ರಾಮನಗರ:ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಕೆರೆಯಲ್ಲಿ ಮುಳುಗಿ ಸಾವು
ರಾಮನಗರ, ನವೆಂಬರ್ 18: ಬಟ್ಟೆ ತೊಳೆಯಲು ಹೋಗಿದ್ದ ಸೇರಿ ನಾಲ್ಕು ಮಂದಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಾಲತಿ (35), ಅನುಶ್ರೀ (10), ಪೂರ್ಣಿಮಾ (15), ಹಾಗೂ ನಮ್ರತ (8) ಮೃತಪಟ್ಟಿದ್ದಾರೆ. ಬಟ್ಟೆ ತೊಳೆಯುತ್ತಿದ್ದ ವೇಳೆ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಉಳಿದ ಮೂವರು ನೀರು ಪಾಲಾಗಿದ್ದಾರೆ.

ಮೃತದೇಹಗಳನ್ನ ಕೆರೆಯಿಂದ ಹೊರತೆಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications