ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಲಿಂ.ಶಿವಕುಮಾರ ಸ್ವಾಮಿಗಳ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 15: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ. ಶ್ರೀಗಳ 111 ಅಡಿ ಎತ್ತರದ ಪ್ರತಿಮೆಯು ಸಂಪೂರ್ಣ ಕಾಂಕ್ರೀಟ್‌ನಲ್ಲಿಯೇ ನಿರ್ಮಾಣಗೊಳ್ಳಲಿದ್ದು, ಶ್ರೀಗಳ ಪ್ರತಿಮೆ ನಿರ್ಮಾಣವಾದರೆ ರಾಜ್ಯದಲ್ಲೇ ಅತೀ ಎತ್ತರದ ಪ್ರತಿಮೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಇಂದು ಚಾಲನೆ ನೀಡಿದರು.

ಶಿವಕುಮಾರ ಶ್ರೀಗಳ 111 ಅಡಿ ಪುತ್ಥಳಿ ಶಂಕುಸ್ಥಾಪನೆಗೆ ಸಜ್ಜಾಗಿದೆ ವೀರಾಪುರಶಿವಕುಮಾರ ಶ್ರೀಗಳ 111 ಅಡಿ ಪುತ್ಥಳಿ ಶಂಕುಸ್ಥಾಪನೆಗೆ ಸಜ್ಜಾಗಿದೆ ವೀರಾಪುರ

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ಮುಖಂಡ ರುದ್ರೇಶ್ ಸೇರಿದಂತೆ ಹಲವಾರು ಮುಖಂಡರು ಸಚಿವ ಸಿ.ಸಿ. ಪಾಟೀಲ್‌ರಿಗೆ ಸಾಥ್ ನೀಡಿದರು.

Minister CC Patil To Drive Late Shivakumara Swamis 111 Feet Statue Build in Veerapura

ಶ್ರೀಗಳ ಹುಟ್ಟೂರಿನಲ್ಲಿ 111 ಅಡಿ ಎತ್ತರದ ಪ್ರತಿಮೆ ಕಾಮಗಾರಿ ಪ್ರಾರಂಭವಾಗಿರುವುದು ಬಹಳ ಸಂತೋಷದ ವಿಷಯ. ಶ್ರೀಗಳ ಮೂರ್ತಿ ಲೋಕಾರ್ಪಣೆಯಾದ ನಂತರ ಇದೊಂದು ಸುಂದರವಾದ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಈಗಾಗಲೇ 100 ಕೋಟಿ ರೂ.ಗಳನ್ನು ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆಯಲ್ಲಿ ನೀಡಲಾಗಿದೆ. ನಾನು ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ನೀಲಿ ನಕ್ಷೆ ತಯಾರಿಸಿ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.

ಮಂದಾರಗಿರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ವನಮಂದಾರಗಿರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ವನ

ಶ್ರೀಗಳ ಪುತ್ಥಳಿ ನಿರ್ಮಾಣ ಕಾಮಗಾರಿಯ ಹೊಣೆಯನ್ನು ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ನೀಡಲಾಗಿದೆ. ಯೋಜನಾ ಬದ್ಧವಾಗಿ ಈ ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಜ್ಯದ ದೊಡ್ಡ ದೊಡ್ಡ ವ್ಯಕ್ತಿಗಳು ಒಳಗೊಂಡ ಸಮಿತಿ ಇದ್ದು, ಆ ಸಮಿತಿ ಎಲ್ಲವನ್ನು ನಿರ್ವಹಣೆ ಮಾಡುತ್ತಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಮಾಹಿತಿ ನೀಡಿದರು.

Minister CC Patil To Drive Late Shivakumara Swamis 111 Feet Statue Build in Veerapura

ಶ್ರೀಗಳ ಹುಟ್ಟೂರಾದ ವೀರಾಪುರ ಗ್ರಾಮದ ಅಭಿವೃದ್ಧಿ ಹಾಗೂ ಶ್ರೀಗಳ ಪ್ರತಿಮೆ ನಿರ್ಮಾಣ ಕೋವಿಡ್ ಹಿನ್ನಲೆಯಲ್ಲಿ ಕೆಲ ಕಾಲ ಕುಂಠಿತವಾಗಿತ್ತು. ಇದೀಗ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಯಡಿಯೂರಪ್ಪನವರು ಈ ಕಾರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟು ಹಣವನ್ನು ಬಿಡುಗಡೆ ಮಾಡಿದ್ದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶ್ರೀಗಳ ಪ್ರತಿಮೆಯ ವಿಶೇಷತೆ
ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು 111 ವರ್ಷ ಕಾಲ ಬದುಕಿದ್ದರು. ಹೀಗಾಗಿ ಅವರ ಪ್ರತಿಮೆಯೂ ಸಹ 111 ಅಡಿ ಎತ್ತರದಲ್ಲಿರಲಿದ್ದು, ಕೋಲು ಹಿಡಿದು ಖಾವಿಧಾರಿ ರೂಪದಲ್ಲಿ ಶ್ರೀಗಳ ಮೂರ್ತಿ ಸಿಮೆಂಟ್‌ನಿಂದ ನಿರ್ಮಾಣವಾಗುತ್ತಿದ್ದು, ಪ್ರತಿಮೆಯ ತಳಕ್ಕೆ ಇಳಿಯಲು 111 ಮೆಟ್ಟಿಲುಗಳು ನಿರ್ಮಾಣವಾಗುತ್ತಿವೆ.

ಶ್ರೀಗಳ ಹುಟ್ಟೂರಾದ ವೀರಾಪುರದಲ್ಲಿನ ಬೆಟ್ಟದ ಮೇಲೆ ಶ್ರೀಗಳು ತಮ್ಮ ಬಾಲ್ಯದಲ್ಲಿ ಆಟವಾಡುತ್ತಿದ್ದರು. ಇಲ್ಲಿಯೇ ಕುಳಿತು ಧ್ಯಾನಾಸಕ್ತರಾಗುತ್ತಿದ್ದರು. ಶಿವಗಂಗೆ ಬೆಟ್ಟದೆಡೆಗೆ ಯಾವಾಗಲೂ ನೋಡುತ್ತಿದ್ದರು.

Minister CC Patil To Drive Late Shivakumara Swamis 111 Feet Statue Build in Veerapura

ಶಿವಗಂಗೆ ಬೆಟ್ಟ ನೋಡುತ್ತಲೇ, ತಮ್ಮ ಮನೆ ದೇವರನ್ನು ನೆನೆಯುತ್ತಿದ್ದರು. ಹೀಗಾಗಿ ಶಿವಗಂಗೆ ಬೆಟ್ಟಕ್ಕೆ ಅಭಿಮುಖವಾಗಿ, ನಿಂತ ಭಂಗಿಯಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

ಇನ್ನು ಬೆಟ್ಟದ ಮೇಲೆ ಶ್ರೀಗಳ ಪ್ರತಿಮೆಯೊಂದಿಗೆ ಮ್ಯೂಸಿಯಂ, ಧ್ಯಾನ ಕೇಂದ್ರ, ಶ್ರೀಗಳ ಜೀವನ ಪರಿಚಯಿಸುವ ಆಧುನಿಕ ಆಡಿಯೋ, ವಿಡಿಯೋ ಸೌಲಭ್ಯ, ಭಕ್ತರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಉದ್ಯಾನ, ದಾಸೋಹ ಭವನ, ಯಾತ್ರಿಗಳಿಗಾಗಿ ಭವನಗಳನ್ನು ನಿರ್ಮಾಣ ಮಾಡಲಾಗುತ್ತದೆ.

Recommended Video

ಗುರು ರವಿದಾಸ್ ಜಯಂತಿ ಪ್ರಯುಕ್ತ ಮೋದಿ ಮಾಡಿದ ಭಜನೆಯ ವಿಡಿಯೋ ವೈರಲ್ | Oneindia Kannada

English summary
PWD Minister CC Patil To Drive late Shivakumara Swami's 111 Feet Statue Build in Veerapura of Magadi taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X