ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಕೊರೊನಾ ವೈರಸ್ ಗೆ ಮೂರನೇ ಬಲಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 21: ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ರಾಮನಗರ ತಾಲ್ಲೂಕಿನ ಮಾಗಡಿ ಪಟ್ಟಣದ ನಿವಾಸಿ (86 ವರ್ಷ) ಸಾವನ್ನಪ್ಪದ್ದಾನೆ. ವೃತ್ತಿಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಈತನ ಮಗನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮಗ ಚಿಕಿತ್ಸೆ ಪಡೆಯುತ್ತಿದ್ದನು.

Recommended Video

ಕಳೆದ 2 ವಾರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 7 ₹ ಹೆಚ್ಚಳ | Petrol Price Hiked | Oneindia Kannada

ಮೆಕಾನಿಕ್ ತಂದೆ, ತಾಯಿ, ಅತ್ತಿಗೆ ಹಾಗೂ 15 ವರ್ಷದ ಬಾಲಕಿ ಸೇರಿ ಎಲ್ಲರನ್ನೂ ಆರೋಗ್ಯ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು. ಈಗ ಅನಾರೋಗ್ಯದಿಂದ ಬಳಲುತ್ತಿದ್ದ ಮೆಕಾನಿಕ್ ತಂದೆ ಸಾವನ್ನಪ್ಪಿದ್ದು, ಸಾವಿನ ಬಳಿಕ ಗಂಟಲು ದ್ರವ ಪರೀಕ್ಷೆಯಿಂದ ಕೊರೊನಾ ವೈರಸ್ ಸೋಂಕಿರುವುದು ದೃಢವಾಗಿದೆ.

ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ; ರಾಮನಗರದಲ್ಲಿ ತಡರಾತ್ರಿ ನಿವಾಸಿಗಳ ವಿರೋಧಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ; ರಾಮನಗರದಲ್ಲಿ ತಡರಾತ್ರಿ ನಿವಾಸಿಗಳ ವಿರೋಧ

ಭಾನುವಾರ ಕಂಕಣ ಸೂರ್ಯಗ್ರಹಣ ಹಿನ್ನೆಲೆ ಕೊರೊನಾ ವೈರಸ್ ನಿವಾರಣೆಗಾಗಿ ಮತ್ತು ದೇಶದ ಗಡಿ ಕಾಯುತ್ತಿರುವ ವೀರ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಯಿತು. ಗಣಪತಿ ಹೋಮ, ನವಗ್ರಹ ಪೂಜೆ, ಅರುಣಯಾಗ, ಅಗ್ನಿ ಹೋಮವನ್ನು ರಾಮನಗರದಲ್ಲಿ ನೆರವೇರಿಸಲಾಯಿತು.

Third Coronavirus Victim Death Reported In Chikkamagaluru

ಕಂಕಣ ಸೂರ್ಯಗ್ರಹಣದ ಪ್ರಾರಂಭದಿಂದಲೂ ಮಂತ್ರಘೋಷ, ದೀಪಾರಾಧನೆಮಾಡಿ ಪ್ರಸನ್ನಾಂಭ ಸಮೇತ ಅರ್ಕೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.

ಕನಕಪುರ ಸೋಂಕಿತ ವೈದ್ಯ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ 25 ಮಂದಿಗೆ ಸೋಂಕುಕನಕಪುರ ಸೋಂಕಿತ ವೈದ್ಯ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ 25 ಮಂದಿಗೆ ಸೋಂಕು

ದುಷ್ಟ ಶಕ್ತಿಗಳ ಸಂಹಾರ, ಲೋಕ ಕಲ್ಯಾಣಾರ್ಥವಾಗಿ ಅರ್ಕೇಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ದತ್ತಾತ್ರೇಯ ಶಾಸ್ತ್ರಿ ನೇತೃತ್ವದಲ್ಲಿ ಪೂಜೆ, ಪ್ರಾರ್ಥನೆ ಮಾಡಲಾಯಿತು.

Third Coronavirus Victim Death Reported In Chikkamagaluru

ಪಶ್ಚಿಮಾಭಿಮುಖವಾಗಿ ಅರ್ಕಾವತಿ ನದಿ ದಡದಲ್ಲಿ ಅರ್ಕೇಶ್ವರ ಸ್ವಾಮಿ ದೇಗುಲವಿದ್ದು, ಜಗತ್ತಿನಾದ್ಯಂತ ಮಹಾಮಾಹರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ನಾಶವಾಗಲಿ ಹಾಗೂ ನಮ್ಮ ದೇಶದ ಗಡಿ ಕಾಯುತ್ತಿರುವ ವೀರ ಯೋಧರಿಗೆ ದೇವರ ಅನುಗ್ರಹವಿರಲಿ. ಯೋಧರ ಮನೋಸ್ಥೈರ್ಯ, ಶಕ್ತಿ ಮತ್ತಷ್ಟು ಹೆಚ್ಚಾಗಲೆಂದು ಪ್ರಾರ್ಥನೆ ಮಾಡಲಾಯಿತು.

English summary
A 86 year old resident of the Magadi town of Ramanagara Taluk has died of coronavirus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X