ಚನ್ನಪಟ್ಟಣ: ಮಾಂಸದೂಟ ಸವಿದು ಶಿವನನ್ನು ಆರಾಧಿಸುವ ಶಿವರಾತ್ರಿಯ ವಿಶಿಷ್ಟ ಆಚರಣೆ

ರಾಮನಗರ, ಮಾರ್ಚ್ 1: ನಾಡಿನೆಲ್ಲಡೆ ಶಿವರಾತ್ರಿ ಹಬ್ಬವನ್ನು ಕಠಿಣ ವ್ರತಾಚರಣೆಯ ಮೂಲಕ ಸಂಭ್ರಮ, ಸಡಗರ, ಭಕ್ತಿಯಿಂದ ಆಚರಿಸಲಾಗುತ್ತದೆ. ಅನೇಕ ಭಕ್ತರು ಉಪವಾಸವಿದ್ದು, ರಾತ್ರಿ ಇಡೀ ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ.

ಚನ್ನಪಟ್ಟಣ ತಾಲ್ಲೂಕಿನ ಗ್ರಾಮದಲ್ಲಿ ಒಂದರಲ್ಲಿ ಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಗ್ರಾಮದಲ್ಲಿರುವ ದೇವಸ್ಥಾನದ ಆವಣರದಲ್ಲಿ ಮಾಂಸದೂಟ ಮಾಡಿ, ಎಲ್ಲರೂ ಒಟ್ಟಿಗೆ ಕುಳಿತು ಮಾಂಸದೂಟ ಸವಿದು ನಂತರ ಇಡೀ ರಾತ್ರಿ ಶಿವನನ್ನು ಆರಾಧಿಸುತ್ತಾ, ಹಬ್ಬವನ್ನು ಆಚರಣೆ ಮಾಡುತ್ತಾರೆ.

ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಹಬ್ಬದ ದಿನದಂದೇ ದೇವಸ್ಥಾನದ ಭಕ್ತರೆಲ್ಲ ಸೇರಿ ಮಾಂಸದೂಟ ತಯಾರು ಮಾಡಿ, ದೇವಸ್ಥಾನದ ಬಳಿಯೇ ಪ್ರಸಾದವನ್ನು ಸವಿದು ನಂತರ ಇಡೀ ರಾತ್ರಿ ಎಚ್ಚರವಾಗಿದ್ದು, ಶಿವರಾತ್ರಿಯ ಜಾಗರಣೆ ಮಾಡುತ್ತಾರೆ.

Mangadahalli Villagers of Channapattana Taluks Celebrate Shivaratri After Eating Non-veg

ಸುಮಾರು 70 ಗ್ರಾಮಗಳಲ್ಲಿನ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ, ತಂದು ಬಲಿಕೊಟ್ಟು ಅಲ್ಲಿಯೇ ಪ್ರಸಾದವನ್ನು ತಯಾರು ಮಾಡುತ್ತಾರೆ. ಆನಂತರ ದೇವರಿಗೆ ಪ್ರಸಾದ ಸಮರ್ಪಣೆ ಮಾಡಿ, ನಂತರ ದೇವಸ್ಥಾನದ ಮುಂಭಾಗದ ಕುಳಿತ ಪ್ರಸಾದ ಸೇವಿಸುತ್ತಾರೆ. ಈ ಬಾರಿ ಸುಮಾರು 300 ಕೋಳಿಗಳನ್ನು ಹಬ್ಬಕ್ಕೆಂದು ಸಮರ್ಪಣೆ ಮಾಡಿದ್ದಾರೆ. ಸುಮಾರು ಮೂರು ಸಾವಿರ ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನು ಸೇವಿಸಿದರು.

ಶಿವರಾತ್ರಿಯ ಮಾಂಸದೂಟದ ಪದ್ಧತಿ ಕಳೆದ ಎಂಟು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ದೇವಾಲಯಕ್ಕೆ ಬರುವ ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ದೂರವಾಗಲಿ ಎಂದು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಠಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ದಿನದಂದು ಕೋಳಿ, ಕುರಿ ನೀಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

Mangadahalli Villagers of Channapattana Taluks Celebrate Shivaratri After Eating Non-veg

ಇನ್ನು ಕೇವಲ ಶಿವರಾತ್ರಿ ದಿನದಂದು ಮಾತ್ರ ಅಲ್ಲ. ಗೌರಿ ಹಬ್ಬ ಸೋಮವಾರದಂದು ಬಂದರೂ ಅಂದು ಸಹ ಮಾಂಸದೂಟವನ್ನು ಮಾಡಲಾಗುತ್ತದೆ. ಈ ರೀತಿಯ ವಿಭಿನ್ನ ಆಚರಣೆಗೆ ಕೇವಲ ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ಭಕ್ತರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದ ಭಕ್ತರು ಭಾಗಿಯಾಗಿ ಮಂಸದೂಟ ಸವಿದರು.

Mangadahalli Villagers of Channapattana Taluks Celebrate Shivaratri After Eating Non-veg

"ಕಳೆದ 15 ವರ್ಷಗಳ ಹಿಂದೆ ಮಾಂಸದೂಟದ ಪದ್ಧತಿಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಚಿಂತನೆ ಮಾಡಿ, ಶಿವರಾತ್ರಿ ದಿನ ಸಿಹಿಯೂಟ ಮಾಡಿ ಶಿವರಾತ್ರಿಯ ಜಾಗರಣೆ ಪ್ರಾರಂಭಿಸಿದ್ದರು. ಆದರೆ ಮಧ್ಯರಾತ್ರಿ ಸುಮಾರಿಗೆ ಭಕ್ತರು ನೀಡಿದ್ದ ಹರಕೆಯ ಕೋಳಿಗಳು ದೇವಸ್ಥಾನದ ಗರ್ಭಗುಡಿ ಒಳಗೆ ನುಗ್ಗಿದ್ದವು. ಹೀಗಾಗಿ ಮತ್ತೆ ಆಚರಣೆ ಮುಂದುವರೆಸಿಕೊಂಡು ಬಂದಿದ್ದೇವೆ," ಎನ್ನುತ್ತಾರೆ ದೇವಾಲಯದ ಅರ್ಚಕ ಬೆಟ್ಟದ್ದಪ್ಪ ಸ್ವಾಮಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+