ಕಾಂಗ್ರೆಸ್ ಸೇರಿ ತಪ್ಪು ಮಾಡಿದೇನಾ ಎಂದ ಮಾಜಿ ಶಾಸಕ ಬಾಲಕೃಷ್ಣ

ರಾಮನಗರ, ಮೇ 13: ನಾನು ಕಾಂಗ್ರೆಸ್ ಪಕ್ಷ ಸೇರಿ ತಪ್ಪು ಮಾಡಿದೇನಾ ಎಂಬ ಜಿಗುಪ್ಸೆ ನನ್ನನ್ನು ಕಾಡುತ್ತಿದೆ ಎಂದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿದ್ದ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಸ್ವಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

      ಕಾಂಗ್ರೆಸ್ ಸೇರಿ ತಪ್ಪುಮಾಡ್ದೆ,ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಶಾಸಕ HC ಬಾಲಕೃಷ್ಣ | Magadi

      ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ, ""ನನಗೆ ನನ್ನ ಕ್ಷೇತ್ರದ ಜನರಷ್ಟೇ ಮುಖ್ಯ, ಪಕ್ಷದ ನಾಯಕರಲ್ಲ. ನನ್ನನ್ನು ಗೆಲ್ಲಿಸೋದು ಕ್ಷೇತ್ರದ ಜನ ಮಾತ್ರ, ಪಕ್ಷದ ನಾಯಕರು ಬಂದು ನನ್ನ ಗೆಲ್ಲಿಸುವುದಿಲ್ಲ. ನನಗೆ ಮಂತ್ರಿ ಸ್ಥಾನದ ಅವಕಾಶ ಬಂದಾಗ ಮಾತ್ರ ನಾಯಕರ ಅವಶ್ಯಕತೆ ಇರುತ್ತೆ'' ಎಂದರು.

      ರಾಮನಗರಕ್ಕೆ ನಮ್ಮ ಕುಟುಂಬ ಯಾವತ್ತೂ ಚಿರಋಣಿ ಎಂದ ಶಾಸಕಿ
      ಮಾಗಡಿ ನಗರದಲ್ಲಿ ಇಂದು ಕರೆದಿದ್ದ ನನಗೆ ನನ್ನ ಕ್ಷೇತ್ರದ ಜನರೇ ಮುಖ್ಯ ಎಂದು ಕೈ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದರು. ನನ್ನನ್ನು ಬೆಳೆಸೋದು, ಉಳಿಸೋದು ಕ್ಷೇತ್ರದ ಜನರಷ್ಟೇ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ನಾಯಕರ ನಡೆ ಬೇಸರ ತಂದಿದೆ ಎಂದು ಹೇಳಿದರು.

       Former MLA HC Balakrishna Bored On Congress Party

      ನಾನು ಮೊದಲು ಬಿಜೆಪಿಯಲ್ಲಿದ್ದೆ, ನಂತರ ಜೆಡಿಎಸ್ ನಲ್ಲಿದ್ದೆ. ಎರಡೂ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ಆದರೆ ಕಾಂಗ್ರೆಸ್ ನಲ್ಲಿ ನನ್ನ ಶ್ರಮಕ್ಕೆ ಬೆಲೆ ಸಿಗುತ್ತಿಲ್ಲ ಎನಿಸುತ್ತಿದೆ ಎಂದು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರಾದ ಡಿಕೆಎಸ್ ಸಹೋದರರ ಬಗ್ಗೆ ಪರೋಕ್ಷವಾಗಿ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+