ಡಿಕೆಶಿ ಅಂದು ತನಿಖೆ ನಡೆಸಿದ್ದರೆ ಇಂದು ಹೀಗಾಗುತ್ತಿರಲಿಲ್ಲ; ಎಚ್ ಡಿಕೆ

Recommended Video

      ಡಿಕೆಶಿ ಗೆ ಅವತ್ತು ಕುಮಾರಣ್ಣ ಹೇಳಿದ್ದೇನು ಗೊತ್ತಾ..? | HD Kumaraswamy | Oneindia Kannada

      ರಾಮನಗರ, ಸೆಪ್ಟೆಂಬರ್ 20: "ಯಡಿಯೂರಪ್ಪ ಅವರೇ ಐಟಿಗೆ ದೂರು ನೀಡಿ ಡಿಕೆಶಿ ಮೇಲೆ ಕ್ರಮ ಕೈಗೊಳ್ಳಿ ಅಂತ ಪತ್ರ ಬರೆದಿದ್ದಾರೆ. ಆದರೆ ಈಗ ದ್ವೇಷದ ರಾಜಕಾರಣ ಇಲ್ಲ ಎಂದು ಸುಮ್ಮನೆ ಹೇಳುತ್ತಾರೆ. ಅಂದಿನ ಬಿಜೆಪಿ ಸರ್ಕಾರದಲ್ಲಿ ವಿದ್ಯುತ್ ಛಕ್ತಿ ಹಗರಣ ನಡೆದಿತ್ತು. ಆಗ ಡಿ.ಕೆ.ಶಿವಕುಮಾರ್ ವಿದ್ಯುತ್ ಮಂತ್ರಿಯಾಗಿದ್ದರು. ನಾನು ಡಿಕೆಶಿಗೆ ಹೇಳಿದ್ದೆ, ಕಳೆದ ಸರಕಾರದ ವಿದ್ಯುತ್ ಹಗರಣವನ್ನು ತನಿಖೆ ಮಾಡಿ ಅಂತ. ಅಂದು ಡಿಕೆಶಿ ತನಿಖೆ ಮಾಡಿಸಿದ್ದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಯಡಿಯೂರಪ್ಪ ಕುರಿತು ಮತ್ತೆ ಗುಡುಗಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

      ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, "ನಾನು ಮುಖ್ಯಮಂತ್ರಿ ಆಗಿದ್ದ 14 ತಿಂಗಳಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದೆ. 1200 ಕೋಟಿ ಹಣವನ್ನು ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದೆ. ಆದರೆ ಇಂದು ಅಧಿಕಾರದಲ್ಲಿ ಇರುವವರು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ" ಎಂದು ಹರಿಹಾಯ್ದರು.

      "ಸಿಎಂ ಸ್ಥಾನ ಮುಳ್ಳಿನ ಹಾಸಿಗೆಯಂತಿತ್ತು"

      "ಕೆಲವರು ಕೆಲಸ ಮಾಡದೆ ಬಿಟ್ಟಿ ಪ್ರಚಾರ ಪಡೆಯುತ್ತಾರೆ. ನಾನು ಯಾರನ್ನೂ ಟೀಕೆ ಮಾಡಲು ಹೋಗುವುದಿಲ್ಲ. ಮಾಧ್ಯಮದವರು ರಾಜ್ಯದ ದಿಕ್ಕು ತಪ್ಪಿಸುತ್ತಿದ್ದಾರೆ. ನಾನು ಸಿಎಂ ಆಗಿದ್ದ ವೇಳೆ ಸಾಕಷ್ಟು ನೋವು ಪಟ್ಟಿದ್ದೇನೆ. ನನಗೆ ಸಿಎಂ ಸ್ಥಾನ ಮುಳ್ಳಿನ ಹಾಸಿಗೆಯಂತಿತ್ತು. ಪ್ರತಿ ತಾಲ್ಲೂಕಿನ ರೈತರ ಸಾಲಮನ್ನ ವಿವರವನ್ನು ಬರೆದಿಟ್ಟುಕೊಂಡು ಬುಕ್ ಮಾಡುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಆ ಪುಸ್ತಕ ಬಿಡುಗಡೆ ಮಾಡುತ್ತೇನೆ. ಮಾಧ್ಯಮ ಮಿತ್ರರು ಆಗಲಾದರೂ ಒಪ್ಪಿಕೊಳ್ಳುತ್ತಾರಾ ನೋಡಬೇಕು" ಎಂದರು.

       ಕೋಡಿಮಠ ಸ್ವಾಮಿಗಳ ಹೇಳಿಕೆಗೆ ಎಚ್ ಡಿಕೆ ಪ್ರತಿಕ್ರಿಯೆ

      ಕೋಡಿಮಠ ಸ್ವಾಮಿಗಳ ಹೇಳಿಕೆಗೆ ಎಚ್ ಡಿಕೆ ಪ್ರತಿಕ್ರಿಯೆ

      ಇದೇ ಸಮಯದಲ್ಲಿ, ಬಿಜೆಪಿ ಸರ್ಕಾರದ ಆಯಸ್ಸು ಮೂರ್ನಾಲ್ಕು ತಿಂಗಳು ಎಂಬ ಕೋಡಿಮಠ ಸ್ವಾಮಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,"ಸರ್ಕಾರದ ನಡವಳಿಕೆಗಳನ್ನು ನೋಡಿದರೆ ಯಾವ ಸಮಯದಲ್ಲಿ ಬೇಕಾದರೂ ಬೀಳುವಂತಿದೆ. ಸಮಯ ಬರುತ್ತೆ ಕಾದುನೋಡಿ. ನಮಗೆ ಯಾರ ಮೇಲೆ ಸಿಟ್ಟು ಇಲ್ಲ. ಆದರೆ ಎಲ್ಲಾ ವಿಚಾರಗಳಿಗೆ ನನ್ನ ಹೆಸರನ್ನು ಯಾಕೆ ತಳಕು ಹಾಕುತ್ತಾರೆ ಗೊತ್ತಿಲ್ಲ" ಎಂದು ಹೇಳಿದರು.

       ಡಿಕೆಶಿ ವಿಚಾರಣೆ ಮಾಧ್ಯಮದವರೇ ಮಾಡ್ತಿದ್ದಾರಾ?

      ಡಿಕೆಶಿ ವಿಚಾರಣೆ ಮಾಧ್ಯಮದವರೇ ಮಾಡ್ತಿದ್ದಾರಾ?

      ಇದೀಗ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ವಿಚಾರಣೆ ಮಾಡುತ್ತಿದೆ. ಆದರೆ ಮಾಧ್ಯಮದವರು ಪ್ರತಿನಿತ್ಯ ತಾವೇ ಹೋಗಿ ಬಂದು ಡಿಕೆಶಿ ಅವರ ವಿಚಾರಣೆ ಮಾಡಿದ ಹಾಗೆ ಸುದ್ದಿ ಮಾಡುತ್ತಿದ್ದಾರೆ. ನಾನಂತೂ ಯಾವ ಇಡಿ ಸಿಬಿಐಗೆ ಹೆದರುವುದಿಲ್ಲ. ನಾನು ಯಾವ ತಪ್ಪು ಮಾಡಿಲ್ಲ, ಪಾಪದ ಹಣ ಮಾಡಿಲ್ಲ" ಎಂದು ಮಾಧ್ಯಮಗಳ ಕುರಿತು ಮತ್ತೆ ಮಾತನಾಡಿದ್ದಾರೆ.

      "ನಾನು ರಾಜಕೀಯದಿಂದ ನಿವೃತ್ತಿ ಪಡೆಯಬೇಕೆಂದುಕೊಂಡೆ. ಆದರೆ ಕೆಲ ಬಡ ಜನರು ಪ್ರತಿನಿತ್ಯ ನನ್ನ ಮನೆ ಮುಂದೆ ಒಂದಲ್ಲ ಒಂದು ಕಷ್ಟಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಅಂಥವರ ಕಷ್ಟ ನೀಗಿಸಲು ನಾನು ರಾಜಕೀಯದಲ್ಲಿ ಉಳಿದುಕೊಂಡಿದ್ದೇನೆ. ಉತ್ತರ ಕರ್ನಾಟಕದಲ್ಲೂ ನೆರೆ ಬಂದು ಆ ಭಾಗದ ಜನರು ಕಷ್ಟದಲ್ಲಿದ್ದಾರೆ. ಆದರೆ ಯಡಿಯೂರಪ್ಪ ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ನಾನು ಸಿಎಂ ಆಗಿದ್ದಿದ್ದರೆ ನನ್ನ ಮಾನ ಹರಾಜು ಹಾಕುತ್ತಿದ್ರು ಈ ಮಾಧ್ಯಮದವರು. ಈ ಬಗ್ಗೆ ಯಡಿಯೂರಪ್ಪ ಅವರನ್ನು ಕೇಳುತ್ತಿಲ್ಲ. ಮಾಧ್ಯಮದವರು ನನ್ನ ಸರ್ಕಾರವನ್ನು ತೆಗೆದು ಯಡಿಯೂರಪ್ಪ ಅವರನ್ನು ಕುರ್ಚಿಯಲ್ಲಿ ತಂದು ಕೂರಿಸಿದ್ದಾರೆ" ಎಂದು ಮತ್ತೆ ಮಾಧ್ಯಮದಡೆಗೆ ಬೊಟ್ಟು ಮಾಡಿದರು.

       ಮನೆಯಿಂದ ಪರಿಹಾರ ಕೊಡುವರೇ ಮೋದಿ?

      ಮನೆಯಿಂದ ಪರಿಹಾರ ಕೊಡುವರೇ ಮೋದಿ?

      "ಈ ಕ್ಷೇತ್ರದ ಮಾಜಿ ಶಾಸಕ (ಸಿ.ಪಿ.ಯೋಗೀಶ್ವರ್) ಸೇರಿ ನಮ್ಮ ಸರ್ಕಾರವನ್ನು ಕೆಡವಿದರು. ಸರ್ಕಾರವನ್ನು ಬೀಳಿಸಲು ಶಾಸಕರ ಖರೀದಿಗೆ ಕೋಟಿ ಕೋಟಿ ಹಣ ಎಲ್ಲಿಂದ ಬಂತು? ಆ ಮಾತಿರಲಿ, ಮೋದಿ ರಾಜ್ಯದ ನೆರೆ ಜನರಿಗೆ ಏನು ಕೊಟ್ಟರು? ಒಂದು ಬಿಡುಗಾಸನ್ನೂ ಬಿಡುಗಡೆ ಮಾಡಿಲ್ಲ. ಮೋದಿ ಏನ್ ಅವರ ಮನೆಯಿಂದ ಪರಿಹಾರ ತಂದು ಕೊಡುತ್ತಾರಾ?" ಎಂದು ಪ್ರಶ್ನಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+