ಐಟಿಬಿಪಿ ಶಿಬಿರದಲ್ಲಿ ಜಗಳ: 6 ಪೊಲೀಸರ ಸಾವು,ಇಬ್ಬರಿಗೆ ಗಾಯ
ರಾಯಪುರ್, ಡಿಸೆಂಬರ್ 04: ಛತ್ತೀಸಗಡದ ನಾರಾಯಣಪುರ ಜಿಲ್ಲೆಯ ಕದೇನರ್ ಎಂಬ ಪ್ರದೇಶದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಶಿಬಿರದಲ್ಲಿ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದು 6 ಜನ ಸಿಬ್ಬಂದಿಗಳು ಗುಂಡೇಟಿಗೆ ಬಲಿಯಾಗಿದ್ದಾರೆ. ಈ ವಾಗ್ವಾದದಲ್ಲಿ ಇಬ್ಬರು ಪೊಲೀಸರು ಗಾಯಾಳಾಗಿದ್ದಾರೆ.
ಮಾತಿಗೆ ಮಾತು ಬೆಳೆದು ಜಗಳ ಹಂತದವರೆಗೆ ಹೋಗಿದೆ, ನಂತರ ಈ ಜಗಳ ತಾರಕಕ್ಕೇರಿ ಸಿಬ್ಬಂದಿಯೊಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬಸ್ತಾರ್ ನ ಐಜಿಪಿ ಸುಂದರ್ ರಾಜ್ ಹೇಳಿದ್ದಾರೆ. ನಂತರ ಗೊಂಡು ಹಾರಿಸದ ವ್ಯಕ್ತಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಛತ್ತೀಸಗಡ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಶಿಬಿರದಲ್ಲಿ ತಮ್ಮ ತಮ್ಮಲ್ಲಿ ಪೊಲೀಸರು ಮಾತನಾಡುವಾಗ ಯಾವುದೋ ವಿಚಾರಕ್ಕೆ ಪರಸ್ಪರ ಜಗಳವಾಗಿದೆ, ಅದು ಗುಂಡು ಹಾರಿಸುವ ಹಂತಕ್ಕೆ ಹೋಗಿದ್ದು ವಿಪರ್ಯಾಸ.

ನಾರಾಯಣ್ ಪುರ ಪೊಲೀಸ್ ಅಧಿಕಾರಿ ಮೋಹಿತ್ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ, ಐಟಿಬಿಪಿ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗಕ್ಕೆ ಇನ್ನು ಯಾವುದೇ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications