ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ವಯಸ್ಸಿನಲ್ಲಿ ನನಗೆ ರಾಜಕಾರಣ ಬೇಡ, ರಾಜ್ಯಸಭೆ ಚಿಂತನ ಚಾವಡಿಯಷ್ಟೆ: ಹೆಗ್ಗಡೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 7: ಧರ್ಮಸ್ಥಳ ಕ್ಷೇತ್ರದ ಕಾರ್ಯಕ್ರಮಗಳನ್ನು ದೇಶಾದ್ಯಂತ ವಿಸ್ತರಿಸಲು ಪ್ರಯತ್ನಿಸುತ್ತೇನೆ ಎಂದು ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕನಕಪುರದಲ್ಲಿ ಗುರುವಾರ ಹೇಳಿದ್ದಾರೆ.

ಕನಕಪುರದ ಶಿವನಹಳ್ಳಿಯಲ್ಲಿರು ನಂದಿನಿ ಸಂಕೀರ್ಣದಲ್ಲಿ ಹಾಲು ಉತ್ಪಾದಕ ಸಂಘಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ವೇಳೆ ರಾಜ್ಯ ಸಭೆಗೆ ಆಯ್ಕೆಯಾದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು." ನಾನು ರಾಜ್ಯ ಸಭೆಗೆ ನಾಮನಿರ್ದೇಶನ ಆಗುತ್ತೇನೆ ಎಂಬ ಪರಿಕಲ್ಪನೆ ಇರಲಿಲ್ಲ. ನಾನು ಪದವಿಗಳ ಹಿಂದೆ ಹೋಗುವವನಲ್ಲ. ನನಗಾಗಿ ಅದನ್ನು ನಾನು ಬೇಡುವವನೂ ಅಲ್ಲ. ಆದರೆ ನನಗೆ ಅವರು ಕೊಟ್ಟಿದ್ದಾರೆ, ನಮ್ಮ ಸೇವೆಯನ್ನು ದೇಶವ್ಯಾಪಿ ವಿಸ್ತರಿಸಲು ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ನನಗೆ ಅನ್ನಿಸಿತು" ಎಂದು ತಿಳಿಸಿದ್ದಾರೆ.

ರಾಜ್ಯಸಭೆಗೆ ಡಾ. ಡಿ.ವೀರೇಂದ್ರ ಹೆಗ್ಗಡೆ; ಮುಖ್ಯಮಂತ್ರಿ ಬೊಮ್ಮಾಯಿ ಹರ್ಷರಾಜ್ಯಸಭೆಗೆ ಡಾ. ಡಿ.ವೀರೇಂದ್ರ ಹೆಗ್ಗಡೆ; ಮುಖ್ಯಮಂತ್ರಿ ಬೊಮ್ಮಾಯಿ ಹರ್ಷ

ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ರಾಜ್ಯದ ಜನತೆಗೆ ಮಾಹಿತಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿ, ದೇಶದ ಪ್ರಧಾನಿ ಇಷ್ಟೊಂದು ವ್ಯಸ್ತತೆಯ ನಡುವಿನಲ್ಲೂ ಇಷ್ಟು ನೆನಪು, ಇಷ್ಟು ಸೂಕ್ಷ್ಮವಾಗಿ ಗಮನಿಸುವ ಶಕ್ತಿ ಇದೆಯಲ್ಲಾ, ಅದರ ಬಗ್ಗೆ ಯೋಚನೆ ಮಾಡ್ತಾ ಇದ್ದೇನೆ. ಹಾಗಾಗಿ ಬೇರೆ ಯಾರೂ ಕೂಡ ನಮಗೆ ವ್ಯಸ್ತತೆಯಿಂದ ಕೆಲಸ ಮಾಡಲಾಗಲಿಲ್ಲ ಎಂದು ಹೇಳಬಾರದು. ದ ಬಿಸಿಯೆಸ್ಟ್ ಮ್ಯಾನ್ ಆಸ್ ಎವೆರಿ ಎಕ್ಸ್‌ಟ್ರಾ ಟೈಮ್ ಫಾರ್ ಎನಿತಿಂಗ್ ಎನ್ನುವ ಮಾತಿದೆ. ಹಾಗೆ ನಾವು ಹೆಚ್ಚು ಒತ್ತಡಕ್ಕೆ ಒಳಗಾದಾಗ, ಹೆಚ್ಚಿನ ಕಾರ್ಯ ಮಾಡಬಹುದಾಗಿದೆ ಎಂದರು.

 ರಾಜ್ಯಸಭೆ ನನಗೆ ಚಿಂತನ ವಾವಡಿ ಇದ್ದಂತೆ

ರಾಜ್ಯಸಭೆ ನನಗೆ ಚಿಂತನ ವಾವಡಿ ಇದ್ದಂತೆ

ಸಮಾಜ ಸೇವೆಯಿಂದ ಇದೀಗ ರಾಜಕೀಯಕ್ಕೆ ಬರಿತ್ತಿದ್ದೀರಿ ಎಂದು ಕೇಳಿದ್ದಕ್ಕೆ, ಇದರಲ್ಲಿ ಖಂಡಿತ ರಾಜಕೀಯ ಇಲ್ಲ, ಮುಂದೆಯೂ ಕೂಡ ರಾಜಕೀಯ ಪ್ರವೇಶ ಮಾಡುವುದಿಲ್ಲ, ಈ ವಯಸ್ಸಿನಲ್ಲಿ ನನಗೆ ರಾಜಕೀಯ ಬೇಡ. ಇದನ್ನು ನಾನು ಕೇವಲ ಹಿರಿಯ ಸದಸ್ಯರ ಕೂಟ ಎಂದು ಸೇರಿಕೊಂಡಿದ್ದೇನೆ. ಚಿಂತನ ಚಾವಡಿ ಎಂಬಂತೆ, ನಮ್ಮ ಅನುಭವವನ್ನು ದೇಶದಾದ್ಯಂತ ಹಂಚುವ ಕೆಲಸ ಮಾಡ್ತೇನೆ. ಇಲ್ಲಿ ಸಿನಿಮಾ, ಕ್ರೀಡೆ ಸಾಧಕರು ಇರುತ್ತಾರೆ. ಹಾಗಾಗಿ ರಾಜ್ಯಸಭಾ ಏನಿದೆ ಅದು ನನ್ನ ಪ್ರಕಾರ ಚಿಂತನಾ ಚಾವಡಿ ಎಂದಷ್ಟೇ ಭಾವಿಸುತ್ತೇನೆ ಎಂದರು.

ನಿಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಾರೆ ಎನ್ನುವುದು ಮೊದಲೇ ಗೊತ್ತಿತ್ತಾ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿ, "ನನ್ನನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡ್ತಾರೆ ಎನ್ನುವ ಕಲ್ಪನೆ ನನಗೂ ಕೂಡ ಇರಲಿಲ್ಲ. ನಿನ್ನೆ ರಾತ್ರಿಯೇ ನನಗೂ ಕೂಡ ಮಾಹಿತಿ ಬಂದಿದೆ," ಎಂದು ತಿಳಿಸಿದರು.

 ರಾಜ್ಯಸಭೆ ಗೌರವ ಊಹೆ ಮಾಡಿರಲಿಲ್ಲ: ಡಾ. ವೀರೇಂದ್ರ ಹೆಗ್ಗಡೆ ರಾಜ್ಯಸಭೆ ಗೌರವ ಊಹೆ ಮಾಡಿರಲಿಲ್ಲ: ಡಾ. ವೀರೇಂದ್ರ ಹೆಗ್ಗಡೆ

 ಕ್ಷೇತ್ರದ ಕೆಲಸವನ್ನು ದೇಶಾದ್ಯಂತ ವಿಸ್ತರಿಸಲು ಪ್ರಯತ್ನ

ಕ್ಷೇತ್ರದ ಕೆಲಸವನ್ನು ದೇಶಾದ್ಯಂತ ವಿಸ್ತರಿಸಲು ಪ್ರಯತ್ನ

ನನಗೆ ಸಂಸದರು ಎಂದು ಕರೆಸಿಕೊಳ್ಳಲು ಅಭಿಮಾನವಿದೆ, ಆದರೆ ರಾಜಕಾರಣಿ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ. ಅದು ನಮಗೆ ಇಡಿಸುವುದಿಲ್ಲ. ಆದರೆ ಈ ಪದವಿಯ ಮೂಲಕ ನಮ್ಮ ಕ್ಷೇತ್ರದ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಣೆ ಮಾಡಲು ಪ್ರಯತ್ನ ಮಾಡುತ್ತೇನೆ. ನನಗೆ ಈ ಗೌರವ ಸಿಕ್ಕಿದ್ದಕ್ಕೆ ಬಹಳಷ್ಟು ಜನ ಸಂತೋಷ ಪಟ್ಟಿದ್ದಾರೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸಭೆ ಸದಸ್ಯತ್ವ ನನ್ನ ತಲೆಗೆ ಹೋಗಿಲ್ಲ. ನನಗೆ ಮಂಜುನಾಥ ಸ್ವಾಮಿ, ಹೆಗ್ಗಡೆಯ ಪೀಠಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ತಿಳಿಸಿದ್ದಾರೆ.

 ಸಾಮಾಜಮುಖಿ ಕಾರ್ಯಕ್ಕೆ ಸಿಕ್ಕ ಗೌರವ

ಸಾಮಾಜಮುಖಿ ಕಾರ್ಯಕ್ಕೆ ಸಿಕ್ಕ ಗೌರವ

ವೀರೇಂದ್ರ ಹೆಗ್ಗಡೆಯವರನ್ನ ರಾಜ್ಯಸಭೆ ಸದಸ್ಯರಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮೊದಲಿನಿಂದಲೂ ಗ್ರಾಮೀಣ ಬದುಕಿನಲ್ಲೇ ಬಂದಿರುವಂತಹ ಹೆಗ್ಗಡೆಯವರು ಸಾಕಷ್ಟು ಸಾಮಾಜ ಮುಖಿ ಕಾರ್ಯಗಳನ್ನು ಮಾಡುವುದರ ಜೊತೆಗೆ, ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ರಾಜ್ಯದ ಮಹಿಳೆಯರ ಮನೆ ಮಾತಾಗಿದ್ದಾರೆ. ಅವರಿಗೆ ಈ ಗೌರವ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ ಎಂದುರು.

 ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಾಗಲಿದೆ

ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಾಗಲಿದೆ

ರಾಜ್ಯಸಭೆಗೆ ಡಾ. ವೀರೇಂದ್ರ ಹೆಗ್ಗಡೆಯವರಂಥ ಅರ್ಹರನ್ನು ಶಿಫಾರಸು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಬೇಕು. ಡಾ. ಹೆಗ್ಗಡೆಯವರು ಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳ ಹಾಗೂ ಆಯಾಮಗಳಲ್ಲಿ ಜನಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ, ಇಂತಹ ಅನುಭವವುಳ್ಳವರಿಂದ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Recommended Video

ಹರ್ಷ ಅಕ್ಕನ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೀಗೆ ನಡೆದುಕೊಂಡಿದ್ದು ಸರಿನಾ? | OneIndia Kannada

English summary
It was an unexpected honour and I'm also surprised has conferred Rajya Sabha membership, and I think it's a great privilege to work for the nation said Veerendra heggade in kanakapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X