ಆಸ್ತಿ ಪಾಲು ನೀಡಲಿಲ್ಲ ಎಂದು ಹೆತ್ತವಳನ್ನೇ ಕೊಂದ ಮಗ

ರಾಮನಗರ, ಸೆಪ್ಟೆಂಬರ್ 23: ಆಸ್ತಿಯಲ್ಲಿ ಪಾಲು ನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೊಂದಿರುವ ಘಟನೆ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೋಟಗೊಂಡನಹಳ್ಳಿ ಸಮೀಪದ ಕಾಟನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಆರು ದಿನಗಳ ಹಿಂದೆ ನಡೆದಿದ್ದ ಕಾಟನಪಾಳ್ಯ ಗ್ರಾಮದ 76 ವರ್ಷದ ಗಂಗಹನುಮಕ್ಕ ಕೊಲೆ ಪ್ರಕರಣವನ್ನು ಭೇದಿಸಿರುವ ತಾವರೆಕೆರೆ ಪೊಲೀಸರು ಮೃತ ಗಂಗಹನುಮಕ್ಕಳ ಎರಡನೇ ಮಗ ಸಿದ್ದರಾಜು, ಆತನ ಸ್ನೇಹಿತ ಲಕ್ಷ್ಮಣ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಯಾದ ಗಂಗಹನುಮಕ್ಕ ಅವರಿಗೆ ಇಬ್ಬರು ಮಕ್ಕಳಿದ್ದು ಪಿತ್ರಾರ್ಜಿತವಾಗಿ ಬಂದ ಎಲ್ಲಾ ಆಸ್ತಿಯನ್ನು ಹಿರಿಯ ಮಗನ ಹೆಸರಿಗೆ ನೀಡಿದ್ದರು. ಎರಡನೇ ಮಗನಿಗೆ ಆಸ್ತಿಯಲ್ಲಿ ಪಾಲು ನೀಡಲಿಲ್ಲ. ಹೀಗಾಗಿ ಕೋಪಗೊಂಡ ಆತ ತನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾನೆ.

 Son Killed His Mother For Not Giving Property Share In Tavarekere

ಎರಡು ವರ್ಷಗಳ ಹಿಂದೆ ತನ್ನ ಪತ್ನಿ ಮನೆ ಬಿಟ್ಟು ಹೋಗಲು ಗಂಗಹನುಕ್ಕಳ ಕಿರುಕುಳ ಎಂದು ಸಿದ್ದರಾಜು ಆರೋಪಿಸಿದ್ದು, ಎರಡೂ ಕಾರಣಗಳಿಂದ ತನ್ನ ಸ್ನೇಹಿತನೊಂದಿಗೆ ಸೇರಿ, ಇದೇ ತಿಂಗಳ 14ರಂದು ಸಂಜೆ ಗಂಗಹನುಮಕ್ಕ ಕೆಲಸ ಮುಗಿಸಿಕೊಂಡು ಬರುವಾಗ ಕಲ್ಲಿನಿಂದ ಹೊಡೆದು ಸಾಯಿಸಿ ಹಳ್ಳದಲ್ಲಿ ಹಾಕಿರುವುದಾಗಿ ತಿಳಿಸಿದ್ದಾನೆ.

ಸೆಪ್ಟೆಂಬರ್ 16ರಂದು ಕಾಟನಪಾಳ್ಯದ ಹಳ್ಳದಲ್ಲಿ ಗಂಗಹನುಮಕ್ಕ ಶವ ದೊರೆತಿದ್ದು, ಈ ಬಗ್ಗೆ ಮೊದಲನೇ ಮಗ ಲಕ್ಷ್ಮಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಹತ್ತಿದ್ದ ತಾವರೆಕೆರೆ ಪೊಲೀಸರು ತಾಯಿಯನ್ನು ಕೊಂದ ಮಗನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+