ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೊಯೊಟಾ ಕಾರ್ಮಿಕರ ಬಿಕ್ಕಟ್ಟು; ಸರ್ಕಾರದ ಹಸ್ತಕ್ಷೇಪಕ್ಕೆ ಹೆಚ್ಚಾದ ಒತ್ತಾಯ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 06: ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆಯುತ್ತಿದ್ದರೂ ಸರ್ಕಾರ ಬಿಕ್ಕಟ್ಟು ಶಮನಕ್ಕೆ ಮುಂದಾಗದಿರುವುದು ಖಂಡನೀಯ. ತಕ್ಷಣವೇ ಸರ್ಕಾರ ಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳದಲ್ಲೇ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಮುಖಂಡ, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಬಿಡದಿಯ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಟೊಯೊಟಾ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಕಾರ್ಮಿಕರು ಧರಣಿ ಪ್ರಾರಂಭಿಸಿ ತಿಂಗಳು ಕಳೆಯುತ್ತಿದ್ದರೂ ಕಾರ್ಮಿಕರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ಕಿಡಿಕಾರಿದರು. ಮುಂದೆ ಓದಿ...

"ಸರ್ಕಾರ ಏನು ಮಾಡುತ್ತಿದೆ?"

ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಕಾರ್ಮಿಕ ಇಲಾಖೆ ಕೇವಲ‌ ಸರ್ಕಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಸಿದರೆ ಕಾರ್ಮಿಕ ಸಮಸ್ಯೆ ಇತ್ಯರ್ಥ ಅಗುವುದಿಲ್ಲ. ಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದು ಕಂಪನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಸಭೆ ನಡೆಸಿ, ಎಲ್ಲಾ ಸಮಸ್ಯೆ ನಿವಾರಿಸಿ ಕಾರ್ಖಾನೆ ಪ್ರಾರಂಭಿಸಿ ಎಂದು ಸರ್ಕಾರವನ್ನು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಒತ್ತಾಯಿಸಿದರು.

ಟೊಯೊಟಾ-ನೌಕರರ ಬಿಕ್ಕಟ್ಟು; ಜಿಲ್ಲಾಧಿಕಾರಿಗೆ ಗಡುವು ನೀಡಿದ ರೈತ ಸಂಘಟೊಯೊಟಾ-ನೌಕರರ ಬಿಕ್ಕಟ್ಟು; ಜಿಲ್ಲಾಧಿಕಾರಿಗೆ ಗಡುವು ನೀಡಿದ ರೈತ ಸಂಘ

 ಕಂಪನಿ ಧೋರಣೆಗೆ ಕಾರ್ಮಿಕರ ಖಂಡನೆ

ಕಂಪನಿ ಧೋರಣೆಗೆ ಕಾರ್ಮಿಕರ ಖಂಡನೆ

ಅಶಿಸ್ತು ಆರೋಪ ಹೊರಿಸಿ ವಿಚಾರಣೆ ಕಾಯ್ದಿರಿಸುವಂತೆ ಅಮಾನತು ನೋಟೀಸ್ ಜಾರಿ ಮಾಡಿರುವ ಟಿಕೆಎಂ ನಡೆ ಮುಷ್ಕರ ನಿರತ ಕಾರ್ಮಿಕರನ್ನು ಇನ್ನಷ್ಟು ಕೆರಳಿಸಿದೆ. ಇದರಿಂದ ಕಂಪನಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಾಂಧವ್ಯ ಮತ್ತಷ್ಟು ಕುಸಿದಂತಾಗಿದೆ. ಕಂಪನಿ ಮೇಲಿಂದ ಮೇಲೆ ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದರೂ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ.

 ಮತ್ತೆ 20 ಮಂದಿ ಅಮಾನತು ಮಾಡಿದ ಕಂಪನಿ

ಮತ್ತೆ 20 ಮಂದಿ ಅಮಾನತು ಮಾಡಿದ ಕಂಪನಿ

ಇತ್ತ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಕಂಪನಿ ಮುಂದುವರೆಸಿದ್ದು, ಇದೀಗ ಮತ್ತೆ 20 ಮಂದಿ ಕಾರ್ಮಿಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ನ್ಯಾಯಯುತ ಹೋರಾಟ ನಡೆಸುತ್ತಿರುವ ಕಾರ್ಮಿಕರನ್ನು ದಮನ ಮಾಡಲು ಹೊರಟಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ನಡೆಯನ್ನು ಟಿ.ಕೆ.ಎಂ ಕಾರ್ಮಿಕರ ಸಂಘ ತೀವ್ರವಾಗಿ ಖಂಡಿಸಿದೆ.

ಮತ್ತೆ 20 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದ ಟೊಯೊಟಾಮತ್ತೆ 20 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದ ಟೊಯೊಟಾ

Recommended Video

Rohit ಹಾಗು Bumrah ಇಲ್ಲದಿದ್ದರೂ Team India ಸರಿಣಿ ಗೆದ್ದಿದ್ದು ಹೇಗೆ | Oneindia Kannada
 ನವೆಂಬರ್ 9ರಿಂದ ನಡೆಯುತ್ತಿರುವ ಧರಣಿ

ನವೆಂಬರ್ 9ರಿಂದ ನಡೆಯುತ್ತಿರುವ ಧರಣಿ

ಕೆಲ ಕಾರಣ ನೀಡಿ ಕಾರ್ಮಿಕರನ್ನು ಅಮಾನತಿನಲ್ಲಿಡಲಾಗಿದ್ದು ಲಾಕೌಟ್ ಘೋಷಿಸಿ ಕಾರ್ಮಿಕರನ್ನು ಹೊರಗಿಡಲಾಗಿದೆ. ಈವರೆಗೆ ಒಟ್ಟು 60 ಕಾರ್ಮಿಕರನ್ನು ಅಮಾನತು ಮಾಡಿ ಕಂಪನಿ ಕಾರ್ಮಿಕರ ಧರಣಿ ಹತ್ತಿಕ್ಕಲು ಮುಂದಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಕಳೆದ ನ.9 ರಿಂದಲೂ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

English summary
Former MLA HC Balakrishna forced government to interfere in toyota workers protest and solve problem between toyota administration and workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X