ರಾಮನಗರದಲ್ಲಿ ತಂದೆಗಾಗಿ ಮತ ಯಾಚಿಸಿದ ನಿಖಿಲ್ ಕುಮಾರಸ್ವಾಮಿ

Recommended Video

      Karnataka Elections 2018 : ತಂದೆಗಾಗಿ ಮಗ ನಿಖಿಲ್ ಕುಮಾರಸ್ವಾಮಿ ಪ್ರಚಾರ | Oneindia Kannada

      ರಾಮನಗರ, ಏಪ್ರಿಲ್ 28 : ರಾಮನಗರ ಕ್ಷೇತ್ರಕ್ಕೆ ಮತ್ತು ಎಚ್ ಡಿಕೆಯವರಿಗೆ ಇರುವ ಸಂಬಂಧ ತಾಯಿ-ಮಗನ ಸಂಬಂಧವಿದ್ದಂತೆ. ಆದ್ದರಿಂದ ತಂದೆಯವರು ಜಯಶೀಲರಾಗುವುದು ಖಚಿತ. ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜನತೆ ಗೆಲ್ಲಿಸಬೇಕು ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.

      ರಾಮನಗರ ಕ್ಷೇತ್ರದ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ತೆರೆದ ವಾಹನದಲ್ಲಿ ರೋಡ್‌ಶೋ ನಡೆಸುವ ಮೂಲಕ ತಂದೆಯ ಪರ ಮತಯಾಚನೆ ಮಾಡಿದರು.

      ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಹಕಾರಿ. ರಾಮನಗರದ ಅಭಿವೃದ್ಧಿಗಾಗಿ ಎಚ್ ಡಿಕೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.

      Nikhil Kumaraswamy did campaign for Father HD Kumaraswamy.

      ತಂದೆಯವರು 224 ಕ್ಷೇತ್ರಗಳಲ್ಲಿಯೂ ಪ್ರಚಾರದ ಮಾಡುತ್ತಿದ್ದು, ನಾನು ಕೂಡ ಐದಾರು ಜಿಲ್ಲೆಗಳಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ. ಈಗಾಗಲೇ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ತಂದೆಯವರ ಮತ್ತು ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಮಗ್ನನಾಗಿದ್ದೇನೆ ಎಂದರು.

      ಪ್ರತಿ ಗ್ರಾಮಗಳಿಗೆ ತೆರಳಿದ ನಿಖಿಲ್ ಗೆ ಅಭೂತಪೂರ್ವ ಸ್ವಾಗತ ಸಹ ಸಿಕ್ಕಿದ್ದು, ಅವರಿಗೆ ಆರತಿ ಎತ್ತಿ ಮಹಿಳೆಯರು ಸ್ವಾಗತ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+