• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟರ್‌ ಐಡಿ ಅಕ್ರಮದಲ್ಲಿ ಯಾರಿದ್ದಾರೆ ಎನ್ನುವುದು ಬಯಲಾಗಬೇಕು: ಡಿ.ಕೆ‌.ಶಿವಕುಮಾರ್ ಆಗ್ರಹ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್‌, 21: ''ವೋಟರ್ ಐಡಿ ಅಕ್ರಮದಲ್ಲಿ ಒಬ್ಬ ಕಿಂಗ್‌ಪಿನ್ ಬಂಧನ ಮಾಡಿದರೆ ಸಾಲದು. ಅಕ್ರಮದ ಹಿಂದೆ ಯಾರಿದ್ದಾರೆ, ಯಾವ ರಾಜಕಾರಣಿಗಳು ಇದ್ದಾರೆ ಎಂಬುದು ಬಯಲಾಗಬೇಕು'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಕಪುರ ತಾಲೂಕಿನ ಬಿಳಿದಾಳೆಯಲ್ಲಿ ಆಗ್ರಹಿಸಿದರು.

‌‌ಕನಕಪುರ ತಾಲೂಕಿನ ಬಿಳಿದಾಳೆ ಗ್ರಾಮದ ಜಡೆಲಿಂಗೇಶ್ವರ ಸ್ವಾಮಿ ದೇಗುಲದ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವೋಟರ್ ಐಡಿ ಹಗರಣದಲ್ಲಿ ಬಿಜೆಪಿಯವರು ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರನ್ನು ಹಿಡಿದು ತೋರಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚನ್ನಪಟ್ಟಣಕ್ಕೆ 3,000 ಮನೆ ಮಂಜೂರು: ಯೋಗೇಶ್ವರ್-ಎಚ್.ಡಿ.ಕುಮಾರಸ್ವಾಮಿ ನಡುವೆ ಕ್ರೆಡಿಟ್‌ ವಾರ್‌ಚನ್ನಪಟ್ಟಣಕ್ಕೆ 3,000 ಮನೆ ಮಂಜೂರು: ಯೋಗೇಶ್ವರ್-ಎಚ್.ಡಿ.ಕುಮಾರಸ್ವಾಮಿ ನಡುವೆ ಕ್ರೆಡಿಟ್‌ ವಾರ್‌

27 ಬಿಎಲ್ಓ ನೇಮಕ ಮಾಡಲು ಯಾವ ದೇಶದಲ್ಲಿಯೇ ಆಗಲಿ ಅಥವಾ ನಮ್ಮ ದೇಶದಲ್ಲೂ‌ ಯಾರಿಗೂ ಅಧಿಕಾರ ಇಲ್ಲ. ಆ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ನೋಟು ಪ್ರಿಂಟ್ ಮಾಡಿದರೆ ಎಷ್ಟು ದೊಡ್ಡ ಅಪರಾಧವೋ, ವೋಟರ್ ಐಡಿ ಹಗರಣ ಕೂಡ ಅಷ್ಟೇ ದೊಡ್ಡ ಅಪರಾಧವಾಗಿದೆ. ಒಂದು ಕಾರ್ಡ್ ಕೊಟ್ಟು ಯಾರನ್ನೋ ಅಧಿಕಾರಿ ಮಾಡೋಕೆ ಆಗುತ್ತಾ? ಇಡೀ ಭಾರತದಲ್ಲಿ ಮತದಾನವನ್ನು ಕದ್ದು ಮಾರಾಟ ಮಾಡುತ್ತಾರಲ್ಲ ಇದಕ್ಕಿಂದ ದೊಡ್ಡ ಕ್ರೂರ ಅಪರಾಧ ಮತ್ತೊಂದಿಲ್ಲ ಎಂದು ಗುಡುಗಿದರು.

ಬಿಜೆಪಿ ವಿರುದ್ದ ಡಿ.ಕೆ.ಶಿವಕುಮಾರ್‌ ಕಿಡಿ

ಬಿಜೆಪಿ ವಿರುದ್ದ ಡಿ.ಕೆ.ಶಿವಕುಮಾರ್‌ ಕಿಡಿ

ಹಗರಣದಲ್ಲಿ ಒಬ್ಬ ಸೀನಿಯರ್ ಆಫೀಸರ್‌ನನ್ನು ಬಂಧಿಸಿಲ್ಲ, ತನಿಖೆ ಮಾಡಿಲ್ಲ. ಪಾಪ ಆ ಹುಡುಗರ ಮೇಲೆ ಮಾತಾಡಿದರೆ ಏನು ಪ್ರಯೋಜನ? 1-2 ಸಾವಿರ ರೂಪಾಯಿಗೆ ಕೆಲಸ ಮಾಡುವ ಹುಡುಗರನ್ನು ಬಂಧಿಸಿದರೆ ಏನು ಪ್ರಯೋಜನ. ಸಂಬಳ ಕೂಡ ಕೊಟ್ಟಿಲ್ಲ ಎಂದು ಹುಡುಗರು ಪೊಲೀಸ್ ಸ್ಟೇಷಸ್‌ಗೆ ದೂರು ಕೊಟ್ಟಿದ್ದಾರೆ. ಯಾರು ಇದಕ್ಕೆ ಮೂಲ ಪರ್ಮಿಷನ್ ಕೊಟ್ಟಿದ್ದಾರೆಯೋ ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಅವರ ಸರ್ಕಾರದವರ ಚೆಕ್‌ಗಳು ಸಿಕ್ಕಿವೆ- ಡಿ.ಕೆ.ಶಿ

ಅವರ ಸರ್ಕಾರದವರ ಚೆಕ್‌ಗಳು ಸಿಕ್ಕಿವೆ- ಡಿ.ಕೆ.ಶಿ

ಮೇಲಿನವರಿಂದ ಆದೇಶ ಬಂತು ಅಂತಾ ಅಲ್ಲಿನ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಮೇಲಿನವರು ಅಂದರೆ ಯಾರು? ಸಿಎಂ ಅಥವಾ ಮಂತ್ರಿಗಳಾ? ಅಥವಾ ಮತ್ಯಾರೋ ಇದ್ದಾರೆ ಎಂಬುದು ಗೊತ್ತಾಗಬೇಕು. ಅಲ್ಲದೇ ಹಗರಣದ ಬಗ್ಗೆ ಶಾಸಕರು ಹಾಗೂ ಮಂತ್ರಿಗಳೇ ಮಾತಾಡಿದ್ದಾರೆ. ಅವರ ಚೆಕ್‌ಗಳು ಅಲ್ಲಿ ಸಿಕ್ಕಿವೆ. ಇವರೆಲ್ಲರ ಮೇಲೂ ಎಫ್ಐಆರ್ ಹಾಕಿ ಬಂಧಿಸಬೇಕು. ಪೊಲೀಸರು ಏನು ತನಿಖೆ ಮಾಡುತ್ತಾ ಇದ್ದಾರೆ ಎಂದು ಕಾಯುತ್ತಿದ್ದೇನೆ. ತನಿಖೆ ಮಾಡಲಿ, ಆಮೇಲೆ ಎಲ್ಲ ದಾಖಲೆ ಕೊಟ್ಟು ಮಾತಾಡುತ್ತೇನೆ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಅಶ್ವತ್ಥ್‌ ನಾರಾಯಣ್‌ಗೆ ಪ್ರಶ್ನೆಗಳ ಸುರಿಮಳೆ

ಅಶ್ವತ್ಥ್‌ ನಾರಾಯಣ್‌ಗೆ ಪ್ರಶ್ನೆಗಳ ಸುರಿಮಳೆ

ವೋಟರ್ ಐಡಿ ಕದ್ದಾಲಿಕೆಯಲ್ಲಿ ರಾಜ್ಯದ ಜನರನ್ನು ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ದಿಕ್ಕುತ್ತಪಿಸುತ್ತಿದ್ದಾರೆ ಎಂಬ ಸಚಿವ ಅಶ್ವತ್ಥ್‌ ನಾರಾಯಣ್ ಆರೋಪಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಅಲ್ಲಿ ನನ್ನ ಚೆಕ್‌ ಸಿಕ್ಕಿದೆಯಾ? ನಾನೇನಾದರೂ ಕೆಲಸ ಮಾಡು ಅಂತಾ ಹೇಳಿದ್ದೀನಾ? ಎಂದು ಸಾಲು ಸಾಲು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ನಮ್ಮ ಕಾಲದಲ್ಲಿ ನಾವೇನಾದರೂ ಮಾಡಿದ್ದರೆ ನಮ್ಮ ಮೇಲೂ ತನಿಖೆ ಮಾಡಲಿ‌ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.

ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ

ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ

ಡಿ.ಕೆ.ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಸಚಿವ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಹಳ ಸಂತೋಷ, ಜೈಲಿನಲ್ಲೇ‌ ಅವನನ್ನು ಭೇಟಿ ಮಾಡೋಣ. ಜೈಲಿಗೆ ಕಳುಹಿಸಬೇಕು ಅಂತಾನೆ ಮಾತನಾಡುತ್ತಾ ಇದ್ದಾರೆ. ನಾನು ಅದೆಲ್ಲದಕ್ಕೂ ಸಿದ್ಧನಿದ್ದೇನೆ. ನನ್ನ ಹಣೆ ಬರಹವನ್ನು ಯಾರ ಕೈಲೂ ಬದಲಾಯಿಸುವುದಕ್ಕೆ ಆಗುವುದಿಲ್ಲ ಎಂದು ಸಚಿವ ಅಶ್ವತ್ಥ್‌ ನಾರಾಯಣ್ ಅವರಿಗೆ ಟಾಂಗ್ ನೀಡಿದರು.

ಡಿ.ಕೆ. ಶಿವಕುಮಾರ್‌
Know all about
ಡಿ.ಕೆ. ಶಿವಕುಮಾರ್‌
English summary
KPCC President D K Shivakumar said in Bilidale village of Kanakapura taluk, Investigation should reveal who is involved in illegal voter ID Case, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X