ಗ್ರಾಮಗಳಲ್ಲಿ ನಕಲಿ ಟಿವಿಗಳ ಮಾರಾಟ; ಇಬ್ಬರ ಬಂಧನ

ರಾಮನಗರ, ನವೆಂಬರ್ 24: ಬ್ರ್ಯಾಂಡೆಡ್ ಹೆಸರಿನಲ್ಲಿ ನಕಲಿ ಟಿವಿಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಸಂಗತಿ ರಾಮನಗರದಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಗ್ರಾಮೀಣ ಜನರಿಗೆ ಬ್ರ್ಯಾಂಡೆಡ್ ಟಿವಿಗಳೆಂದು ಹೇಳಿ ಪ್ರತಿಷ್ಠಿತ ಬ್ರ್ಯಾಂಡ್ ನ ಸ್ಟಿಕರ್ ಅಂಟಿಸಿ ನಕಲಿ ಟಿವಿಗಳನ್ನು ಮಾರಾಟ ಮಾಡಿ ಇವರು ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ದೂರು ದಾಖಲಾಗಿದ್ದ ಆಧಾರದ ಮೇಲೆ ಕುದೂರು ಪೊಲೀಸರು ಉತ್ತರ ಪ್ರದೇಶದ ಮುಜಾಫರ್ ನಗರದ ಇಬ್ಬರನ್ನು ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಬಂಧಿಸಿದ್ದಾರೆ. ಶಹರ್ ಯಾರ್ ಖಾನ್ (27) ಹಾಗೂ ಶಾರುಖ್ ಖಾನ್ (20) ಎಂಬುವರು ಬಂಧಿತರಾಗಿದ್ದಾರೆ.

 Ramanagar: Kudur Police Arrested Two For Selling Fake Tvs

ಇವರನ್ನು ವಿಚಾರಣೆ ನಡೆಸಿದ ವೇಳೆ, ಗ್ರಾಮೀಣ ಜನರನ್ನು ಗುರಿಯಾಗಿಸಿಕೊಂಡು ನಕಲಿ ಟಿ.ವಿಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳಿನಿಂದ ಈ ರೀತಿ ನಕಲಿ ಟಿವಿಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಪ್ರತಿಷ್ಠಿತ ಕಂಪನಿ ಹೆಸರನ್ನು ಇಟ್ಟುಕೊಂಡು ನಕಲಿ ಟಿವಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವರಿಂದ 18 ಟಿವಿಗಳನ್ನು ಹಾಗೂ ಸ್ಟಿಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ದೊಡ್ಡ ಜಾಲವೇ ಇರಬಹುದಾದ ಅನುಮಾನವಿದೆ ಎಂದು ಎಸ್ಪಿ ಎಸ್ ಗಿರೀಶ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+