Breaking; ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು

ರಾಂಚಿ, ಏಪ್ರಿಲ್ 22; ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು ಸಿಕ್ಕಿದೆ. ಜಾರ್ಖಂಡ್ ಹೈಕೋರ್ಟ್ ಆರೋಗ್ಯದ ಕಾರಣವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.

ಶುಕ್ರವಾರ ಜಾರ್ಖಂಡ್ ಹೈಕೋರ್ಟ್ ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಬಾಂಡ್ ನೀಡಬೇಕು, 10 ಲಕ್ಷ ರೂ. ದಂಡ ಮೊತ್ತವನ್ನು ಪಾವತಿ ಮಾಡಬೇಕು ಎಂದು ಆದೇಶಿಸಿದೆ.

Fodder Scam Lalu Prasad Yadav Gets Bail

ಎನ್‌ಎನ್‌ಐ ಜೊತೆ ಮಾತನಾಡಿದ ಲಾಲೂ ಪ್ರಸಾದ್ ಪರ ವಕೀಲರು ಶೀಘ್ರವೇ ಅವರು ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಮೇವು ಹಗರಣದ ವಿವಿಧ ಪ್ರಕರಣದಲ್ಲಿ ಜೈಲುವಾಸದಲ್ಲಿರುವ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಹದಗೆಟ್ಟಿತ್ತು.

2021ರ ಫೆಬ್ರವರಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಅಪರಾಧಿ ಎಂದು ತೀರ್ಪು ನೀಡಿತ್ತು. 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು, 60 ಲಕ್ಷ ರೂ. ದಂಡ ಹಾಕಿತ್ತು.

ಇದಕ್ಕೂ ಮೊದಲು ಧುಮ್ಕಾ ಖಜಾನೆಯಿಂದ ಹಣ ವರ್ಗಾವಣೆ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಘೋಷಿಸಲಾಗಿತ್ತು. ಸಿಬಿಐ ಕೋರ್ಟ್ ಶಿಕ್ಷೆ ಘೋಷಣೆ ಬಳಿಕ ಲಾಲೂ ಪ್ರಸಾದ್ ಯಾದವ್‌ ಬಿರ್ಸಾ ಮುಂಡಾ ಜೈಲಿನಲ್ಲಿದ್ದರು. ಬಳಿಕ ರಾಂಚಿಯ ಜೈಲಿಗೆ ಸ್ಥಳಾಂತರಗೊಂಡಿದ್ದರು.

ಬಹುಕೋಟಿ ರೂಪಾಯಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಪ್ರಕರಣ ದಾಖಲಾಗಿದೆ. ಎಲ್ಲಾ ಪ್ರಕರಣದಲ್ಲಿಯೂ ಲಾಲೂ ಪ್ರಸಾದ್ ಯಾದವ್ ಮುಖ್ಯ ಅಪರಾಧಿ. ಮೇವು ಹಗರಣದಲ್ಲಿ ಒಟ್ಟು 99 ಆರೋಪಿಗಳಿದ್ದರು. 24 ಆರೋಪಿಗಳು ಖುಲಾಸೆಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+