ರಾಮನಗರದಲ್ಲಿ 119 ಕೊರೊನಾ ಸೋಂಕು ಪ್ರಕರಣ ದೃಢ: ಒಂದು ಸಾವು
ರಾಮನಗರ, ಆಗಸ್ಟ್ 31: ರಾಮನಗರ ಜಿಲ್ಲೆಯ ಚನ್ನಪಟ್ಟಣ 20, ಕನಕಪುರ 21, ಮಾಗಡಿ 11 ಮತ್ತು ರಾಮನಗರ 67 ಪ್ರಕರಣಗಳು ಸೇರಿ ಭಾನುವಾರ ಒಟ್ಟು 119 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
Recommended Video
ಕೊರೊನಾ ಸೋಂಕು ದೃಢಪಟ್ಟ ಎಲ್ಲ ಸೋಂಕಿತರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ತಿಳಿಸಿದ್ದಾರೆ.
ಇದುವರೆಗೆ ರಾಮನಗರ ಜಿಲ್ಲೆಯಲ್ಲಿ 3359 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 815, ಕನಕಪುರ 709, ಮಾಗಡಿ 474 ಮತ್ತು ರಾಮನಗರದಲ್ಲಿ 1361 ಪ್ರಕರಣಗಳು ಸೇರಿವೆ.

ಭಾನುವಾರ ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 7, ಕನಕಪುರ ತಾಲ್ಲೂಕಿನಲ್ಲಿ 9, ಮಾಗಡಿ ತಾಲ್ಲೂಕಿನಲ್ಲಿ 13 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 40 ಮಂದಿ ನಿಧನರಾಗಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ 11, ಕನಕಪುರ ತಾಲ್ಲೂಕಿನಲ್ಲಿ 12, ಮಾಗಡಿ ತಾಲ್ಲೂಕಿನಲ್ಲಿ 3 ಹಾಗೂ ರಾಮನಗರ ತಾಲ್ಲೂಕಿನಲ್ಲಿ 48 ಜನ ಸೇರಿ ಒಟ್ಟಾರೆ 74 ಜನರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 2486 ಜನರು ಗುಣಮುಖರಾಗಿದ್ದು, ಈ ಪೈಕಿ ಚನ್ನಪಟ್ಟಣ 617, ಕನಕಪುರ 507, ಮಾಗಡಿ 348 ಮತ್ತು ರಾಮನಗರ 1014 ಜನರು ಸೇರಿದ್ದಾರೆ.












Click it and Unblock the Notifications