ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?

|
Google Oneindia Kannada News

ರಾಮನಗರ, ನವೆಂಬರ್ 01: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ನಡೆದ ಈ ಅನಿರೀಕ್ಷಿತ ಬೆಳವಣಿಗೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನ.3 ರಂದು ನಡೆಯಲಿದೆ. ನ.6 ರಂದು ಫಲಿತಾಂಶ ಹೊರಬೀಳಲಿದೆ.

ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ

ಕಳೆದು ಒಂದು ತಿಂಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಚಂದ್ರಶೇಖರ್ ಅವರು ಇದೀಗ ದಿಡೀರ್ ಅಂತ ಮರಳಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದು ಬಿಜೆಪಿ ನಾಯಕರಿಗೆ ಮುಖಭಂಗವನ್ನುಂಟು ಮಾಡಿದೆ. ಈ ಬೆಳವಣಿಗೆಗೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ದೂರಿದ್ದರೆ, ಚಂದ್ರಶೇಖರ್ ಅವರನ್ನು ಹಣಕೊಟ್ಟು ಕೊಂಡುಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ದೂರಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಯಾವ್ಯಾವ ಪ್ರಮುಖ ನಾಯಕರು ಏನಂದರು? ಕೇಳಿ....

ಬಿ ಎಸ್ ಯಡಿಯೂರಪ್ಪ

ಬಿ ಎಸ್ ಯಡಿಯೂರಪ್ಪ

"ಚಂದ್ರಶೇಖರ್ ಅವರನ್ನು ಹಣಕೊಟ್ಟು ಖರೀದಿ ಮಾಡಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಸಿಎಂ ಪತ್ನಿಯನ್ನು ಗೆಲ್ಲಿಸಲು ಈ ಕುತಂತ್ರ ಮಾಡಲಾಗಿದೆ. ಒಂದು ವಾರದ ಹಿಂದೆಯೇ ಈ ಸೂಚನೆ ಸಿಕ್ಕಿದ್ದರಿಂದ ಅವರ ಪರ ಪ್ರಚಾರಕ್ಕೆ ಹೋಗಿರಲಿಲ್ಲ" -ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

"ಬಿಜೆಪಿ ತಾನು ಮಾಡಿದ ತಪ್ಪನ್ನು ನಮ್ಮ ಮೇಲೆ ಹಾಕುತ್ತಿದೆ. ಚಂದ್ರಶೇಖರ್ ಅವರನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ. ಬಿಜೆಪಿ ಈ ಹಿಂದೆಯೂ ಹೀಗೆಯೇ ನಡೆದುಕೊಂಡಿದೆ"- ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ

ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಬಂದ ಮಗನ ಬಗ್ಗೆ ಸಿಎಂ ಲಿಂಗಪ್ಪ ಹೇಳಿದ್ದೇನು?ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಬಂದ ಮಗನ ಬಗ್ಗೆ ಸಿಎಂ ಲಿಂಗಪ್ಪ ಹೇಳಿದ್ದೇನು?

ಡಿ ವಿ ಸದಾನಂದಗೌಡ

ಡಿ ವಿ ಸದಾನಂದಗೌಡ

"ಬಿಜೆಪಿ ಚಂದ್ರಶೇಖರ್ ಅವರನ್ನು ಪ್ರೀತಿಯಿಂದ ನಡೆಸಿಕೊಂಡಿತ್ತು. ನಾನೇ ರಾಮನಗರಕ್ಕೆ ಹೋಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೆ. ಅವರ ಪರ ಪ್ರಚಾರ ಮಾಡಿದ್ದೆ. ಈ ರೀತಿ ನಡೆದುಕೊಂಡರೆ ರಾಜಕೀಯದಲ್ಲಿ ಉದ್ಧಾರ ಆಗುವುದಕ್ಕೆ ಖಂಡಿತ ಸಾಧ್ಯ ಇಲ್ಲ"- ಡಿ ವಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ

ಬಿ ವೈ ರಾಘವೇಂದ್ರ

ಬಿ ವೈ ರಾಘವೇಂದ್ರ

"ಹಣಬಲದಿಂದ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಇದು ಪಕ್ಷಕ್ಕೆ ಎಚ್ಚರಿಕೆಯೂ ಹೌದು. ಬಿಜೆಪಿ ಇದರಿಂದ ಪಾಠ ಕಲಿತು, ಎಚ್ಚರಿಕೆಯಿಂದಿರಬೇಕು: ಬಿ ವೈ ರಾಘವೇಂದ್ರ, ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ, ಶಿವಮೊಗ್ಗ ಲೋಕಸಭಾ ಕ್ಷೇತ್ರ

ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣ

English summary
Ramanagar by election BJP candidate L Chandrashekhar joined Congress 2 days before election date. Political leaders respond to this unexpected development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X