• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಪಾಕಿಸ್ತಾನ ಜಿಂದಾಬಾದ್' ಘೋಷಣೆ: 62 ಮಂದಿ ವಿರುದ್ಧ ಪ್ರಕರಣ ದಾಖಲು

|
Google Oneindia Kannada News

ರಾಂಚಿ ಮೇ 22: ಜಾರ್ಖಂಡ್ ನ ಹಜಾರಿಬಾದ್ ಜಿಲ್ಲೆಯಲ್ಲಿ ಇತ್ತೀಚಿಗೆ ಜರುಗಿದ ಪಂಚಾಯತಿ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಮೆರವಣಿಗೆ ಸಂದರ್ಭದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ಆರೋಪದಲ್ಲಿ 62 ಮಂದಿ ವಿರುದ್ಧ ಜಾರ್ಖಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

"ಹಜಾರಿಬಾದ್ ನ ಬಜಾರ್‌ ಸಮಿತಿಯ ಹೊರಗೆ ನಡೆಯುತ್ತಿದ್ದ ಪಂಚಾಯತಿ ಚುನಾವಣೆಯ ಗೆಲುವಿನ ಸಂಭ್ರಮಾಚರಣೆಯ ಮೆರವಣಿಗೆಯಲ್ಲಿ ಕೆಲವರು ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಸಾಕ್ಷ್ಯವನ್ನು ಪರಿಗಣಿಸಿ, ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋ ಅಸಲಿಯತ್ತು ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಇದುವರೆಗೂ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ,'' ಎಂದು ಹಜಾರಿಬಾದ್ ಎಸ್‌ಪಿ ಮನೋಜ್‌ ರತನ್‌ ಚೋತೆ ತಿಳಿಸಿದ್ದಾರೆ.

ಕಲ್ಲಿದ್ದಲು ಕೊರತೆ ಆತಂಕ: ಜಾರ್ಖಂಡ್‌ನಲ್ಲಿ ಜೋಶಿ ಸಭೆಕಲ್ಲಿದ್ದಲು ಕೊರತೆ ಆತಂಕ: ಜಾರ್ಖಂಡ್‌ನಲ್ಲಿ ಜೋಶಿ ಸಭೆ

ಇತ್ತೀಚಿಗೆ ಜರುಗಿದ ಪಂಚಾಯತಿ ಚುನಾವಣೆಯಲ್ಲಿ ಸ್ಥಳೀಯ ನಾಯಕಿ ಅಮೀನಾ ಖಾಟೂನ್ ಗೆಲುವು ಸಾಧಿಸಿದ್ದರು. ಇವರ ಗೆಲುವಿನ ಸಂಭ್ರಮಾಚಾರಣೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ದೇಶ ವಿರೋಧಿಗಳು ಪಾಕ್‌ ಪರ ಘೋಷಣೆ ಕೂಗಿದ್ದಾರೆ.

12 ಮಂದಿ ವ್ಯಕ್ತಿಗಳು ಹಾಗೂ 50 ಮಂದಿ ಅಪರಿಚಿತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

"ವೈರಲ್ ಆಗಿರುವ ವಿಡಿಯೋ ಹಿಂದಿನ ನಿಜಾಂಶ ತಿಳಿಯುವ ನಿಟ್ಟಿನಲ್ಲಿ ಪೊಲೀಸರ ಒಂದು ತಂಡ ತನಿಖೆ ಕೈಗೊಂಡಿದೆ. ಒಂದು ವೇಳೆ ವಿಡಿಯೋ ಅಸಲಿ ಎಂದು ತಿಳಿದುಬಂದರೆ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು,'' ಎಂದು ಎಸ್‌ಪಿ ಮನೋಜ್‌ ರತನ್‌ ಚೋತೆ ಹೇಳಿದರು.

ಹರಿಯಾಣ: ಬ್ಯಾಟರಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಮೂವರು ಕಾರ್ಮಿಕರ ಸಾವುಹರಿಯಾಣ: ಬ್ಯಾಟರಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಮೂವರು ಕಾರ್ಮಿಕರ ಸಾವು

62 booked for raising Pakistan Zindabad slogans in Jharkhand

ಇತ್ತೀಚೆಗೆ ನಡೆದ ಜಾರ್ಖಂಡ್‌ನಲ್ಲಿ ನಡೆದ ನಾಲ್ಕು ಹಂತದ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ಜಾರ್ಖಂಡ್‌ನ ಗಿರಿಧಿ ಕ್ಷೇತ್ರದ ಅಭ್ಯರ್ಥಿ ಹಾಗೂ ಆತನ ಇಬ್ಬರು ಬೆಂಬಲಿಗರನ್ನು ಏಪ್ರಿಲ್‌ 21ರಂದು ಜಾರ್ಖಂಡ್ ಪೊಲೀಸರು ಬಂಧಿಸಿದ್ದರು.

(ಒನ್ಇಂಡಿಯಾ ಸುದ್ದಿ)

English summary
62 booked for raising 'Pakistan Zindabad' slogans in Jharkhand's panachayth poll victory rally
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X