ಮೂರು ದಿನದ ಮೌನವ್ರತ ಮುರಿದ ಡಿ. ಕೆ. ಶಿವಕುಮಾರ್ ಹೇಳಿದ್ದೇನು?

ರಾಮನಗರ, ಜನವರಿ 13; ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಭಾನುವಾರ ಆರಂಭಗೊಂಡಿದ್ದ 11 ದಿನದ ಪಾದಯಾತ್ರೆ 4ನೇ ದಿನ ರಾಮನಗರಕ್ಕೆ ಬಂದು ತಲುಪಿತ್ತು.

ಗುರುವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

"ನಾನು ಮೂರು ದಿನ ಮೌನ" ಎಂದಿದ್ದ ಡಿ. ಕೆ. ಶಿವಕುಮಾರ್ ಗುರುವಾರ ಅನಿವಾರ್ಯವಾಗಿ ಮೌನ ಮುರಿದರು. ರಾಮನಗರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರ ಜೊತೆಗೆ ಮಾಧ್ಯಮಗಳ ಜೊತೆ ಮಾತನಾಡಿದರು.

Mekedatu Padayatra Called off DK Shivakumar Press Conference

ಡಿ. ಕೆ. ಶಿವಕುಮಾರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

* ನಾನು ರಾತ್ರಿ ಮಲಗಿದ್ದ ವೇಳೆ ಎಸಿ ಮನೆಗೆ ಬಂದಿದ್ದರು. ಹೆಚ್ಚು ಪೊಲೀಸರು ಹಾಗೂ ಹಲವು ಜೀಪುಗಳಲ್ಲಿ ಬಂದು ಪಾದಯಾತ್ರೆ ನಿಲ್ಲಿಸಲು ನೋಟಿಸ್ ನೀಡಿದರು. ಜಿಲ್ಲಾಧಿಕಾರಿ ಸಹಿ‌ ಇರುವ ನೋಟಿಸ್ ನೀಡಿದ್ದರು. ಆದರೆ ಡಿಸಿಗೆ ಕೋವಿಡ್ ಇದೆ. ಹೀಗಾಗಿ ನಾನು ಅವರನ್ನು ವಾಪಸ್ಸು ಕಳುಹಿಸಿದೆ.

* ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರಂತೆ. ಬೆಳಗ್ಗೆ ಅವರೇ ಹರಿದು ಬಿಸಾಕಿದ್ದರು. ಬಿಬಿಎಂಪಿ‌ ಸಹ ನಮಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದಾರೆ. ಪಾದಯಾತ್ರೆಯನ್ನು ನಿಲ್ಲಿಸಿ ಎಂದು ನೋಟಿಸ್‌ನಲ್ಲಿ ತಿಳಿಸಿದ್ದರಂತೆ.‌

* ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ನೀಡಿ, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಅಂಬುಲೆನ್ಸ್ ಅನ್ನು ನಿಯೋಜಿಸಿ ಎಂದು ಹೇಳಿದ್ದಾರೆ. ಸರಕಾರದವರಿಗೂ ಸಹ ನಾವು ಪಾದಯಾತ್ರೆ ಮಾಡಲಿ ಎಂಬುದೇ ಆಸೆ. ನಮ್ಮ ಬಳಿ ಒಂದು, ಮಾಧ್ಯಮಗಳ ಬಳಿ ಇನ್ನೊಂದು ಹೇಳಿಕೆ ನೀಡುವಲ್ಲಿ ಸರಕಾರ ನಿರತವಾಗಿದೆ.

* ನಮಗೆ ನ್ಯಾಯಾಲಯ ಈ ವರೆಗೂ ಪಾದಯಾತ್ರೆ ನಿಲ್ಲಿಸಿ ಎಂದು ಹೇಳಿಲ್ಲ‌. ಆದರೆ ಇಂದಿನ ಪರಿಸ್ಥಿತಿ ಅವಲೋಕಿಸಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದೇವೆ. ನ್ಯಾಯಾಲಯಕ್ಕೆ ಗೌರವ ನೀಡುವುದು, ನಮ್ಮ ದೇವರಾದ ಜನರ ಬಳಿ ತಪ್ಪಿತಸ್ಥರಾಗಬಾರದು ಎಂಬುದು ನಮ್ಮ ಉದ್ದೇಶ.

* ಡಿಸಿ ಬಸ್‌ಗಳನ್ನು‌ ತಡೆಯುವಂತೆ ಆರ್‌ಟಿಒಗೆ ಒಂದು ಲೇಟರ್ ನೀಡಿದ್ದಾರೆ. ಕೊನೆಗೆ ನಾವು ಇಬ್ಬರೇ ನಡೆಯಬೇಕು ಎಂದುಕೊಂಡಿದ್ದೆವು‌. ಜನರು ಸುತ್ತ ಸುತ್ತಿಕೊಳ್ಳುತ್ತಾರೆ ಎಂಬ ಭಯ ಅಷ್ಟೇ. ನಾವು ಕೋರ್ಟು, ಜೈಲು, ಬೇಲು ಇಂತಹವಕ್ಕೆಲ್ಲ ಹೆದರಿಕೊಳ್ಳುವುದಿಲ್ಲ.

* ಬಿಬಿಎಂಪಿ ಸಹ ಇಂದು ಬೆಳಗ್ಗೆ ನೋಟಿಸ್ ನೀಡಿ, ಅನುಮತಿ ನಿರಾಕರಿಸಿದ್ದಾರೆ. ಈ ಯಾತ್ರೆ ಇಲ್ಲಿಗೆ ಮುಕ್ತಾಯ ಎನ್ನುವಂತಿಲ್ಲ. ಮತ್ತೆ ಇಲ್ಲಿಂದಲೇ ಯಾತ್ರೆ ಮುಂದುವರಿಯಲಿದೆ. ಎಲ್ಲರನ್ನು‌ಒಂದೇ ರೀತಿ ಕಾಣುವ ಗುಣ ಸರಕಾರಕ್ಕಿದ್ದರೆ, ಅವರ ಶಾಸಕರು, ಅಧಿಕಾರಿಗಳ ಮೇಲೂ ಕೇಸ್ ಹಾಕಬೇಕಿತ್ತು. ಪ್ರಚೋಧನಕಾರಿ‌ ಹೇಳಿಕೆ ನೀಡಿದ್ದವರ ಮೇಲೆ ಇಂದಾದರೂ‌ ಕೇಸ್ ಹಾಕಿ, ಸರಕಾರ ತಮ್ಮ ದೈರ್ಯ ಪ್ರದರ್ಶಿಸಬೇಕು.

* ನಾವು ಕೋವಿಡ್ ಸಮಯದಲ್ಲಿ ಜನರೊಟ್ಟೊಗೆ ನಿಂತಿದ್ದೇವೆ. ಸಾವಿರಕ್ಕೂ ಹೆಚ್ಚು ಅಂಬುಲೆನ್ಸ್ ಅನ್ನು ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿದ್ದೆವು. ಈ ಸೇವೆ ಹೀಗೆ ಮುಂದುವರಿಯಲಿದೆ. ನಮ್ಮ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಅಷ್ಟೆ.

* ಇಷ್ಟು ಸಾವಿರಾರು ಜನ ನಮಗೆ ಪ್ರೀತಿ ತೋರಿಸಿದ್ದಾರೆ. ಅವರ ಋಣ ಹೇಗೆ ತೀರಿಸಬೇಕು‌? ಎಂದು ಗೊತ್ತಾಗುತ್ತಿಲ್ಲ. ಮೊದಲು ತಮಿಳುನಾಡಿನ ಮೇಲೆ ಹೋರಾಟ ಮಾಡುತ್ತಿದ್ದೆವು.‌ ಈಗ ತಮಿಳುನಾಡಿನೊಂದಿಗೆ ರಾಜ್ಯದ ಇನ್ನೆರೆಡು ಪಾರ್ಟಿ ವಿರುದ್ದವು ಹೋರಾಟ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+