಗಲೂ ಹೊರಬರುತ್ತಿಲ್ಲ.

ರಕ್ಷಣೆಯ ವೇಳೆ ಪ್ರಯಾಣಿಕರು ಸಾವು

ಸ್ಥಳೀಯ ಆಡಳಿತ ಮತ್ತು ರೋಪ್‌ವೇ ನಿರ್ವಹಿಸುವ ಕಂಪನಿಯು ಯಾವುದೇ ಪೂರ್ವ ಸಿದ್ಧತೆಯನ್ನು ಹೊಂದಿರಲಿಲ್ಲ. ಅಂತಹ ಅಪಘಾತವನ್ನು ತಪ್ಪಿಸಲು ಅವರ ಬಳಿ ಯಾವುದೇ ಸಾಧನಗಳಿಲ್ಲ. ಆದ್ದರಿಂದ, ವಾಯುಪಡೆ, ಐಟಿಬಿಪಿ ಮತ್ತು ಎನ್‌ಡಿಆರ್‌ಎಫ್‌ಗಳನ್ನು ರಕ್ಷಣೆಗಾಗಿ ಕರೆಯಬೇಕಾಯಿತು. ಈ ಕೆಲಸವು ಪ್ರಾರಂಭದಲ್ಲಿ ಸಾಕಷ್ಟು ಸಮಯ ತೆಗೆದುಕೊಂಡಿತು. ಅಂತಿಮವಾಗಿ, ಸುಮಾರು ಎರಡು ದಿನಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ, ಟ್ರಾಲಿಗಳಲ್ಲಿ ಸಿಕ್ಕಿಬಿದ್ದ ಜನರನ್ನು ಸುರಕ್ಷಿತವಾಗಿ ಕರೆತರಲಾಯಿತು. ಆದರೆ ರಕ್ಷಣೆಯ ವೇಳೆ ಇಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ದಿಯೋಘರ್ ರೋಪ್‌ವೇ ಅಪಘಾತದ ವಿಡಿಯೋ

ದಿಯೋಘರ್ ರೋಪ್‌ವೇ ಅಪಘಾತದ ವಿಡಿಯೋ

ಇಲ್ಲಿ ಹಂಚಿಕೊಂಡಿರುವ ಅಪಘಾತದ ವಿಡಿಯೊವನ್ನು ಉತ್ಕರ್ಷ್ ಸಿಂಗ್ ಎಂಬ ಬಳಕೆದಾರರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಅವಘಡದ ನಂತರ ರಕ್ಷಣೆ ಪಡೆದಿರುವ ಜನ, ತಮ್ಮ ಜೀವನದ ಭರವಸೆ ಕಳೆದುಹೋಗಿತ್ತು ಎಂದು ಹೇಳುತ್ತಾರೆ. ಜೊತೆಗೆ ಅವರು ಬದುಕಲು ಸಾಧ್ಯವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ರಕ್ಷಣಾ ಕಾರ್ಯಕರ್ತರು ನಮಗೆ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ಕೆಲವು ಪ್ರಯಾಣಿಕರು ಆಸ್ಪತ್ರೆಯಲ್ಲಿದ್ದಾರೆ. ಕೆಲವರು ಅವ್ಯವಸ್ಥೆಯ ಬಗ್ಗೆ ದೂರು ನೀಡಿದ್ದಾರೆ, ಆದರೆ ಅನೇಕರು ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

English summary
Video of Deoghar cable car crash: Ropeway accident in Deoghar Jharkhand Video share. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X