ಚುನಾವಣೆ ವೇಳೆ ನೀಡಿದ್ದ ಕುಕ್ಕರ್‌ ಸ್ಫೋಟ: ಬಾಲಕಿಗೆ ಗಂಭೀರ ಗಾಯ

ರಾಮನಗರ, ಮೇ 26: ಚುನಾವಣೆ ವೇಳೆ ನೀಡಿದ್ದ ಕುಕ್ಕರ್‌ ಸ್ಫೋಟಗೊಂಡು ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ನಡೆದಿದೆ.

ಕೂನಮುದ್ದನಹಳ್ಳಿ ಗ್ರಾಮದ ಮಹಾಲಕ್ಷ್ಮಿ (17) ಇಂದು ಬೆಳಗ್ಗೆ ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟಗೊಂಡಿದೆ. ಸ್ಟೋಟದ ತೀವ್ರತೆಗೆ ಬಾಲಕಿಗೆ ಮುಖದ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Cooker Blast In Ramanagara

ಚುನಾವಣೆಗೂ ಮುನ್ನ ಮಾಗಡಿ ಶಾಸಕ ಎಚ್‌.ಸಿ ಬಾಲಕೃಷ್ಣ ಚುನಾವಣೆ ಪ್ರಚಾರದ ವೇಳೆ ಕುಕ್ಕರ್‌ ನೀಡಿದ್ದರು. ಇದೀಗ ಚುನಾವಣೆ ವೇಳೆ ನೀಡಿದ್ದ ಕುಕ್ಕರ್‌ ಸ್ಫೋಟಗೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಚಿಕ್ಕಮಗಳೂರು: ಶಾಸಕರ ಬೆಂಬಲಿಗರು ನೀಡಿದ ಕುಕ್ಕರ್‌ ಬ್ಲಾಸ್ಟ್‌

ಚಿಕ್ಕಮಗಳೂರು: ಇನ್ನು ಈ ಹಿಂದೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿದ್ದಾರೆ ಎನ್ನಲಾದ ಕುಕ್ಕರ್ ಸ್ಫೋಟಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ನಡೆದಿತ್ತು.

Cooker Blast In Ramanagara

ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಎನ್ನುವವರ ಮನೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿರುವ ಕುಕ್ಕರ್‌ನಲ್ಲಿ ತರಕಾರಿ ಬೇಯಿಸಲು ಇಡಲಾಗಿತ್ತು. ಕಳಪೆ ಗುಣಮಟ್ಟದ ಕುಕ್ಕರ್‌ ಏಕಾಏಕಿ ಬ್ಲಾಸ್‌ ಆಗಿದ್ದು, ಸಮೀಪದಲ್ಲೇ ಇದ್ದ ತಾಯಿ ಮಗು ಅದೃಷ್ಟವಶಾತ್‌ ಪ್ರಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಬಳಿಕ ಜನ ಆತಂಕಗೊಂಡಿದ್ದರು.

ಶಾಸಕ ಟಿ. ಡಿ. ರಾಜೇಗೌಡ ಬೆಂಬಗಲಿಗರು ಚುನಾವಣಾ ಪ್ರಚಾರದ ವೇಳೆ ಕುಕ್ಕರ್ ಹಂಚಿದ್ದರು. 450 ರೂಪಾಯಿ ಕುಕ್ಕರ್‌ಗೆ 1,399 ರೂಪಾಯಿ ಲೇಬಲ್ ಅಂಟಿಸಿ ಮನೆ ಮನೆಗೆ ನೀಡಿದ್ದರು ಎನ್ನಲಾಗಿತ್ತು. ಕಳಪೆ ಗುಣಮಟ್ಟದ ಕುಕ್ಕರ್‌ ಆದ ಪರಿಣಾಮ ಬ್ಲಾಸ್‌ ಆಗಿದೆ ಎಂದು ಸ್ಥಳೀಯರು ಶಾಸಕರ ಬೆಂಬಲಿಗರ ವಿರುದ್ಧ ಆಕ್ರೋಶ ಹೊರ ಹಾಕಿ ಆ ಕುಕ್ಕರ್ ಬೇಡವೇ ಬೇಡ ಎಂದು ಕಿಡಿಕಾರಿದ್ದರು. ಇದೀಗ ಅಂತಹದ್ದೇ ಮೊತ್ತೊಂದು ಘಟನೆ ನಡೆದಿದ್ದು, ಕಾಂಗ್ರೆಸ್ ಶಾಸಕರು ಕಳಪೆ ಕುಕ್ಕರ್ ನೀಡಿ ಜನರ ಜೀವಕ್ಕೆ ಅಪಾಯ ತಂದಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+